ಮಂಡ್ಯ –
ಸಾರ್ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ಕೊಟ್ಟಿದ್ದಾರೆ. ಅದರ ಬಗ್ಗೆ ಏನ್ ಹೇಳ್ತೀರಿ ಅಂತಾ ಕೇಳಿದ ಮಾಧ್ಯಮದವರ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ ಯಾರಪ್ಪ ಅದು.ಅವರು ಯಾರು ಅಂತ ಗೊತ್ತಿಲ್ಲ. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಎನ್ನುವ ಮೂಲಕ, ನಟಿ ರಾಧಿಕಾ ಕುಮಾರಸ್ವಾಮಿ ನನಗೆ ಗೊತ್ತಿಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ನೇರಲಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನಾನು ರಾಜ್ಯ ಸರ್ಕಾರದ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ನನ್ನ ಉದ್ದೇಶ ಇರೋದು ಎರಡೂವರೆ ವರ್ಷ ಸರ್ಕಾರದ ಅವಧಿ ಮುಕ್ತಾಯಗೊಂಡ ನಂತ್ರ, ರಾಜ್ಯದಲ್ಲಿ ಜನತಾದಳ ಸರ್ಕಾರ ಅಸ್ಥಿತ್ವಕ್ಕೆ ತರೋದು ಅಷ್ಟೇ ಬೇರೆ ಏನು ಇಲ್ಲ ಎಂದರು.
2023 ಕರ್ನಾಟಕದ ರಾಜ್ಯ ಜನತಾದಳದ ರಾಜ್ಯ. ಜನತಾ ರಾಜ್ಯ. ಅದನ್ನು ತರೋದಕ್ಕೆ ಏನ್ ಬೇಕೋ ಅದರ ಬಗ್ಗೆ ಚಿಂತೆ ಮಾಡುತ್ತೇನೆ ಎಂದರು.

ಇದೇ ವೇಳೆ ಸುದ್ದಿಗಾರರು ಸಾರ್ ಈಗ ರಾಧಿಕಾ ಅವರಿಗೆ ಸಿಸಿಬಿ ನೋಟಿಸ್ ಬಂದಿದೆ ಎಂದು ಪ್ರಶ್ನೆ ಕೇಳುತ್ತಲೇ ಯಾರಪ್ಪ ಅದು, ನನಗೆ ಯಾರು ಅಂತಾನೇ ಗೊತ್ತಿಲ್ಲ ಎಂದರು.
ಅವರು ನನಗೆ ಗೊತ್ತಿಲ್ಲದವರ ಬಗ್ಗೆ ನಾನ್ ಯಾಕೆ ತಲೆ ಕೆಡಿಸಿಕೊಳ್ಳಲಿ ಅಂತ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ಬಗ್ಗೆ ಮಾಜಿ ಸಿಎಂ ಉತ್ತರಿಸಿದ್ದಾರೆ.