ಬೀದರ್ –
ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ರೈತನ ಹೆಸರಲ್ಲಿ ಮೊಬೈಲ್‌ನಲ್ಲಿ ಆಡಿದ ಸಂಭಾಷಣೆಯನ್ನು ರಿಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದಾರೆ.ಆದರೆ ನಾನು ಸದಾಕಾಲ ರೈತರೊಂದಿಗೆ ಇದ್ದೇನೆ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದ್ದಾರೆ.ಬಿಜೆಪಿ ಸರ್ಕಾರ ಹಾಗೂ ನನ್ನ ಹೆಸರಿಗೆ ಕಪ್ಪು ಚುಕ್ಕೆ ತರುವ ಉದ್ದೇಶದಿಂದ ಈ ಕೆಲಸ ಮಾಡಿದ್ದಾರೆ. ನನ್ನೊಂದಿಗೆ ಮಾತನಾಡಿರುವ ವ್ಯಕ್ತಿ ರೈತನಲ್ಲ ವ್ಯಕ್ತಿ ಸರ್ಕಾರಿ ಶಾಲೆಯ ಶಿಕ್ಷಕ.ಜೂನ್ 10ರಂದು ರಾತ್ರಿ 10.52 ರಿಂದ 11.32ರ ವರೆಗೆ ಅನೇಕ ಬಾರಿ ಕರೆ ಮಾಡಿದ್ದಾರೆ. ಏನಾದರೂ ತುರ್ತು ಕೆಲಸ ಇದ್ದಿರಬಹುದು ಎಂದು ಮರಳಿ 11.35ಕ್ಕೆ ಕರೆ ಮಾಡಿ ಮಾತನಾಡಿದ್ದೇನೆ.ಆದರೆ ಆ ವ್ಯಕ್ತಿ ರಸಗೊಬ್ಬರ ಬಗ್ಗೆ ಕೇಳುತ್ತ ಆಕ್ಷೇಪಾರ್ಯ ಪದಗಳನ್ನು ಬಳಸಿದ್ದಾರೆ ಎಂದು ಹೇಳಿದ್ದಾರೆ.ಸಂಭಾಷಣೆಯನ್ನು ಎಡಿಟ್ ಮಾಡಿ ಮಾಧ್ಯಮಗಳಿಗೆ ಕಳಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸರ್ಕಾರದ ಹೆಸರು ಕೆಡಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.

ಹೆಡಗಾಪೂರದಲ್ಲಿ ರಸಗೊಬ್ಬರ ಕೊರತೆ ಇಲ್ಲ ಹೆಡಗಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಸಗೊಬ್ಬರ ದಾಸ್ತಾನು ಇದೆ ಎಂದು ಸಂಘಧ ಅಧ್ಯಕ್ಷ ಅಮೃತರಾವ್ ಡಾಕುಳಗೆ ತಿಳಿಸಿದ್ದಾರೆ. ಹೆಡಗಾ ಪೂರ ಪ್ರಾಥಮಿಕ ಕೃಷಿ ಪತ್ತಿನ ಕೇಂದ್ರಕ್ಕೆ ಮುಂಗಾರು ಹಂಗಾಮಿಗೆ 50 ಮೆ.ಟನ್ (1000 ಚಿಲಗಳು) ಅವಶ್ಯಕತೆ ಇದೆ, ಈಗಾಗಲೇ 42.50 ಮೆ.ಟನ್ (850 ಚಿಲಗಳು) ರಸಗೊಬ್ಬರ ಸರಬರಾಜು ಆಗಿದೆ. 130 ಚಿಲಗಳ ದಾಸ್ತಾನು ಇದೆ ಹೇಳಿದ್ದಾರೆ.
ಕೇಂದ್ರ ಸಚಿವರ ಜತೆ ಅನುಚಿತ ವರ್ತನೆ ಖಂಡನೆ
ರಸಗೊಬ್ಬರ ವಿಚಾರಕ್ಕೆ ಸಂಬಂಧಿಸಿದಂತೆ ಔರಾದ್ ತಾಲ್ಲೂಕಿನ ಜೀರ್ಗಾ(ಕೆ) ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಕುಶಾಲ್ ಪಾಟೀಲ ಅವರು ಕೇಂದ್ರದ ರಾಸಾ ಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರೊಂದಿಗೆ ಅನುಚಿತವಾಗಿ ವರ್ತಿಸಿರುವುದನ್ನು ಮರಾಠಾ ಸಮಾಜದ ಮುಖಂಡ ದೀಪಕ ಪಾಟೀಲ ಚಾಂದೋರಿ ತೀವ್ರವಾಗಿ ಖಂಡಿಸಿದ್ದಾರೆ.
ಮೂಲತಃ ಹೆಡಗಾಪುರ ಗ್ರಾಮದವರಾದ ಕುಶಾಲ ಪಾಟೀಲ ತಡ ರಾತ್ರಿ ಕೇಂದ್ರ ಸಚಿವರಿಗೆ ದೂರವಾಣಿ ಕರೆ ಮಾಡಿ ನಮ್ಮಲ್ಲಿ ರಸಗೊಬ್ಬರ ಕೊರತೆ ಇದೆ ಎಂದು ಹೇಳಿ ದ್ದಾರೆ. ಸಚಿವರು ನಾನು ರಾಜ್ಯಕ್ಕೆ ಗೊಬ್ಬರ ಹಂಚಿಕೆ ಮಾಡಿದ್ದೇನೆ.ನೀವು ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಉತ್ತರಿಸಿದ್ದಾರೆ.ಕೇಂದ್ರ ಸಚಿವರೊಂದಿಗಿನ ಸಂಭಾ ಷಣೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಅವರ ತೇಜೋವಧೆಗೂ ಪ್ರಯತ್ನಿಸಿದ್ದಾರೆ ಎಂದು ಆಪಾದಿಸಿದ್ದಾರೆ.
ಹೆಡಗಾಪುರ ಪಿಕೆಪಿಎಸ್‍ನವರು 40 ಟನ್ ಗೊಬ್ಬರಕ್ಕಾಗಿ ಡಿಸಿಸಿ ಬ್ಯಾಂಕ್‍ಗೆ ಪ್ರಸ್ತಾವ ಸಲ್ಲಿಸಿದ್ದರು.ಬ್ಯಾಂಕ್‍ನವರು 40 ಟನ್ ರಸಗೊಬ್ಬರ ಕಳುಹಿಸಿ ಕೊಟ್ಟಿದ್ದರು.ಅದರಲ್ಲೇ ಇನ್ನೂ 150 ಬ್ಯಾಗ್ ಡಿಎಪಿ ರಸಗೊಬ್ಬರ ಸಂಗ್ರಹ ಇದೆ. ಕುಶಾಲ ಪಾಟೀಲ ಅವರು ರಸಗೊಬ್ಬರಕ್ಕಾಗಿ ಪಿಕೆಪಿಎಸ್‍ಗೆ ಸಂಪರ್ಕಿಸಿಯೇ ಇಲ್ಲ.ಅನಗತ್ಯ ವಿವಾದ ಸೃಷ್ಟಿಸಲು ಸಚಿವರೊಂದಿಗೆ ಮಾತನಾಡಿದ್ದಾರೆ ಎಂದು ದೂರಿದ್ದಾರೆ.
ಸಮಾಜಕ್ಕೆ ಮಾದರಿಯಾಗಬೇಕಾದ ಶಿಕ್ಷಕರೇ ಎಲ್ಲೇ ಮೀರಿ ವರ್ತಿಸಿದ್ದಾರೆ. ಜನಪ್ರತಿನಿಧಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಶಿಕ್ಷಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದ್ದಾರೆ.