ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ನಿರ್ಮಾಣವಾಗಲಿದೆ ಹೊಸ ಸಭಾಭವನ ರವಿವಾರ ನಡೆಯಲಿದೆ ಭೂಮಿ ಪೂಜೆ ಸಮಾರಂಭಕ್ಕೆ ಸರ್ವರಿಗೂ ಸ್ವಾಗತ ಕೋರಿದ್ದಾರೆ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಹೊಸದಾಗಿ ಸಭಾಭವನ ಮತ್ತು ಕೌನ್ಸಿಲ್ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. 45 ಕೋಟಿ ರೂಪಾಯಿ ವೆಚ್ಚದಲ್ಲಿ ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಕಚೇರಿಯ ಆವರಣದಲ್ಲಿ ನೂತನ ಸಭಾಭವನ ಮತ್ತು ಕೌನ್ಸಿಲ್ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ.
ಮಾರ್ಚ್ 10 ರಂದು ಈ ಒಂದು ನೂತನ ಕಾಮಗಾರಿಗೆ ಭೂಮಿಪೂಜಾ ಕಾರ್ಯಕ್ರಮ ನಡೆಯಲಿದೆ.ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರು ಹೊಸದಾಗಿ ಆಯುಕ್ತರಾಗಿ ಅಧಿಕಾರವನ್ನು ವಹಿಸಿಕೊಂಡ ನಂತರ ಪಾಲಿಕೆಗೆ ಸರಿಯಾದ ಸಭಾಭವನ ವ್ಯವಸ್ಥೆ ಇಲ್ಲದ ಕಾರಣ ಕ್ಕಾಗಿ ಸೂಕ್ತವಾದ ಪ್ಲಾನ್ ರೂಪಿಸಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಈ ಕುರಿತಂತೆ ಚರ್ಚೆ ಯನ್ನು ಮಾಡಿ ರೂಪರೇಷೆಯನ್ನು ಮಾಡಿದ್ದಾರೆ.
ಹೀಗಾಗಿ ಮಾರ್ಚ್ 10 ರಂದು ಮಧ್ಯಾಹ್ನ ನೂತನ ಸಭಾಭವನಕ್ಕೆ ಶಂಖು ಸ್ಥಾಪನೆ ಯೊಂದಿಗೆ ಭೂಮಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರು ಸೇರಿದಂತೆ ಪಾಲಿಕೆಯ ಸದಸ್ಯರು ನಿಗಮ ಮಂಡಳಿಯ ಸರ್ವ ಸದಸ್ಯರು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ
ಸರ್ವರಿಗೂ ಈ ಒಂದು ಕಾರ್ಯಕ್ರಮಕ್ಕೆ ಸ್ವಾಗತವನ್ನು ಪಾಲಿಕೆಯ ಆಯುಕ್ತರಾಗಿ ಡಾ ಈಶ್ವರ ಉಳ್ಳಾಗಡ್ಡಿಯವರು ಕೋರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..