ವಿಜಯನಗರ –
ಸಾಮಾನ್ಯವಾಗಿ ಗಣರಾಜ್ಯೋತ್ಸವವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಣೆ ಮಾಡುತ್ತಾರೆ.ಹೌದು ಕೆಲವರು ಅಂದ ಚೆಂದದ ಡ್ರೇಸ್ ಗಳನ್ನು ಹಾಕಿಕೊಂಡು ಧ್ವಜಾರೋಹನ ಮಾಡುತ್ತಾ ಒಂದಿಷ್ಟು ಪೊಟೊಗಳನ್ನು ಫೇಸ್ ಬುಕ್ ವಾಟ್ಸ್ ಆಪ್ ಗೆ ಹಾಕಿದರೆ ಇತ್ತ ಇನ್ನೂ ಕೆಲವರು ಊರುರು ಸುತ್ತಾಡಿಕೊಂಡು ಪ್ಲಾಗ್ ಹಾರಿಸಿ ಚುರುಮರಿ ತಿಂದು ಮನಗೆ ಬಂದರೆ ರಾಷ್ಟ್ರೀಯ ಹಬ್ಬದ ಆಚರಣೆ ಕಾರ್ಯ ಮುಗಿ ಯಿತು
ಹೀಗಿರುವಾಗ ಇಲ್ಲೊಬ್ಬ ಸಾಮಾನ್ಯ ವ್ಯಕ್ತಿ ಈ ಒಂದು ಗಣರಾಜ್ಯೋತ್ಸವವನ್ನು ತುಂಬಾ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ. ಹೌದು ಎಳನೀರು ಮಾರಾಟ ಮಾಡುವ ಯುವಕನೊರ್ವ ಮಕ್ಕಳಿಗೆ ಸ್ಲೇಟ್, ನೋಟ್ ಬುಕ್ ವಿತರಣೆ ಮಾಡುವ ಮೂಲಕ ಗಣ ರಾಜ್ಯೋತ್ಸವವನ್ನು ಆಚರಣೆ ಮಾಡಿ ಈಗ ಮಾದರಿಯಾಗಿದ್ದಾನೆ.
ಹೊಸಪೇಟೆ ನಗರದ ಕಾಲೇಜು ರಸ್ತೆಯಲ್ಲಿ ಎಳನೀರು ಮಾರಾಟ ಮಾಡುವ ಹುಲುಗಪ್ಪ ಎಂಬುವರು ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತವಾಗಿ ಸ್ಲೇಟ್, ನೋಟ್ ಬುಕ್‌ಗಳನ್ನು ವಿತರಿಸಿದ್ದಾರೆ.ತಾಲ್ಲೂಕಿನ ಕಮ ಲಾಪುರದ ಜೈಭೀಮ್ ನಗರದ ಶಾಲೆಯಲ್ಲಿ 100 ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಲೇಟ್, ನೋಟ್ ಬುಕ್‌ಗಳನ್ನು ಹಂಚಿದರು ನನಗಂತೂ ಓದಲು ಸಾಧ್ಯವಾಗಿಲ್ಲ ಓದುವ ಮಕ್ಕಳಿಗೆ ನನ್ನಿಂದ ಸಣ್ಣ ಕೊಡುಗೆ ಕೊಡಬೇಕೆಂದು ಎಳನೀರು ಮಾರಾ ಟದಿಂದ ಉಳಿತಾಯ ಮಾಡಿದ ಹಣದಿಂದ ಸ್ಲೇಟ್, ನೋಟ್‌ಬುಕ್‌ಗಳನ್ನು ವಿತರಿಸಿರುವೆ’ ಎಂದು ಹುಲುಗಪ್ಪ ಹೇಳಿದರು.
ಸುದ್ದಿ ಸಂತೆ ನ್ಯೂಸ್ ವಿಜಯನಗರ…..