ವಿಜಯಪುರ –
ಗ್ರಾಮ ಪಂಚಾಯತ ಅಖಾಡಕ್ಕೇ ದಂಪತಿಗಳು ಸ್ಪರ್ಧೆ ಮಾಡಿದ್ದಾರೆ. ಹೌದು ಪತಿ ಒಂದು ವಾರ್ಡ್ ಗೆ –ಪತ್ನಿ ಮತ್ತೊಂದು ವಾರ್ಡ್ ಗೆ ಹೀಗೆ ಇಬ್ಬರೂ ಅಖಾಡಕ್ಕಿಳಿದ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ.
ಒಂದೇ ಬಾರಿ ಅಖಾಡಕ್ಕೆ ದಂಪತಿಗಳಿಬ್ಬರೂ ಕಣಕ್ಕೇ ಇಳಿದಿದ್ದಾರೆ . ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ ಬಿ ಗ್ರಾಮ ಪಂಚಾಯತಿಗೆ ದಂಪತಿಗಳಿಬ್ಬರು ಸ್ಪರ್ಧೆಯನ್ನು ಮಾಡಿದ್ದಾರೆ .
ಊರಲ್ಲಿ ಟೈಲರಿಂಗ್ ಮಾಡಿಕೊಂಡಿದ್ದ ಹುಸೇನಸಾಬ್ ಒಂದು ವಾರ್ಡ್ ಗೆ ಸ್ಪರ್ಧೆ ಮಾಡಿದ್ದರೇ ಇತ್ತ ಆತನ ಪತ್ನಿ ಮತ್ತೊಂದು ವಾರ್ಡ್ ಗೆ ಸ್ಪರ್ಧೆ ಮಾಡಿದ್ದಾರೆ. ಪಂಚಾಯತಿ ಮಾಜಿ ಸದಸ್ಯನಿಂದ ಪತ್ನಿಯೊಂದಿಗೆ ಮತ್ತೊಮ್ಮೆ ಅದೃಷ್ಠ ಪರೀಕ್ಷೆಗೆ ಹುಸೇನಸಬಾನ ಅವರ ಪತ್ನಿ ಸ್ಪರ್ಧೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳದ ಪಿ ಬಿ ಗ್ರಾಮ ಪಂಚಾಯತಿನಲ್ಲಿ ಇಂಥಹದೊಂದು ದಂಪತಿಗಳ ಸ್ಪರ್ಧೆ ನಡೆದಿದೆ.
ಸಂಕನಾಳ ಗ್ರಾಮದ ಹುಸೇನಸಾಬ್ ಮುಲ್ಲಾ ಹಾಗೂ ಆತನ ಪತ್ನಿ ಮಾಲನಬಿ ಮುಲ್ಲಾ ಅಭ್ಯರ್ಥಿಗಳಾಗಿದ್ದಾರೆ. .3ನೇ ವಾರ್ಡ್ ನ ಸಾಮಾನ್ಯ ಅಭ್ಯರ್ಥಿಯಾಗಿ ಹುಸೇನಸಾಬ್ ಅಖಾಡಕ್ಕಿಳಿದರೆ ಇನ್ನೂ ಇತ್ತ 3ನೇ ವಾರ್ಡ್ ನ ಹಿಂದುಳಿವ ವರ್ಗ ಅ ಮಹಿಳಾ ಸ್ಥಾನಕ್ಕೆ ಪತ್ನಿ ಮಾಲನಬಿ ಮುಲ್ಲಾ ಸ್ಪರ್ಧೆ ಮಾಡಿದ್ದಾರೆ. ಗಂಡ ಹೆಂಡತಿ ಇಬ್ಬರು ಪಂಚಾಯತ ಗದ್ದುಗೆ ಏರಲು ಏನೋ ಹುಮ್ಮಸ್ಸಿನಿಂದ ಅಖಾಡಕ್ಕಿಳಿದ್ದಾರೆ.
ಇವೆಲ್ಲದರ ನಡುವೆ ಸಧ್ಯ ಇಬ್ಬರಿಗೂ 66 ವಯಸ್ಸು ಈ ಇಳಿ ವಯಸ್ಸಿನಲ್ಲಿಯೂ ಜನಸೇವೆ ಮಾಡುವ ಆಸೆ ಇಟ್ಟುಕೊಂಡು ದಂಪತಿಗಳಿಬ್ಬರೂ ಸ್ಪರ್ಧೆ ಮಾಡಿ ಅಖಾಡಕ್ಕಿಳಿದ್ದು ಮೆಚ್ಚುವ ಸಂಗತಿ. ಇದರೊಂದಿಗೆ ಗ್ರಾಮದಲ್ಲೂ ಕೂಡಾ ಇವರಿಬ್ಬರೂ ಉತ್ತಮವಾದ ಸ್ಪಂದನೆ ಕಂಡು ಬಂದಿದ್ದು ಜನಬೆಂಬಲದೊಂದಿಗೆ ಸ್ಪರ್ಧೆ ಮಾಡಿದ್ದು ಸಧ್ಯ ದಂಪತಿಗಳ ಮೊಗದಲ್ಲಿ ಗೆಲ್ಲುವ ಉತ್ಸಾಹ ಕಂಡು ಬರುತ್ತಿದ್ದು ಅಂತಿಮವಾಗಿ ಮತದಾರ ಪ್ರಭು ಯಾರನ್ನು ಪಂಚಾಯತ ಗದ್ದುಗೆಗೆ ಕಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕು,