ವಿಜಯಪುರ –
ಹುಟ್ಟು ನಮ್ಮ ಕೈಯಲ್ಲಿ ಇದೆ ಸಾವು ನಮ್ಮ ಕೈಯಲ್ಲಿ ಇಲ್ಲ. ನಮ್ಮ ಸಾವು ಯಾವ ಸಮಯದಲ್ಲಿ ಹೇಗೆ ಬರುತ್ತದೆ ಹೀಗೆ ಇದ್ದರು ನೋಡು ನೋಡುತ್ತಲೆ ಸಾವು. ಹೀಗೆ ಮಾತನಾಡಿದವರು ಕೆಲವೇ ಗಂಟೆ ಗಳಲ್ಲಿ ಸಾವು.ಹೌದು ಇಂತಹ ಇಬ್ಬರು ಶಿಕ್ಷಕರ ಅಪಘಾತದ ಸಾವಿನ ಸುದ್ದಿಯಿಂದಾಗಿ ನಾಡಿನ ಅದರಲ್ಲೂ ವಿಜಯಪುರ ಜಿಲ್ಲೆಯ ಶಿಕ್ಷಕರು ಇನ್ನೂ ಹೊರಬಂದಿಲ್ಲ.
ಸರಳ ಸಜ್ಜನಿಕೆಗೆ ಹೆಸರಾಗಿದ್ದ ತುಂಬಾ ಉತ್ಸಾಹಿ ಆದರ್ಶ ಇಬ್ಬರು ಶಿಕ್ಷಕರನ್ನು ವಿಜಯಪುರ ಜಿಲ್ಲೆಯ ಶಿಕ್ಷಕರು ಇಲಾಖೆ ಕಳೆದುಕೊಂಡಿದೆ.ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆ ಈ ಒಂದು ಹಿನ್ನಲೆಯಲ್ಲಿ ಮೇಲ್ವಿಚಾರಕರಾಗಿದ್ದ ಇಬ್ಬರು ಶಿಕ್ಷಕರು ಸಭೆಗೆ ಹೋಗಿ ಅದನ್ನು ಮುಗಿಸಿಕೊಂಡು ಮರಳಿ ಬೈಕ್ ನಲ್ಲಿ ಹೊರಟಿದ್ದರು.ಈ ಒಂದು ಸಮಯದಲ್ಲಿ ಹೆದ್ದಾರಿಯಲ್ಲಿ ಎದುರಿಗೆ ಬಂದ ಲಾರಿಯೊಂದು ಸ್ಕೂಟಿಗೆ ಗುದ್ದಿದ್ದು ಪರಿಣಾಣವಾಗಿ ಬೈಕ್ ನಲ್ಲಿ ಹೊರಟಿದ್ದ ಇಬ್ಬರು ಶಿಕ್ಷಕರು ಸ್ಥಳದಲ್ಲಿಯೇ ಮೃತರಾಗಿದ್ದಾರೆ.
ಅಪಘಾತ ಹೇಗೆ ಇತ್ತು ಅನ್ನೊದು ಎರಡನೇಯ ಮಾತು ಆದರೆ ಅಪಘಾತಕ್ಕೆ ಇಬ್ಬರು ಶಿಕ್ಷಕರ ದೇಹಗಳು ಮಾತ್ರ ಗುರುತು ಸಿಗಲಾರದಸ್ಟು ಛಿದ್ರ ಛಿದ್ರವಾಗಿ ರಸ್ತೆ ತುಂಬೆಲ್ಲಾ ಬಿದ್ದಿರುವ ಚಿತ್ರಣ ಕಂಡು ಬಂದಿತು.
ಇನ್ನೂ ಇಬ್ಬರು ಶಿಕ್ಷಕರ ಕುರಿತಂತೆ ನೊಡೋದಾದರೆ ಹೆಚ್ ಕೆ ಹುದ್ದಾರ ಮುಖ್ಯ ಗುರುಗಳು ಸರಕಾರಿ ಪ್ರೌಢಶಾಲೆ ಬರಟಗಿ ತಾಲೂಕು ವಿಜಯಪುರ ಗ್ರಾಮೀಣ,ಇನ್ನೇನು ನಿವೃತ್ತಿ ಅಂಚಿಗೆ ಬಂದಿದ್ದ ಇವರು ಉತ್ಸಾಹಿ ಆದರ್ಶ ಸರಳ ಸಜ್ಜನಿಕೆಯ ಶಿಕ್ಷಕ ರಾಗಿದ್ದರು.
ಇವರೊಂದಿಗೆ ಸಹ ಶಿಕ್ಷಕ ಸಂಗನಗೌಡ ಪಾಟೀಲ್ ಮೃತರಾಗಿರುವ ಶಿಕ್ಷಕರಾಗಿದ್ದಾರೆ. ಜಿಲ್ಲೆಯವರಾಗಿದ್ದ ಇವರು ಸಭೆಯನ್ನು ಮುಗಿಸಿಕೊಂಡು ಜೊತೆಯಲ್ಲಿ ಬರುವಾಗ ಈ ಒಂದು ಅಪಘಾತ ವಾಗಿದ್ದು ದುರಂ ತವೇ ಸರಿ.ರೂಪಾದೇವಿ ಶಾಲೆಯಲ್ಲಿ ಸಭೆಯನ್ನು ಮುಗಿಸಿ ಬರುವಾಗ ಬರುವಾಗ ಈ ಒಂದು ಘಟನೆ ಸೋಲಾಪುರ್ ರಸ್ತೆಯಲ್ಲಿ ನಡೆದಿದೆ ಒಟ್ಟಾರೆ ಏನೇ ಆಗಲಿ ಅಪಘಾತ ದಲ್ಲಿ ಇಬ್ಬರು ಆದರ್ಶ ಶಿಕ್ಷಕರು ಅಗಲಿದ್ದು ಇಲಾಖೆಗೆ ತುಂಬಲಾರದ ನಷ್ಟವಾಗಿದೆ.