ಚಿತ್ರದುರ್ಗ –
ಸಿಡಿ ಲೇಡಿ ಜೊತೆಯಲ್ಲಿ ನನ್ನದು ಯಾವುದೇ ಸಂಪರ್ಕವಿಲ್ಲ, ನಾನು ಯಾವುದೇ ರೀತಿಯಲ್ಲೂ ಹಣದ ವ್ಯವಹಾರ ಮಾಡಿಲ್ಲ ಎಂದು ಮಾಜಿ ಸಚಿವ ಡಿ ಸುಧಾಕರ್ ಹೇಳಿದರು. ಚಿತ್ರದುರ್ಗ ದಲ್ಲಿ ಮಾತನಾಡಿದ ಅವರು ಸಿಡಿ ಲೇಡಿ ಜೊತೆಯಲ್ಲಿ ಸಂಪರ್ಕ ಕುರಿತು ಸ್ಪಷ್ಟನೆ ನೀಡಿದರು.

ಚಳ್ಳಕೆರೆ ಪಟ್ಟಣದಲ್ಲಿ ಮಾಜಿ ಸಚಿವ ಡಿ.ಸುಧಾಕರ್ ಮಾತನಾಡಿ ನಾನು ಸಿಡಿಲೇಡಿಗೆ ಯಾವುದೇ ಹಣ ವರ್ಗಾವಣೆ ಮಾಡಿಲ್ಲ ಎಂದರು.ನನಗೆ ಪ್ರತಿದಿನ ಅನೇಕ ಜನ ಕರೆ ಮಾಡುತ್ತಿರುತ್ತಾರೆ.ಸಿಡಿಲೇಡಿ ಜತೆ ನನಗೆ ಯಾವುದೇ ಸಂಪರ್ಕ ಇಲ್ಲ ಎಸ್ ಐಟಿ ತನಿಖೆಗೆ ಕರೆದರೆ ನಾನು ಉತ್ತರಿಸುತ್ತೇನೆ ಎಂದರು.
ಸಿಡಿ ಕೇಸಲ್ಲಿ ಮಾಜಿ ಸಚಿವರೊಬ್ಬರಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು.ನನಗೆ ಭಯ ಇದ್ದರೆ ಮೊದ ಲೇ ಇಂಜಕ್ಷನ್ ಆರ್ಡರ್ ತೆಗೆದುಕೊಳ್ಳುತ್ತಿದ್ದೆನು ಎಂದರು.ನನ್ನ ಹೆಸರು ತಳಕು ಹಾಕಿಕೊಂಡಿದ್ದು ಕೇಳಿ ಆಶ್ಚರ್ಯವಾಗಿದೆ.ನಾನು ಡಿಕೆ ಶಿವಕುಮಾರ್ ಜೊತೆಯೂ ಇರುತ್ತೇನೆ ಸಿದ್ದರಾಮಯ್ಯ ಜೊತೆಯು ಇರುತ್ತೇನೆ ಅದಕ್ಕಾಗಿ ಈ ಕೇಸ್ ನಲ್ಲಿ ತಳುಕು ಹಾಕುವುದು ತಪ್ಪು ಎಂದರು.