ಬೆಂಗಳೂರು –
ಬೆಂಗಳೂರಿನ BBMP ಆಯುಕ್ತರಾದ ಗೌರವ ಗುಪ್ತಾ ಅವರು ಬಡ ವಿದ್ಯಾರ್ಥಿನಿಯೊಬ್ಬಳಿಗೆ ನೆರವಾಗಿದ್ದಾರೆ ಹೌದು. ಮಧ್ಯಾಹ್ನದವರೆಗೆ ದೇವಾ ಲಯದ ಮುಂದೆ ಹೂ ಮಾರಾಟ ಮಾಡಿ ನಂತರ ಆನ್‍ಲೈನ್ ಕ್ಲಾಸ್‍ನಲ್ಲಿ ಪಾಠ ಕೇಳಿಸಿಕೊಂಡು ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಆಸಕ್ತಳಾಗಿರುವ ಬಡ ವಿದ್ಯಾರ್ಥಿನಿಗೆ ತಮ್ಮ ಸ್ವಂತ ಹಣದಿಂದ ಲ್ಯಾಪ್‍ಟ್ಯಾಪ್ ಕೊಡಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮುಂದಾಗಿದ್ದಾರೆ. ನೇಕಾರಿಕೆ ಮಾಡುವ ಅಪ್ಪ, ಹೂ ಮಾರುವ ಅಮ್ಮ ಮತ್ತು ಸಹೋದರರು,ಇದರ ಮಧ್ಯೆ ತಾನೂ ಹೂ ಮಾರಿ,ಇದರ ಜೊತೆಗೆ ಕೊರೊನಾ ಸಂಕಷ್ಟದಲ್ಲೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ತಯಾರಾಗಿರುವ ಆದಿಶಕ್ತಿ ದೇವಾಲಯದ ಮುಂದೆ ಹೂ ಮಾರುವ ಬಾಲಕಿ ಬನಶಂಕರಿ ಬಗ್ಗೆ ತಿಳಿದ ಆಯುಕ್ತರು ತಾವೇ ಸ್ವತಃ ದೇವಾಲಯದ ಬಳಿಗೆ ತೆರಳಿ ಆಕೆಗೆ ನೆರವಿನ ಭರವಸೆ ನೀಡಿದರು.
ಇಡೀ ಕುಟುಂಬ ಬದುಕು ಕಟ್ಟಿಕೊಳ್ಳಲು ಹೋರಾಟ ನಡೆಸುತ್ತಿದ್ದರೆ, ಕುಟುಂಬ ಸದಸ್ಯರಿಗೆ ನೆರವು ನೀಡಿ, ಕಳೆದ ಐದು ವರ್ಷಗಳಿಂದ ಕಷ್ಟಪಟ್ಟು ಓದಿ,ಇದೀಗ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲಾಗುವುದು ಎಂಬ ಮಾಹಿತಿ ದೊರೆಯುತ್ತಿದ್ದಂತೆ ಫುಲ್ ಖುಷಿಯಾಗಿ ಪರೀಕ್ಷೆಗೆ ತಯಾರಾಗುತ್ತಿರುವ ಬನಶಂಕರಿ ಬಗ್ಗೆ ತಿಳಿದು ಆಯುಕ್ತರು ದೇವಾಲಯಕ್ಕೆ ಇಂದು ಭೇಟಿ ನೀಡಿದ್ದರು.ಬಾಲಕಿ ಬಳಿಗೆ ಬಂದ ಆಯುಕ್ತರು ಮಾಸ್ಕ್ ಹಾಕುವುದನ್ನು ಮರೆಯಬೇಡ, ಎಸ್‍ಎಸ್ ಎಲ್‍ಸಿ ಪರೀಕ್ಷೆಗೆ ಯಾವ ರೀತಿ ತಯಾರಿ ನಡೆಸಿದ್ದೀ ಯಾ ಎನ್ನುತ್ತಾ ಕೇಳಿ,ಚೆನ್ನಾಗಿ ಓದಿ ವಿದ್ಯಾವಂತ ಳಾಗುವಂತೆ ತಿಳಿ ಹೇಳಿದರು.ಸಾಧಾರಣ ಹಿನ್ನೆಲೆ ಕುಟುಂಬದ ಬಾಲಕಿಯ ಉತ್ಸಾಹ ಕಂಡು ನನಗೆ ನನ್ನ ಬಾಲ್ಯದ ನೆನಪುಗಳು ಮರುಕಳಿಸಿದೆ. ಕಷ್ಟದಲ್ಲಿ ಓದಿ ಮುಂದೆ ಬರಬೇಕು ಎಂದು ಬಾಲಕಿಗೆ ತಿಳಿ ಹೇಳಿ,ಆಕೆಯ ಆನ್‌ಲೈನ್ ಕ್ಲಾಸಿಗೆ ಸಹಕಾರಿ ಯಾಗಲಿ ಎಂದು ನಾನು ನನ್ನ ಸ್ವಂತ ಹಣದಿಂದ ಲ್ಯಾಪ್‍ಟ್ಯಾಪ್ ಕೊಡಿಸಲು ತೀರ್ಮಾನಿಸಿದ್ದೇನೆ ಎಂದರು.