ಬೆಂಗಳೂರು –
ಭಡ್ತಿ ವಿಚಾರದಲ್ಲಿ ಅನ್ಯಾಯವನ್ನು ಮಾಡುತ್ತಿರುವ ಇಲಾಖೆಯ ವಿರುದ್ದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುವ ಸೇವಾ ನಿರತ ಪದವೀದರ ಶಿಕ್ಷಕರು ಸಿಡಿದೆದ್ದಿದ್ದಾರೆ.ಏನೇಲ್ಲಾ ಪದವಿ ಮುಗಿಸಿದರು ಕೂಡಾ ಸಧ್ಯ ಹಿಂಬಡ್ತಿ ನೀಡಿ ಅನ್ಯಾಯವಾಗುತ್ತಿರುವ ವಿಚಾರ ಕುರಿತಂತೆ ಅಸಮಧಾನಗೊಂಡಿದ್ದಾರೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಪದವೀ ದರ ಶಿಕ್ಷಕರು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಸೇವಾ ನಿರತ ಪದವೀದರ ಶಿಕ್ಷಕರು ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಿಸು ತ್ತಿದ್ದು ಸಧ್ಯ ಇವರಿಗೆ ಹಿಂಬಡ್ತಿಯನ್ನು ನೀಡಲಾಗು ತ್ತಿದೆ. ಹೀಗಾಗಿ ಇದರಿಂದ ಅಸಮಾಧನಗೊಂಡಿರುವ ಪದವೀದರ ಶಿಕ್ಷಕರು 6 ,7,8 ನೇ ತರಗತಿ ಬಹಿಷ್ಕರಿ ಸಲು ನಿರ್ಧಾರವನ್ನು ಮಾಡಿದ್ದು ಅದಕ್ಕೂ ಪೂರ್ವ ಭಾವಿಯಾಗಿ ನಾಳೆ ರಾಜ್ಯಾದ್ಯಂತ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿನ ಬಿಇಓ ಅವರಿಗೆ ಸಾಂಕೇತಿಕವಾಗಿ ಮನವಿ ನೀಡಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯ ವನ್ನು ಮಾಡಲಾಗುತ್ತಿದೆ.
ಇದನ್ನು ಈಗಾಗಲೇ ಸರ್ವರೂ ತಿರ್ಮಾನಿಸಿ ಅಂತಿ ಮ ಮಾಡಿದ್ದಾರೆ.ಇದು ಕಳೆದ ಹತ್ತು ದಿನಗಳ ಹಿಂದೆ ಯೇ ನಡೆದ ವಿಚಾರ ಇನ್ನೂ ಹತ್ತು ದಿನಗಳಿಂದ ಈ ಒಂದು ವಿಚಾರ ತೀವ್ರವಾಗಿ ರಾಜ್ಯಾದ್ಯಂತ ಚರ್ಚೆ ಯಾಗುತ್ತಿದ್ದರೂ ಕೂಡಾ ನಾಳೆ ಬೆಳಗಾದರೆ ಒಂದು ಕಡೆಗೆ ಪ್ರತಿಭಟನೆ ಮತ್ತೊಂದು ಕಡೆ ಯಾವುದೇ ಗೊಂದಲ ಬೇಡ ಇದೊಂದು ರಾಜ್ಯದ ದೊಡ್ಡ ಸಮಸ್ಯೆ ಎನ್ನತ್ತಾ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಮತ್ತೊಂದು ಗೊಂದ ಲದ ಸಂದೇಶವನ್ನು ಸಂಘವು ಪ್ರಕಟ ಮಾಡಿದ್ದಾರೆ.

ಎಲ್ಲವೂ ಸರಿಯಾದ ವಿಚಾರ ಆದರೆ ಬೆಳಗಾದರೆ ಒಂದು ಕಡೆಗೆ ತಮ್ಮ ಹಕ್ಕಿಗಾಗಿ ಸೇವಾನಿರತ ಪದವೀ ಧರರ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಮತ್ತೊಂದು ಕಡೆಗೆ ಇವರ ಸಂದೇಶ ಯಾಕೇ ಇಂತಹ ಗೊಂದ ಲದ ವಾತಾವರಣವನ್ನು ಯಾಕೇ ನಿರ್ಮಾಣ ಮಾಡಿ ದ್ದಾರೆ.ಹೋರಾಟ ಕುರಿತಂತೆ ಕಳೆದ ಹತ್ತು ದಿನಗಳಿಂ ದ ಚರ್ಚೆಯಾಗುತ್ತಿದೆ ಈವರೆಗೆ ಸುಮ್ಮನಿದ್ದ ಕರ್ನಾ ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವ ರು ಬೆಂಗಳೂರಿನಲ್ಲಿ ಈಕುರಿತಂತೆ ಶಿಕ್ಷಣ ಸಚಿವರ ನ್ನು ಇಲ್ಲವೇ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ಮಾಡಬಹುದಿತ್ತು ಆದರೆ ಏಕಾ ಏಕಿಯಾಗಿ ಸಂಜೆಯಾಗುತ್ತಿದ್ತಂತೆ ಸಂಘದ ಪರವಾ ಗಿ ಒಂದು ಸಂದೇಶ ಹಾಕಿದ್ದಾರೆ.ಇದರಿಂದ ನಾಳೆಯ ಪ್ರತಿಭಟನೆಯನ್ನು ದಾರಿ ತಪ್ಪಿಸುವ ಹುನ್ನಾರ ಎಂಬ ಮಾತುಗಳು ರಾಜ್ಯದ ಮೂಲೆ ಮೂಲೆಗಳಿಂದ ಕೇಳಿ ಬರುತ್ತಿವೆ.

ಹಾಗೇನಾದರೂ ಇದ್ದರೆ ಮನಸ್ಸು ಮಾಡಿದ್ದರೆ ಶಿಕ್ಷಣ ಸಚಿವರನ್ನು ಭೇಟಿಯಾಗಿ ಚರ್ಚೆ ಮಾಡಬಹುದಿತ್ತು ಆದರೆ ಯಾಕೇ ಮೌನವಾಗಿದ್ದು ಹೀಗೆ ಸಂದೇಶ ಕಳಿಸಿದ್ದಾರೆ ಏನೋ. ಇನ್ನೂ ನಾಳೆಯ ಸೇವಾ ನಿರತ ಪದವೀಧರ ಶಿಕ್ಷಕರ ಹೋರಾಟಕ್ಕೆ ರಾಜ್ಯದ ಗ್ರಾಮೀ ಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯಶ ಘಟಕ ಧಾರವಾಡ ಇವರು ಕೂಡಾ ಬೆಂಬ ಲವನ್ನು ಸೂಚಿಸಿದ್ದಾರೆ.