ರಾಯಚೂರು –
ಆ ಒಂದು ನಿಂಬೆಹಣ್ಣಿನ ರಸವನ್ನು ಮೂಗಿನಲ್ಲಿ ಹಾಕಿಕೊಳ್ಳುವುದರಿಂದ ಕೊರೋನಾ ಮಹಾಮಾರಿ ಯಿಂದ ದೂರ ಇರಬಹುದು.ನಾಲ್ಕು ಹನಿ ಮೂಗಿನ ಲ್ಲಿ ಹಾಕಿಕೊಂಡರೇ ಉಸಿರಾಟದ ತೊಂದರೆ ಇರುವು ದಿಲ್ಲ.ಬದಲಿಗೆ ಆಮ್ಲಜನಕ ವೃದ್ಧಿಯಾಗುತ್ತದೆ ಎನ್ನು ವ ಸುದ್ದಿ ರಾಜ್ಯದಲ್ಲಿ ಹರಿದಾಡುತ್ತಿದೆ.ಆದರೆ ಆನಿಂಬೆ ಹಣ್ಣಿನಲ್ಲಿ ಸಿ ಮತ್ತು ಎ ವಿಟಮಿನ್‌ಗಳಿವೆ.ನಿಂಬೆ ಹಣ್ಣಿನ ಹನಿಗಳನ್ನು ಮೂಗಿನಲ್ಲಿ ಬಿಟ್ಟುಕೊಂಡರೆ ದೇಹದ ಆಮ್ಲಜನಕ ವೃದ್ಧಿಯಾಗುತ್ತದೆ ಎನ್ನುವ ಹೊಸ ಸುದ್ದಿಗೆ ಈಗ ಪರವಾದ ಮತ್ತು ವಿರೋಧ ಗಳು ವ್ಯಕ್ತವಾಗುತ್ತಿವೆ.

ಹೌದು ಇದೇಲ್ಲ ಚರ್ಚೆಯ ನಡುವೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಶಿಕ್ಷಕರೊಬ್ಬರು ನಿಂಬೆ ಹಣ್ಣಿನ ರಸವನ್ನು ಮೂಗಿನಲ್ಲಿ ಹಾಕಿಕೊಂಡು ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾರೆ.

ಹೌದು ಸಿಂಧನೂರಿನ ಶರಣಬಸವೇಶ್ವರ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸ ವರಾಜ(43) ಎನ್ನುವರು ಮೂಗಿನಲ್ಲಿ ನಿಂಬೆ ಹಣ್ಣಿನ ರಸ ಹಾಕಿಕೊಂಡ ಪರಿಣಾಮ ಆರೋಗ್ಯದಲ್ಲಿ ಏರು ಪೇರಾಗಿ ಸಾವನ್ನಪ್ಪಿದ್ದಾರೆ.ಬೆಳಗ್ಗೆ ಆರೋಗ್ಯವಾಗಿ ಯೇ ಇದ್ದ ಅವರು ನಿಂಬೆರಸ ಹಾಕಿಕೊಂಡ ಬಳಿಕ ಏಕಾಏಕಿ ಒದ್ದಾಡಿ ಮೃತಪಟ್ಟಿದ್ದಾರೆ.