ಚಾಮರಾಜನಗರ –
ಗ್ರಾಮ ಪಂಚಾಯತ ಎರಡನೇ ಹಂತದ ಚುನಾವಣೆಯ ಕಾವು ರಂಗೇರುತ್ತಿದೆ. ಈಗಾಗಲೇ ಒಂದನೇಯ ಹಂತದ ಚುನಾವಣೆ ಮುಗಿದಿದ್ದು ಈಗ ಎರಡನೇಯ ಹಂತದ ಚುನಾವಣೆ ಕಾವು ಜೋರಾಗಿದೆ.
ಕಣದಲ್ಲಿದ್ದ ಅಭ್ಯರ್ಥಿಗಳು ನಾ ಮುಂದು ನೀ ಮುಂದು ಎನ್ನುತ್ತಾ ಅಬ್ಬರದ ಪ್ರಚಾರವನ್ನು ಮಾಡ್ತಾ ಇದ್ದಾರೆ. ಇನ್ನೂ ಇವೆಲ್ಲದರ ನಡುವೆ ಪತ್ನಿಯ ಗೆಲುವಿಗೆ ಜೋಳಿಗೆ ಹಿಡಿದು ಮತ ಭೀಕ್ಷೆಗೆ ಇಳಿದಿದ್ದಾರೆ ಪತಿರಾಯರೊಬ್ಬರು. ಹೌದು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾಂಚಳ್ಳಿ ಗ್ರಾಮದಲ್ಲಿ ಬ್ಯಾಂಗೆಗೌಡ ಎಂಬುವರು ತಮ್ಮ ಪತ್ನಿಯ ಪರವಾಗಿ ವಿಭಿನ್ನವಾಗಿ ಮತ ಭೀಕ್ಷೆಯನ್ನು ಬೇಡುತ್ತಿದ್ದಾರೆ.
ಕೊರಳಿಗೆ ಪತ್ನಿಯ ಭಿತ್ತಿ ಪತ್ರವನ್ನು ಹಾಕಿಕೊಂಡು ಗ್ರಾಮದ ತುಂಬೆಲ್ಲಾ ತಿರುಗಾಡುತ್ತಾ ಮತದ ಭೀಕ್ಷೆಯನ್ನು ಕೇಳುತ್ತಿದ್ದಾರೆ. ಕೈಯಲ್ಲಿ ಘಂಟೆ ಹಿಡಿದುಕೊಂಡು ಬಾರಿಸುತ್ತಾ ನನ್ನ ಹೆಂಡತಿಯ ಗುರುತು ಸಿಲಿಂಡರ್ ಎನ್ನುತ್ತಾ ಪತ್ನಿಯ ಪರವಾಗಿ ಇವರು ವಿಭಿನ್ನವಾಗಿ ಪ್ರಚಾರವನ್ನು ಮಾಡ್ತಾ ಇದ್ದಾರೆ.
ಕಾಂಚಳ್ಳಿ ಗ್ರಾಮ ಸೂಳೇರಿಪಾಳ್ಯ ಗ್ರಾಮಪಂಚಾಯಿತಿಯಲ್ಲಿ ಬ್ಯಾಂಗೆಗೌಡ ಎಂಬುವರು ತನ್ನ ಮಡದಿ ಜಯಮ್ಮಳ ಪರ ಮತಯಾಚನೆ ಮಾಡುತ್ತಿದ್ದಾರೆ. ಹೀಗೆ ಮತ ಭೀಕ್ಷೆ ಮಾಡುವ ವೀಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ವೈರಲ್ ಆಗಿದೆ.