ಹುಬ್ಬಳ್ಳಿ –
ಹುಬ್ಬಳ್ಳಿಗೆ ಪೈ ಓವರ್ ಅವಶ್ಯಕತೆ ಇತ್ತಾ ರಾಜು ನಾಯಕವಾಡಿ ಪ್ರಶ್ನೆ – ಅವೈಜ್ಞಾನಿಕವಾದ ಪ್ರೈಓವರ್ ನಗರಕ್ಕೆ ಬೇಕಿತ್ತಾ ಕೇಳೊರಿಲ್ಲ ಹೇಳೊರಿಲ್ಲ ರಾಜು ನಾಯಕವಾಡಿ ವಾಗ್ದಾಳಿ
ವಾಣಿಜ್ಯ ನಗರಿ ಹುಬ್ಬಳ್ಳಿಗೆ ತನ್ನದೆಯಾದ ಗತವೈಭವ ಇದೆ ಉತ್ತರ ಕರ್ನಾಟಕದ ಹೆಬ್ಬಾ ಗಿಲು ಎಂದೇ ಕರೆಯಿಸಿಕೊಳ್ಳುವ ಹುಬ್ಬಳ್ಳಿ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ಎಂಬ ಮಾತು ನಗರದ ಚೆನ್ನಮ್ಮ ಸರ್ಕಲ್ ನ್ನು ನೋಡಿದರೆ ಕೇಳಿ ಬರುತ್ತದೆ ಕಂಡು ಬರುತ್ತದೆ.ನಗರಕ್ಕೆ ಮೇಲಿಂದ ಮೇಲೆ ಸಾಲು ಸಾಲಾಗಿ ಸಾಕಷ್ಟು ಯೋಜನೆಗಳು ಬಂದರು ಕೂಡಾ ಅಭಿವೃದ್ದಿ ವಿಚಾರದಲ್ಲಿ ಶೂನ್ಯ ಎಂಬ ಮಾತು ಸಧ್ಯ ನಗರವನ್ನು ಸುತ್ತಾಡಿದರೆ ಈ ಮಾತು ಸತ್ಯವೆನಿಸುತ್ತದೆ.
ಅದರಲ್ಲೂ ನಗರದ ಚೆನ್ಮಮ್ಮ ಸರ್ಕಲ್ ನಲ್ಲಿ ಸಧ್ಯ ಪೈ ಓವರ್ ನ್ನು ಮಾಡಲಾಗುತ್ತಿದ್ದು ಇದರ ಪರ್ಯಾಯವಾಗಿ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡಿರುವ ಕುರಿತಂತೆ ಸರ್ವೆ ಮಾಡಿ ತೆರುವು ಮಾಡಿ ಅಗಲಿಕರಣ ಮಾಡಿದ್ದರೆ ಅಂದ ಚೆಂದವಾಗಿ ಕಾಣುತ್ತಿತ್ತು ಆದರೆ ಅವೈಜ್ಞಾನಿಕ ವಾಗಿ ಸಧ್ಯ ಪೈಓವರ್ ನ್ನು ನಿರ್ಮಾಣ ಮಾಡ ಲಾಗುತ್ತಿದ್ದು ಈ ಒಂದು ವಿಚಾರ ಕುರಿತಂತೆ ಯುವ ಮುಖಂಡ ರಾಜು ನಾಯಕವಾಡಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಯಾವುದೇ ಒಂದು ಯೋಜನೆಯನ್ನು ಮಾಡುವ ಮುಂಚೆ ಸಾಧಕ ಬಾಧಕಗಳನ್ನು ಚರ್ಚೆ ಮಾಡ ಬೇಕು ಎಲ್ಲವನ್ನು ಪರಿಶೀಲಿಸಿ ಚರ್ಚೆ ಮಾಡಿದ ಮೇಲೆ ಯೋಜನೆಯನ್ನು ಅನುಷ್ಠಾನ ಮಾಡ ಬೇಕು ಹೀಗಿರುವಾಗ ಸಧ್ಯದ ಪೈ ಓವರ್ ಕಾಮ ಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು ಕಾಮಗಾರಿ ಹೇಗೆ ನಡೆಯುತ್ತಿದೆ ಹೇಗೆ ಮಾಡುತ್ತಿ ದ್ದಾರೆ ಚೆನ್ನಮ್ಮ ಸರ್ಕಲ್ ಗೆ ಅವಶ್ಯಕತೆ ಇತ್ತಾ ಬೇಕಿತ್ತಾ ಎಲ್ಲವನ್ನು ವಿಚಾರ ಮಾಡಬೇಕಾದ ಜನಪ್ರತಿನಿಧಿಗಳು ಯಾವುದನ್ನು ನೋಡದೆ ಮೌನವಾಗಿದ್ದಾರೆ
ಹೀಗಾಗಿ ಹುಬ್ಬಳ್ಳಿಗೆ ಮುಕುಟವಾಗಿರುವ ಚೆನ್ನಮ್ಮ ಸರ್ಕಲ್ ಗತವೈಭವವನ್ನು ಕಳೆದು ಕೊಳ್ಳುತ್ತಿದ್ದು ಮತ್ತಷ್ಟು ನಗರದ ಸೌಂದರ್ಯ ಹಾಳಾಗಲಿದೆ ಎಂಬೊದು ಇದರಿಂದ ಕಂಡು ಬರುತ್ತಿದೆ ಎಂದು ರಾಜು ನಾಯಕವಾಡಿ ಹೇಳಿದ್ದಾರೆ.ಇದನ್ನು ನೋಡದರೆ ಜನಪ್ರತಿನಿ ಧಿಗಳ ವಿಫಲತೆ ಎದ್ದು ಕಾಣುತ್ತಿದ್ದು ಈ ಕೂಡಲೇ ಇದನ್ನು ಒಮ್ಮೆ ಪರಿಶೀಲನೆ ಮಾಡುವಂತೆ ಒತ್ತಾಯವನ್ನು ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..