ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದಲ್ಲಿ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದ ಅಭ್ಯರ್ಥಿ ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿಯವರ ಅಬ್ಬರ ಜೋರಾಗಿದೆ.ಹಾಲಿ ಶಾಸಕರ ನಡೆಯಿಂದ ಬೇಸತ್ತಿರುವ ಕ್ಷೇತ್ರದ ಮತದಾರರು ವೀರಭದ್ರಪ್ಪ ಹಾಲರವಿ ಅವರಿಗೆ ಉತ್ತಮವಾದ ಜನ ಬೆಂಬಲ ವನ್ನು ನೀಡುತ್ತಿದ್ದಾರೆ
ಕ್ಷೇತ್ರದಲ್ಲಿ ಬಿಡುವಿಲ್ಲದೆ ಸುತ್ತಾಡುತ್ತಿರುವ ಹಾಲರವಿ ಅವರಿಗೆ ಸಾಕಷ್ಟು ಪ್ರಮಾಣದಲ್ಲಿ ಜನ ಬೆಂಬಲವು ಮತದಾರರಿಂದ ಸಿಗುತ್ತಿದ್ದು ವಾರ್ಡ್ ನಂ 77ರಲ್ಲಿ ಬರತಕ್ಕಂತ ಇಬ್ರಾಹಿಮಪುರ ಓಣಿ, ರಜಾಟೌನ, ಗೌಸಿಯಾನಗರ,ಅವಲಕ್ಕಿ ಫ್ಯಾಕ್ಟರಿ,ಅಲ್ತಾಫನಗರ ಎನ್ ಎನ್.ಎ. ನಗರ ಇಸ್ಲಾಂಪೂರ ಮಾವನೂರ ರೋಡ್ ಸೇರಿದಂತೆ ಹಲವೆಡೆ ಅಬ್ಬರದ ಪ್ರಚಾರವನ್ನು ಮಾಡಿದರು
ಈ ಒಂದು ಸಮಯದಲ್ಲಿ ಸಲೀಮ ಕುಡಚಿ, ಜಮೀರ ಅತ್ತಾರ,ಶಂಕರ ಪವಾರ,ಜಯರಾಮ ತಿಮ್ಮಸಂದ್ರಂ,ಸಲ್ಮಾ ಆಪಾ, ಕರೀಮ ಕೊಂಚ ಗೇರಿ, ಇನಾಯತ್ ಹೆಬ್ಬಳ್ಳಿ, ಸಲೀಮ ಮುಜಾ ವರ, ಮಧು ಆವಾದ, ಶಾರುಖ ಬೇಪಾರಿ, ತುಕಾರಾಮ ನಾಕೋಡ, ಇಮ್ರಾನ ಬಸರಕಟ್ಟಿ, ಇನ್ನೂ ಹಲವಾರು ಪಕ್ಷದ ಮಹಿಳಾ ಕಾರ್ಯಕರ್ತ ರು,ಯುವಕರು ಭಾಗವಹಿಸಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..