ರಜತ್ ಉಳ್ಳಾಗಡ್ಡಿಮಠ ಗೆ ಬೆಂಬಲ ಘೋಷಣೆ ಮಾಡಿದ ನೂರಾರು ಪಾದ್ರಿಗಳು ಕ್ರೈಸ್ತ ಬಂಧುಗಳು – ಕ್ರಿಸ್ಮಸ್ ಹಬ್ಬಕ್ಕಾಗಿ ವಿಶೇಷ ಕಾರ್ಯಕ್ರಮದಲ್ಲಿ ನಾಳೆಯ ಬದಲಾವಣೆಗಾಗಿ ಯುವ ನಾಯಕನಿಗೆ ತುಂಬಿದರು ಹುಮ್ಮಸ್ಸು

Suddi Sante Desk
ರಜತ್ ಉಳ್ಳಾಗಡ್ಡಿಮಠ ಗೆ ಬೆಂಬಲ ಘೋಷಣೆ ಮಾಡಿದ ನೂರಾರು ಪಾದ್ರಿಗಳು ಕ್ರೈಸ್ತ ಬಂಧುಗಳು – ಕ್ರಿಸ್ಮಸ್ ಹಬ್ಬಕ್ಕಾಗಿ ವಿಶೇಷ ಕಾರ್ಯಕ್ರಮದಲ್ಲಿ ನಾಳೆಯ ಬದಲಾವಣೆಗಾಗಿ ಯುವ ನಾಯಕನಿಗೆ ತುಂಬಿದರು ಹುಮ್ಮಸ್ಸು

ಹುಬ್ಬಳ್ಳಿ  –

ಹುಬ್ಬಳ್ಳಿಯಲ್ಲಿ ಕಾಂಗ್ರೇಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರ ಮಿಂಚಿನ ಸಂಚಾರ ಮುಂದುವರೆದಿದೆ.ಒಂದು ಕಡೆಗೆ ಮನೆ ಮನಗೆ ರಜತ್ ಅಭಿಯಾನ ಮಾಡುತ್ತಿದ್ದರೆ ಮತ್ತೊಂದು ಕಡೆಗೆ ಕ್ರಿಸ್ಮಸ್ ಹಬ್ಬದ ಹಿನ್ನಲೆಯಲ್ಲಿ ಕ್ರೈಸ್ತ ಬಂಧುಗಳನ್ನು ಭೇಟಿಯಾಗಿ ಹಬ್ಬಕ್ಕಾಗಿ ವಿಶೇಷ ಉಡುಗೊರೆ ನೀಡಿ ಶುಭ ಹಾರೈಸುವ ಕಾರ್ಯಕ್ರಮ ಕೂಡಾ ನಡೆಯುತ್ತಿದೆ.

ಹೌದು ಕ್ರಿಸ್ಮಸ್ ಆಚರಣೆಯ ಹಿನ್ನಲೆಯಲ್ಲಿ ನಗರದ ಗದಗ ರಸ್ತೆಯಲ್ಲಿನ ಸೇಂಟ್ ಲೂಥರ್ನ್ ಚರ್ಚ್ ನಲ್ಲಿ ವಿಶೇಷವಾದ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾ ಯಿತ್ತು ನಾಳೆಯ ಸುಂದರ ಹುಬ್ಬಳ್ಳಿಗಾಗಿ  ಉತ್ತಮ ನಾಳೆಗಳಿಗಾಗಿ ಪ್ರಾರ್ಥಿಸಲು ಪಾದ್ರಿ ಗಳಿಗೆ ರಜತ್ ವಿನಂತಿ 30 ವರ್ಷಗಳಿಂದ ಹುಬ್ಬಳ್ಳಿ ಅಸಹಾಯಕವಾಗಿದೆ ಪಾದ್ರಿಗಳ ಸಭೆಯಲ್ಲಿ ರಜತ್ ಅಳಿಲು ತೋಡಿಕೊಂಡರು.

250 ಕ್ಕೂ ಹೆಚ್ಚು ಪಾದ್ರಿಗಳಿಗೆ ಉಡುಗೊರೆಗ ಳನ್ನು ವಿತರಿಸಿದ ಯುವ ನಾಯಕ ರಜತ್ ಹಬ್ಬದ ಶುಭಾಶಯಗಳೊಂದಿಗೆ ಶುಭ ಹಾರೈಸಿದರು. ರಜತ್ ಉಳ್ಳಾಗಡ್ಡಿ ಮಠ ಫೌಂಡೇಶನ್ ಮತ್ತು ಹುಬ್ಬಳ್ಳಿ ಪಾದ್ರಿಗಳು ಮತ್ತು ಸುವಾರ್ತಾಬೋ ಧಕರ ಫೆಲೋಶಿಪ್ ವತಿಯಿಂದ ಗದಗ ರಸ್ತೆಯ ಸೇಂಟ್ ಲೂಥರ್ನ್ ಚರ್ಚ್‌ನಲ್ಲಿ ಆಯೋಜಿಸಿದ್ದ ಯುನೈಟೆಡ್ ಕ್ರಿಸ್ಮಸ್ ಆಚರಣೆಯನ್ನು ವಿದ್ಯಾ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಕೇಕ್ ಕಟ್ ಮಾಡಿ ಸಭೆಗೆ ಚಾಲನೆ ನೀಡಿದರು.

ಇದೇ ವೇಳೆ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಜತ್ ‘30 ವರ್ಷಗಳಿಂದ ಹುಬ್ಬಳ್ಳಿ ಅಸಹಾಯಕವಾಗಿದೆ 3 ದಶಕಗಳಿಂದ  ವಿಧಾನಸೌಧದಲ್ಲಿ ಹುಬ್ಬಳ್ಳಿಯನ್ನು ಒಂದೇ ಪಕ್ಷದ ಒಬ್ಬರೇ ಪ್ರತಿನಿಧಿಸುತ್ತಿದ್ದಾರೆ, ಅವರು ಮುಖ್ಯ ಮಂತ್ರಿ, ವಿಧಾನ ಸಭೆಯ ಸಭಾನಾಯಕರು, ವಿರೋಧ ಪಕ್ಷದ ನಾಯಕರು, ವಿವಿಧ ಇಲಾಖೆ ಗಳ ಸಚಿವರಾಗುವ ಅವಕಾಶಗಳನ್ನು ಪಡೆದರು. ವಾಣಿಜ್ಯ ನಗರಿ, ಚೋಟಾ ಮುಂಬೈ, ಕರ್ನಾಟ ಕದ 2ನೇ ದೊಡ್ಡ ನಗರ ಎoದು ಕರೆಸಿಕೊಳ್ಳುವ  ನಾವು ಭಾರತದ ಉದ್ದಗಲಕ್ಕೂ ರೈಲ್ವೆ, ಸಾರಿಗೆ ಮತ್ತು ವಿಮಾನದ ಮೂಲಕ ಸಂಪರ್ಕವನ್ನು ಹೊಂದಿದ್ದೇವೆ ಆದರೂ ಉದ್ಯೋಗಾವಕಾಶಗ ಳನ್ನು ಸೃಷ್ಟಿಸುವ ಒಂದೇ ಒಂದು ಬಹುರಾಷ್ಟ್ರೀಯ ಕಂಪನಿಯನ್ನು ತರುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದರು.

 

 

ಹುಬ್ಬಳ್ಳಿ ಏಕೆ  ವಿಶ್ವ ದರ್ಜೆಯ ನಗರವಾಗಿಲ್ಲ ಎಂದು ಜನರು ಕೇಳಬೇಕಾಗಿತ್ತು, ಆದರೆ ಉತ್ತಮ ಗುಣಮಟ್ಟದ ರಸ್ತೆ, ಸಮರ್ಪಕ ನೀರು, ಬೀದಿ ದೀಪ, ಸರಿಯಾದ ಚರಂಡಿಗಾಗಿ ಜನರು ಹೋರಾಟ ನಡೆಸುತ್ತಿದ್ದಾರೆ ಇದು ನಮ್ಮ ದುರಾ ದೃಷ್ಟ. ಸುಂದರ ಹುಬ್ಬಳ್ಳಿಗಾಗಿ, ಉತ್ತಮ ನಾಳೆಗ ಳಿಗಾಗಿ ಪ್ರಾರ್ಥಿಸಲು ವಿನಂತಿಸುತ್ತೇನೆ’ ಎoದು ಉಳ್ಳಾಗಡ್ಡಿಮಠ ಅವರು ಹೇಳಿದರು ಪಾದ್ರಿಗಳು ಕರ್ತನಾದ ಯೇಸುವನ್ನು ಪ್ರಾರ್ಥಿಸಿ ರಜತ್ ಉಳ್ಳಾಗಡ್ಡಿಮಠ ಅವರನ್ನು ಆಶೀರ್ವದಿಸಿ ಸನ್ಮಾ ನಿಸಿದರು ನಂತರ ರಜತ್ 250 ಕ್ಕೂ ಹೆಚ್ಚು ಪಾದ್ರಿ ಗಳಿಗೆ ಗೌರವಪೂರ್ವಕವಾಗಿ ಕ್ರಿಸ್ಮಸ್ ವಿಶೇಷ ಉಡುಗೊರೆಗಳನ್ನು ವಿತರಿಸಿದರು.

ಈ ಕಾರ್ಯ ಕ್ರಮದಲ್ಲಿ 59 ನೇ ವಾರ್ಡ್ ಪಾಲಿಕೆ ಸದಸ್ಯೆ ಸುವರ್ಣ ಕಲಕುಂಟ್ಲ, 59 ನೇ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ಯುಯೆಲ್ ಲುಂಜಾಲ್, ಬಿಜ್ಜಾ ಸೊಲೊಮನ್,ಪೆಂಡಮ್ ಡೇನಿಯಲ್, ಓಬುಲ್ ರಾವ್,ಪಿ.ಡೇವಿಡ್ಸನ್,ಎಸ್.ಜಿ.ಪೀಟರ್ ಸುಂದರ್ ರಾವ್, ಮಹೇಶ್ ಕುಮಾರ್ ಸೇರಿ ದಂತೆ ಹಲವರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದ ನಂತರ ಸಹ ಭೋಜನವನ್ನು ಏರ್ಪಡಿಸಲಾಗಿತ್ತು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.