ಹಾವೇರಿ –
ಗಂಡ-ಹೆಂಡತಿ ಮಧ್ಯೆ ನಡುರಸ್ತೆಯಲ್ಲೇ ಹೊಡೆದಾಡಿದ ಪ್ರಕರಣ ಹಾವೇರಿಯಲ್ಲಿ ನಿನ್ನೆ ನಡೆದಿತ್ತು.
ಇಬ್ಬರ ನಡುವೆ ನಡೆದ ಈ ಒಂದು ಹೊಡೆದಾಟದ ಮಾರಾಮಾರಿಯಲ್ಲಿ ಇಬ್ಬರೂ ಗಂಭೀರ ಗಾಯಕ್ಕೊಳಗಾಗಿದ್ದು ಪತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಪತಿ ಮೈಲಪ್ಪ ತಂಬೂರಿ (50) ಗಂಭೀರ ಗಾಯಕ್ಕೊಳಗಾಗಿ ಅಸುನೀಗಿದ್ದರೆ, ಪತ್ನಿ ಮಾದೇವಕ್ಕ ಮೈಲಪ್ಪ ತಂಬೂರಿಯ ಸ್ಥಿತಿ ಚಿಂತಾಜನಕವಾಗಿದೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಹಲಗೇರಿ ಕ್ರಾಸ್ ಬಳಿ ಶನಿವಾರ ಮಧ್ಯಾಹ್ನ ನಡುರಸ್ತೆಯಲ್ಲಿ ಇಬ್ಬರು ದಂಪತಿಗಳು ಹೊಡೆದಾಡಿಕೊಂಡಿದ್ದರು. ಹಿಂಬದಿಯಿಂದ ಬಂದ ಪತಿ, ಪತ್ನಿಯ ತಲೆಗೆ ಮಚ್ಚಿನಿಂದ ಹೊಡೆದು, ನೋಡನೋಡುತ್ತಿದ್ದಂತೆ ತನ್ನ ಕುತ್ತಿಗೆಯನ್ನೂ ಕೊಯ್ದುಕೊಂಡಿದ್ದ.
ರಕ್ತದ ಮಡುವಿನಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಈಗ ಇದೀಗ ಮೃತಪಟ್ಟಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹೊಡೆದಾಟ ನಡೆದಿತ್ತು.ಅತ್ತ ಮಾದೇವಕ್ಕನ ಸ್ಥಿತಿ ಚಿಂತಾಜನಕವಾಗಿದೆ.