ಬೆಂಗಳೂರು –
ಬೆಂಗಳೂರಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ BJP ಪಕ್ಷದ ಮಹತ್ವದ ಸಭೆ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಾಧ್ಯಕ್ಷರು,ಮಾಜಿ ಶಾಸಕರು,ಮೇಯರ್ ಉಪಮೇಯರ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿ…..ಹಲವಾರು ವಿಷಯಗಳ ಕುರಿತಂತೆ ಮಹತ್ವದ ಚರ್ಚೆ ಟಾಸ್ಕ್…..
ಬೆಂಗಳೂರಿನಲ್ಲಿ ಭಾರತೀಯ ಜನತಾ ಪಕ್ಷದ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕೋರ್ ಕಮೀಟಿ ಸಭೆ ನಡೆಯಿತು. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರ ನೇತ್ರತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ವಿಧಾನ ಪರಿಷತ್ ಚುನಾವಣೆ ಸೇರಿದಂತೆ ಮುಂಬರುವ ಹಲವಾರು ಚುನಾವಣೆ ಗಳು ಮತ್ತು ಪಕ್ಷದ ಸಂಘಟನೆ ಸೇರಿದಂತೆ ಹಲವಾರು ವಿಚಾರಗಳ ಕುರಿತಂತೆ ಕೋರ್ ಕಮೀಟಿ ಸಭೆಯಲ್ಲಿ ಚರ್ಚೆಯನ್ನು ಮಾಡಲಾಯಿತು.
ಪ್ರಮುಖವಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ದಲ್ಲಿನ ಪಕ್ಷದ ಸಂಘಟನೆ ಹಾಗೂ ಇತರೆ ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಗಂಭೀರವಾಗಿ ಚರ್ಚೆಯನ್ನು ಮಾಡಲಾಯಿತು.ಹಾಗೆ ಮುಂಬರುವ ಎಲ್ಲಾ ಚುನಾವಣೆಗಳ ಹಾಗೆ ಸಂಘಟನೆಯ ವಿಚಾರದಲ್ಲಿ ಸ್ಥಳೀಯ ನಾಯಕರಿಗೆ ಪಕ್ಷದ ವರಿಷ್ಠರು ಟಾಸ್ಕ್ ನೀಡಿದ್ದಾರೆ.ಈ ಒಂದು ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ,ಮಾಜಿ ಶಾಸಕರಾದ ಸೀಮಾ ಮಸೂತಿ,ಅಮೃತ ದೇಸಾಯಿ,ಅಶೋಕ ಕಾಟವೆ,
ಮಹಾನಗರ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ,ಮೇಯರ್ ಜ್ಯೋತಿ ಪಾಟೀಲ್,ಉಪಮೇಯರ್ ಸಂತೋಷ ಚವ್ಹಾಣ,ಪಾಲಿಕೆಯ ಸದಸ್ಯರಾದ ಶಿವು ಹಿರೇಮಠ,ವಿಜಯಾನಂದ ಶೆಟ್ಟಿ,ಶಿವು ಮೆಣಸಿನಕಾಯಿ,ಶಂಕರ ಶೆಳಕೆ,ಇನ್ನೂ ಶಿಸ್ತು ಸಮಿತಿಯ ಅಧ್ಯಕ್ಷರಾದ ಲಿಂಗರಾಜ ಪಾಟೀಲ,ಮಹೇಂದ್ರ ಕೌತಾಳ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಘಟನಾತ್ಮಕ ವಿಷಯಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ಮಾರ್ಗದರ್ಶನ ನೀಡಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..



