ಬೆಂಗಳೂರು –
ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ ರಾಜ್ಯದ 287 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿರುವ ಅಂಶವ ನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಿದೆ.ಅಂತೆಯೇ 750 ಅನುದಾನ ರಹಿತ ಖಾಸಗಿ ಶಾಲೆಗಳು ಹಣಕಾಸು ಬಿಕ್ಕಟ್ಟಿ ನಿಂದಾಗಿ ಕಾಯಂ ಆಗಿ ಮುಚ್ಚಿವೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ರಾಜ್ಯ ವಿಧಾನ ಪರಿಷತ್‍ನಲ್ಲಿ ನೀಡಿದ ಅಂಕಿ ಅಂಶಗಳ ಪ್ರಕಾರ ರಾಜ್ಯದ 77 ಸಾವಿರ ಶಾಲೆಗಳ ಪೈಕಿ 50 ಸಾವಿರ ಸರ್ಕಾರಿ ಶಾಲೆಗಳಿವೆ. ಈ ಪೈಕಿ 285 ಪ್ರಾಥಮಿಕ ಶಾಲೆಗಳು ಮತ್ತು ಎರಡು ಪ್ರೌಢಶಾಲೆಗಳಲ್ಲಿ ಕಳೆದ ಮೂರು ವರ್ಷಗ ಳಿಂದ ಯಾವ ವಿದ್ಯಾರ್ಥಿಗಳ ದಾಖಲಾತಿಯೂ ಆಗಿಲ್ಲ.

ಕೋವಿಡ್-19 ಪರಿಣಾಮವಾಗಿ ಪೋಷಕರು ಹಣಕಾಸು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಖಾಸಗಿ ಶಾಲೆಗಳ ಬದಲಾಗಿ ಸರ್ಕಾರಿ ಶಾಲೆಗೆ ಹೆಚ್ಚು ದಾಖಲಿಸುತ್ತಿದ್ದಾರೆ ಎಂದು ಸರ್ಕಾರ ಹೇಳುತ್ತಾ ಬಂದಿತ್ತು. ಆದರೆ ಈ ಅಂಕಿ ಅಂಶಗಳು ಸರ್ಕಾರದ ಪ್ರತಿಪಾದನೆ ಯನ್ನು ಅಲ್ಲಗಳೆದಿವೆ.ಈ ಶಾಲೆಗಳಿರುವ ಪ್ರದೇಶಗಳಲ್ಲಿ ಹಲವು ಸಮಯದಿಂದ ಯಾವ ವಿದ್ಯಾರ್ಥಿಗಳೂ ಇರಲಿಲ್ಲ. ಸಾಂಕ್ರಾಮಿಕ ಕೇವಲ ಕಾಕತಾಳೀಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ಪ್ರತಿಕ್ರಿಯಿಸಿ ದ್ದಾರೆ.ಈ ಶಾಲೆಗಳನ್ನು ಮುಚ್ಚುವ ಅಥವಾ ಇತರ ಶಾಲೆಗಳ ಜತೆ ವಿಲೀನಗೊಳಿಸುವ ಯಾವ ಪ್ರಸ್ತಾವವೂ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶೂನ್ಯ ಪ್ರವೇಶಾತಿಯ ಗರಿಷ್ಠ ಶಾಲೆಗಳನ್ನು ಹೊಂದಿರುವ ಜಿಲ್ಲೆ ತುಮಕೂರು.ಇಲ್ಲಿ 48 ಶಾಲೆಗಳು ಯಾವುದೇ ವಿದ್ಯಾರ್ಥಿಗಳನ್ನು ಆಕರ್ಷಿಸಿಲ್ಲ.ಉಳಿದಂತೆ ಹಾಸನ ಮತ್ತು ಕಲ್ಬುರ್ಗಿ (ತಲಾ 26), ಬೀದರ್ (25), ಚಿಕ್ಕಬಳ್ಳಾಪುರ (18) ಹಾಗೂ ಚಾಮರಾಜನಗರ (13) ನಂತರದ ಸ್ಥಾನಗ ಳಲ್ಲಿವೆ.ಅಂತೆಯೇ 721 ಖಾಸಗಿ ಮತ್ತು 245 ಖಾಸಗಿ ಅನುದಾನರಹಿತ ಶಾಲೆಗಳು ಕಾಯಂ ಆಗಿ ಮುಚ್ಚಿವೆ. ಇದಕ್ಕೆ ಮುಖ್ಯವಾಗಿ ಹಣಕಾಸು ಸಮಸ್ಯೆ ಕಾರಣ ಎಂದು ಶಾಲೆಗಳ ಆಡಳಿತ ಮಂಡಳಿಯವರು ಹೇಳಿದ್ದಾರೆ.