ಬೆಂಗಳೂರು –
ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರ ವಿರುದ್ದ ಪತಿ ನಿತಿನ್ ಸುಭಾಷ್ ದೂರು ನೀಡಿದ್ದಾರೆ. ಹೌದು ತಮ್ಮ ಪೊಲೀಸ್ ಪವರ್ ಬಳಸಿಕೊಂಡು ಪತಿ ನಿತೀನ್ ಸುಭಾಷ್ ಯೋಲಾ ಮಗನನ್ನು ಭೇಟಿ ಯಾಗದಂತೆ ತಡೆಯುತ್ತಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಪತ್ನಿ ವಿರುದ್ದ ಈಗ ದೂರನ್ನು ನೀಡಿ ದ್ದಾರೆ.ದೂರಿನ ಹಿನ್ನಲೆಯಲ್ಲಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಮಿಷನರ್ ಪ್ರಿಯಾಂಕ್ ಕನೂಂಗು ಅವರು ರಾಜ್ಯದ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದಾರೆ.

ವರ್ತಿಕಾ ಕಟಿಯಾರ್ ಅವರು ಬೆಂಗಳೂರಿನ ಕರ್ನಾಟಕ ರಾಜ್ಯ ರಿಸರ್ವ್ ಪೊಲೀಸ್ ಸಂಶೋಧ ನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಅತ್ತ ಪತಿ ಅವರು ದೆಹಲಿಯಲ್ಲಿ ಕೇಂದ್ರ ವಿದೇ ಶಾಂಗ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಐಎಫ್ಎಸ್ ಅಧಿಕಾರಿ ಪತಿ ನಿತೀನ್ ಯೋಲಾ ಅವರ ನಡುವೆ ಫ್ಯಾಮಿಲಿ ಕೋರ್ಟ್ ನಲ್ಲಿ ವ್ಯಾಜ್ಯ ನಡೆಯುತ್ತಿದೆ.

ಕಳೆದ ಫೆಬ್ರವರಿಯಲ್ಲಿ ಕಟಿಯಾರ್ ಅವರು ಪತಿ ಮತ್ತು ಅವರ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದು ಮದುವೆಯ ವೇಳೆ 35 ಲಕ್ಷ ರೂ. ಹಣ ಪಡೆದು, ತಮ್ಮ ಸಂಬಳದ ಹಣವನ್ನೂ ಪಡೆದು ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿದ್ದರು.
ಹೀಗಿರುವಾಗ,ನಿತಿನ್ ಗೆ ತಮ್ಮ ಮಗ ಅಯಾನ್ ಯೋಲಾನನ್ನು ಭೇಟಿ ಮಾಡಲು ಫ್ಯಾಮಿಲಿ ಕೋರ್ಟ್ 2020 ರ ನವೆಂಬರ್ 14 ರ ಆದೇಶದಡಿ ಅವಕಾಶ ನೀಡಿದ್ದರೂ, ಕಟಿಯಾರ್ ಸುಳ್ಳು ಕೇಸು ಹಾಕುವುದಾಗಿ ಬೆದರಿಸುತ್ತಾ ಮಗುವನ್ನು ನೋಡಲು ಬಿಡುತ್ತಿಲ್ಲ ಎಂದು ನಿತೀನ್ ಮಕ್ಕಳ ಆಯೋಗಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ದೂರನ್ನು ಪರಿಶೀಲಿಸಿರುವ ಆಯೋಗ, ಮಗುವು ಇಬ್ಬರೂ ಪಾಲಕರಿಂದ ಪ್ರೀತಿ ಪಡೆದು ಆರೋಗ್ಯಕರವಾಗಿ ಬೆಳೆಯುವ ಅವಕಾಶದಿಂದ ವಂಚಿತವಾಗಿರುವ ಪರಿಸ್ಥಿತಿ ಗಮನಕ್ಕೆ ಬಂದಿದೆ.ಆದ್ದರಿಂದ ವರ್ತಿಕಾ ಕಟಿಯಾರ್ ವಿರುದ್ಧ ಅಗತ್ಯ ಕ್ರಮ ಜರುಗಿಸಿ ಎಂದು ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಮಕ್ಕಳ ಆಯೋ ಗ ಮನವಿ ಮಾಡಿದೆ.