ಧಾರವಾಡ –
ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಮಾನವೀಯತೆ ಮೆರೆದಿದ್ದಾರೆ ಹೌದು ಕಾರ್ಯಕ್ರಮ ವೊಂದನ್ನು ಮುಗಿಸಿಕೊಂಡು ಹೊರಟಿದ್ದ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಅಪಘಾತವೊಂದು ಸಂಭವಿಸಿತ್ತು
ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯೊಬ್ಬನ ರಕ್ಷಣೆಗೆ ಧಾವಿಸಿದ ಶಾಸಕ ವಿನಯ್ ಕುಲಕರ್ಣಿ ಆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.ವಿನಯ್ ಕುಲಕರ್ಣಿಯವರು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾ ರ್ಜುನ ಅವರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ವಾಪಸ್ ಹೋಗುತ್ತಿದ್ದ ಸಂದರ್ಭ ದಲ್ಲಿ ರಸ್ತೆಯಲ್ಲಿ ಅಪಘಾತವಾಗಿ ಗಾಯಾಳು ಒದ್ದಾಡುತ್ತಿದ್ದರು
ತಕ್ಷಣ ತಮ್ಮ ವಾಹನ ನಿಲ್ಲಿಸಿದ ಶಾಸಕ ವಿನಯ್ ಅವರು ಆ ಗಾಯಾಳುವಿನ ರಕ್ಷಣೆಗೆ ಧಾವಿಸಿ ದರು. ಕೂಡಲೇ ಸ್ಥಳಕ್ಕೆ ಅಂಬ್ಯುಲೆನ್ಸ್ ಕರೆಯಿಸಿ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……