ಬೆಂಗಳೂರು –
ಕಳೆದ ಕೆಲ ವರ್ಷಗಳಿಂದ ನಿರೀಕ್ಷೆಯನ್ನು ಮಾಡುತ್ತಿದ್ದ ಪತಿ ಪತ್ನಿ ವರ್ಗಾವಣೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಈ ಕುರಿತಂತೆ ಅನುಮೋದನೆ ಸಿಕ್ಕಿದ್ದು ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.ಹೌದು ಸ್ವಂತ ಕೋರಿಕೆ ಮೇರೆಗೆ ಪತಿ-ಪತ್ನಿ ಅಂತರ ಜಿಲ್ಲಾ ವರ್ಗಾವಣೆಗೆ ಸರ್ಕಾರ ಅನುಮೋದನೆ ನೀಡಿದ್ದು, ತಿದ್ದುಪಡಿ ನಿಯಮಕ್ಕೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಪ್ರಕಟಿಸಲಾಗಿದ್ದು
ಈ ಕುರಿತಂತೆ ಯಾವುದಾದರೂ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲ ಅವಕಾಶ ನೀಡ ಲಾಗಿದೆ.ಈ ನಿಯಮದ ಅನ್ವಯ ವರ್ಗಾವಣೆ ಯಾಗಬೇಕಾದಲ್ಲಿ ಒಂದೇ ಸ್ಥಳದಲ್ಲಿ 7 ವರ್ಷ ಸೇವೆ ಪೂರ್ಣಗೊಳಿಸಿರಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.ಇದಕ್ಕೆ ಸರ್ಕಾರಿ ನೌಕರರ ವಲಯ ದಲ್ಲಿ ಆಕ್ಷೇಪ ಕೇಳಿ ಬಂದಿದೆ.
ಕರ್ನಾಟಕ ನಾಗರೀಕ ಸೇವಾ ನಿಯಮ -2021 ಹೊರಡಿಸುವ ಮೂಲಕ ಸ್ವಂತ ಕೋರಿಕೆ ವರ್ಗಾವ ಣೆಗೆ ಅವಕಾಶವಿದ್ದ 16 ಎ ನಿಯಮವನ್ನು ಕಾಯ್ದೆ ಯಿಂದ ತೆಗೆದು ಹಾಕಲಾಗಿದ್ದು ಸಿ ಮತ್ತು ಡಿ ದರ್ಜೆಯ ನೌಕರರನ್ನು ಒಂದು ಜೇಷ್ಠ ಘಟಕ ದಿಂದ ಮತ್ತೊಂದು ಘಟಕದ ಸಮಾನ ಹುದ್ದೆಗೆ ಸ್ವಂತ ಕೋರಿಕೆ ಮೇರೆಗೆ ವರ್ಗಾವಣೆ ಮಾಡಲು ಇಲಾಖೆ ಮುಖ್ಯಸ್ಥರಿಗೆ ಇದ್ದ ಅಧಿಕಾರವನ್ನು ಮೊಟಕುಗೊಳಿಸಲಾಗಿತ್ತು.ಪತಿ ಪತ್ನಿ ವರ್ಗಾವ ಣೆಗೂ ಅವಕಾಶ ಇರಲಿಲ್ಲ ಈಗ ಸರ್ಕಾರಿ ನೌಕರ ರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಿದ್ದು ಪಡಿ ತಂದು ಹಿಂದಿನ ನಿಯಮ ಮರು ಸ್ಥಾಪಿಸಲಾ ಗಿದೆ.
ಸ್ವಂತ ಕೋರಿಕೆ ಮೇರೆಗೆ ಪತಿ-ಪತ್ನಿ ಅಂತರ ಜಿಲ್ಲಾ ವರ್ಗಾವಣೆಗೆ ಅನುಮೋದನೆ ನೀಡಿಲಾಗಿದ್ದು ಹೀಗಾಗಿ ಇದು ರಾಜ್ಯದ ಸರ್ಕಾರಿ ನೌಕರರಿಗೆ ಯಾವ ರೀತಿ ಹೇಗೆ ಅನುಕೂಲವಾಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..