ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಮಹಾತ್ಮ ಗಾಂಧಿಜೀಯವರ ಹುತಾತ್ಮ ದಿನಾಚರಣೆ – ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಉಪಮೇಯರ್ ಸಂತೋಷ ಚವ್ಹಾಣ,ಆಯುಕ್ತ ಡಾ ರುದ್ರೇಶ ಘಾಳಿ…..ಗೌರವ ನಮನ ಸಲ್ಲಿಕೆ…..
ಸತ್ಯ ಮತ್ತು ಅಹಿಂಸೆಯ ಮೂಲಕ ಜಗತ್ತಿಗೇ ಮಾದರಿಯಾದ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಹುತಾತ್ಮ ದಿನಾಚರಣೆ ಯನ್ನು ಹುಬ್ಬಳ್ಳಿಯಲ್ಲೂ ಆಚರಣೆ ಮಾಡಲಾಯಿತು.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಹುತಾತ್ಮ ದಿನಾಚರಣೆ ಅಂಗವಾಗಿ ಕಿಮ್ಸ್ ಆವರಣದಲ್ಲಿರುವ ಗಾಂಧಿಜೀಯವರ ಪ್ರತಿಮೆಗೆ ಉಪಮಹಾಪೌರರಾದ ಸಂತೋಷ ಚವ್ಹಾಣ ಆಯುಕ್ತ ರಾದ ಡಾ ರುದ್ರೇಶ ಘಾಳಿಯವರು ಗಾಂಧಿಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸ್ಮರಿಸ ಲಾಯಿತು.
ಈ ಒಂದು ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರಾದ ರುದ್ರೇಶ ಘಾಳಿ ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ ಸವಣೂರು ವಲಯ ಸಹಾಯಕ ಆಯುಕ್ತರಾದ ಶ್ರೀಮತಿ ಭಾಗ್ಯಶ್ರೀ ಹುಗ್ಗಿ ,ತೋಟಗಾರಿಕೆ ಇಲಾಖೆಯ ಮುಖ್ಯ ಇಂಜಿನಿಯರ್ ಫೈರೋಜ್, ಹಾಗೂ ಪಾಲಿಕೆಯ ಸಮಸ್ತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……



