ಮೈಸೂರು –
ಸಾಮಾನ್ಯವಾಗಿ ಯಾರಿಗೆ ಯಾವ ಯಾವ ಆಸೆ ಆಕಾಂಕ್ಷೆಗಳು ಇರುತ್ತವೆ ಎಂಬೊದೆ ಗೊತ್ತಾಗೊದಿಲ್ಲ. ಹೌದು ಇದಕ್ಕೆ ಮೈಸೂರಿನ ಅಜ್ಜಿಯೇ ಸಾಕ್ಷಿ. 73 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರಿಗೆ ವರ ಬೇಕಾಗಿ ದ್ದಾನೆ ಎಂದು ಜಾಹೀರಾತು ಕೊಟ್ಟು ಸುದ್ದಿಯಾಗಿ ದ್ದಾರೆ ಈ ಅಜ್ಜಿ. ಈ ಮೂಲಕ ವಿವಾಹ, ಸಂಗಾತಿ, ವಯಸ್ಸಿನ ಬೇಲಿ ದಾಟಿ ಬಂದಿದ್ದಾರೆ ಇವರು

ಇಳಿ ವಯಸ್ಸಿನಲ್ಲಿ ಜೊತೆಗೊಂದು ಜೀವ, ಸ್ನೇಹ, ಪ್ರಿತಿ, ಮಾತು ಮುನಿಸಿಗಾದರೂ ಒಬ್ಬ ಜೊತೆಗಾರ, ಜೊತೆಗಾತಿ ಬೇಕೆಂಬ ಹಂಬಲ ಇದ್ದರೂ ನಮ್ಮ ಸಮಾಜ ಇದನ್ನು ಮುಕ್ತವಾಗಿ ಒಪ್ಪಿಕೊಳ್ಳುವುದಿಲ್ಲ.
ಇದೇನು ಹುಚ್ಚು ಈ ವಯಸ್ಸಿಗೆ ಎಂದು ಆಡಿಕೊಳ್ಳು ವವರೇ ಹೆಚ್ಚು ಇದೆಲ್ಲವನ್ನೂ ತಿಳಿದಿರುವ ನಿವೃತ್ತ ಶಿಕ್ಷಕಿ ಈಗ ಜಾಹೀರಾತು ಮೂಲಕ ವರ ಹುಡುಕುವ ಪ್ರಯತ್ನ ಮಾಡಿದ್ದು ಸಣ್ಣ ವಿಚಾರವೇನಲ್ಲ ಬಿಡಿ.
ಗಂಡನನ್ನು ಹುಡುಕುತ್ತಾ 73 ವರ್ಷದ ನಿವೃತ್ತ ಶಿಕ್ಷಕಿ ವಿವಾಹ ಜಾಹೀರಾತು ಕೊಟ್ಟಿದ್ದಾರೆ. ಈ ಜಾಹೀರಾ ತು ನಗರ ಮತ್ತು ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣ ವಾಗಿದ್ದು ಅನೇಕರು ಇವರ ಧೈರ್ಯ ಮತ್ತು ಸಕಾರಾ ತ್ಮಕ ಮನೋಭಾವವನ್ನು ಹುರಿದುಂಬಿಸಿ ದ್ದಾರೆ.ವರ ಬೇಕಾಗಿದೆ ಸರ್ಕಾರಿ ನಿವೃತ್ತಿಯಾದ ಲಕ್ಷಣವಾದ ಬ್ರಾಹ್ಮಣ ಸ್ತ್ರೀಗೆ ಮದುವೆಯಾಗಲು 73 ವರ್ಷಕ್ಕೆ ಮೇಲ್ಪಟ್ಟ ಆರೋಗ್ಯವಂತ ಬ್ರಾಹ್ಮಣ ವರ ಬೇಕಾಗಿ ದ್ದಾರೆ. ಸಂಪರ್ಕಿಸಿ ಎಂದು ಜಾಹೀರಾತು ನೀಡಲಾಗಿದೆ.
ನಾನು ನನ್ನ ಸ್ವಂತ ಕುಟುಂಬವನ್ನು ಹೊಂದಿಲ್ಲ. ನನ್ನ ಪೋಷಕರು ಬದುಕಿಲ್ಲ. ನನ್ನ ಮೊದಲ ಮದುವೆ ವಿಚ್ಛೇದನದಲ್ಲಿ ಕೊನೆಗೊಂಡಿತು.ನಾನು ಒಬ್ಬಂಟಿ ಯಾಗಿರಲು ಭಯಪಡುತ್ತೇನೆ.ನಾನು ಮನೆಯಲ್ಲಿ ಬೀಳಬಹುದು, ನನ್ನ ನೆರವಿಗೆ ಯಾರೂ ಇರಲಾರರು ಎಂಬ ಭಯ ನನ್ನನ್ನು ಜೀವನ ಸಂಗಾತಿಯನ್ನು ಹುಡುಕುವಂತೆ ಮಾಡಿತು ಎಂದಿದ್ದಾರೆ.
ತನ್ನ ಮದುವೆ ಮತ್ತು ವಿಚ್ಛೇದನೆ ನೋವಿನಿಂದ ಕೂಡಿದೆ. ಇಷ್ಟು ವರ್ಷಗಳಲ್ಲಿ ಮದುವೆ ಬಗ್ಗೆ ಆಲೋಚಿಸುವುದರಿಂದಲೇ ನೋವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.ಮದುವೆ ಮತ್ತು ಸಂಗಾತಿಗಿಂತ ಹೆಚ್ಚಾಗಿ ಆಕೆಗೆ ಈಗ ಬೇಕಾಗಿರುವು ದು ನನ್ನ ಜೀವನದ ಒಡನಾಡಿ ಎಂದು ಹೇಳಿದ್ದಾರೆ