ರಾಯಚೂರು –
ವಸತಿ ಶಾಲೆಯೊಂದರಲ್ಲಿ ಶಿಕ್ಷಕ ನೊಬ್ಬ ಅಲ್ಲಿನ ವಿದ್ಯಾರ್ಥಿ ನಿಯರೊಂದಿಗೆ ಅನುಚಿತವಾಗಿ ವರ್ತನೆ ಮಾಡುತ್ತಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಜಿಲ್ಲೆಯ ಮಸ್ಕಿ ತಾಲೂಕಿನ ವಟಗಲ್ ನ ಇಂದಿರಾಗಾಂಧಿ ವಸತಿ ಶಾಲೆಯ ಕೆಲ ಶಿಕ್ಷಕ ಹೈಸ್ಕೂಲು ವಿದ್ಯಾರ್ಥಿನಿಯರ ಜೊತೆ ಅಸಭ್ಯ ವಾಗಿ ವರ್ತನೆ ಮಾಡುತ್ತಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಹೌದು ವಸತಿ ನಿಲಯದಲ್ಲಿರುವ ಹೈಸ್ಕೂಲು ವಿದ್ಯಾರ್ಥಿ ನಿಯರನ್ನ ಶಿಕ್ಷಕ ಕೈ ಹಿಡಿದು ಎಳೆದಾಡುತ್ತಾನೆ ಸರ್ ಕೈ ಬಿಡಿ ಎಂದು ಗೋಗರೆದರೂ ಶಿಕ್ಷಕ ಮಾತ್ರ ಎಳೆದಾಡುತ್ತಲೇ ಇರುತ್ತಾನೆ ಸಾಲದಂತೆ ಬೆನ್ನತ್ತಿ ಕಾಡುತ್ತಿದ್ದಾನೆ
ಅಷ್ಟು ಮಾತ್ರವಲ್ಲದೆ ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕ ಅಸಭ್ಯವಾಗಿ ಅಶ್ಲೀಲವಾಗಿ ನಡೆದುಕೊಂಡಿದ್ದಾನೆ ಗಣಿತ ವಿಭಾಗದ ಅತಿಥಿ ಶಿಕ್ಷಕ ಅಮರೇಗೌಡನಿಂದ ವಿದ್ಯಾರ್ಥಿ ನಿಯರೊಂದಿಗೆ ಮಾಡಿರುವ ಅನುಚಿತ ವರ್ತನೆ ನೋಡಿ ದರೆ ಶಿಕ್ಷಕರ ಬಗ್ಗೆಯೇ ಅಸಹ್ಯ ಹುಟ್ಟುವಂತಾಗುತ್ತದೆ.
ಇಲ್ಲಿ ವಿದ್ಯಾರ್ಥಿನಿಯರೇ ಶಿಕ್ಷಕರ ಬಟ್ಟೆ ಒಗೆಯಬೇಕಂತೆ ಹಾಸ್ಟೆಲ್ ಕಸ ಗುಡಿಸುವ ಕೆಲಸವನ್ನೂ ವಿದ್ಯಾರ್ಥಿನಿಯರೇ ಮಾಡಬೇಕಂತೆ ಇಂತಹ ಶಿಕ್ಷಕರ ನೀಚ ಕೃತ್ಯದಿಂದ ಇಡೀ ಶಿಕ್ಷಕ ಸಮುದಾಯಕ್ಕೆ ಕಳಂಕ ಬರುವಂತಾಗಿದೆ.
ಇದರಿಂದಾಗಿ ಇಲ್ಲಿನ ವಿದ್ಯಾರ್ಥಿನಿಯರು ಬೇಸತ್ತಿದ್ದಾರೆ ಇಂಥಹ ಘಟನೆ ಗಳಿಗೆ ಕಡಿವಾಣ ಹಾಕಿ ರಕ್ಷಣೆ ನೀಡುವಂತೆ ಒತ್ತಾಯವನ್ನು ಮಾಡಿದ್ದಾರೆ