ಬೆಂಗಳೂರು –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಕ್ಷೇತ್ರಗಳನ್ನು ಪುನಃ ವಿಂಗಡನೆ ಮಾಡಲಾಗಿದೆ.

ರಾಜ್ಯ ಸರ್ಕಾರ ವಾರ್ಡ್ ಗಳನ್ನು ಮತ್ತೆ ಪುನಃ ವಿಂಗಡನೆ ಮಾಡಿ ಹೊಸದಾಗಿ ಆದೇಶವನ್ನು ಈಗ ಹೊರಡಿಸಲಾಗಿದೆ.


ಹೌದು ಕೆಲ ಗೊಂದಲ ತಾಂತ್ರಿಕ ಸಮಸ್ಯೆ ಮತ್ತು ವಾರ್ಡ್ ಗಳ ವಿಂಗಡನೆಯ ಗೊಂದಲದ ನಡುವೆ ಈಗ ರಾಜ್ಯ ಸರ್ಕಾರ ಹೊಸದಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ 82 ವಾರ್ಡ್ ಗಳನ್ನು ಮಾಡಿ ಕರ್ನಾಟಕ ರಾಜ್ಯ ಪತ್ರದಲ್ಲಿ ಆದೇಶವನ್ನು ಹೊರಡಿಸಿದೆ.
















ಹೀಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ವಾರ್ಡ್ ಗಳನ್ನು ಪುನಃ ವಿಂಗಡನೆ ಮಾಡಿ ರಾಜ್ಯ ಪತ್ರದಲ್ಲಿ ಪ್ರಕಟ ಮಾಡಿದ್ದು ಈಗಲಾದರೂ ಪಾಲಿಕೆಗೆ ಚುನಾವಣೆ ಆಗುತ್ತದೆನಾ ಮತ್ತೆ ಈ ಒಂದು ಪುನಃ ವಿಂಗಡನೆ ಮೇಲೆ ಯಾರಾದರೂ ನ್ಯಾಯಾಲಯ ಮೆಟ್ಟಿಲೇರುತ್ತಾರೆ ಎಂಬುದನ್ನು ಕಾದು ನೋಡಬೇಕು.