ಬೆಂಗಳೂರು –
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಶಿಕ್ಷಕರ ವರ್ಗಾವಣೆ ವಿಚಾರ ಗಂಭೀರವಾಗುತ್ತಿದೆ. ಆವಾಗ ಈವಾಗ ಆಗುತ್ತದೆ ಎಂದುಕೊಂಡು ನಮ್ಮ ಶಿಕ್ಷಕರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದು ಇನ್ನೂ ವರ್ಗಾವಣೆಗೆ ಯಾರು ಕೂಡಾ ಸ್ಪಂದಿಸದ ಹಿನ್ನೆಲೆಯಲ್ಲಿ ಒಂದು ಕಡೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಚಳುವಳಿ ಆರಂಭ ಮಾಡಿದ ಬೆನ್ನಲ್ಲೇ ಈಗ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿ ದ್ದಾರೆ.
ಹೌದು ಇದೇ ತಿಂಗಳು 21ಕ್ಕೆ ಸರ್ಕಾರಿ ನೌಕರರ ದಿನಾಚರಣೆ ಇದೆ.ಈವರೆಗೆ ವರ್ಗಾವಣೆ ಕೂಗಿನ ಧ್ವನಿಗೆ ಯಾರು ಕೂಡಾ ಸ್ಪಂದಿಸದ ಹಿನ್ನೆಲೆಯಲ್ಲಿ ಈಗ ಅಂತಿಮವಾಗಿ ಸಿದಿದೆದ್ದು ಅದನ್ನು ಬಹಿಷ್ಕಾರ ಮಾಡಿ ಹೋರಾಟ ಪ್ರಾರಂಭ ಮಾಡಲು ಶಿಕ್ಷಕರು ದೊಡ್ಡ ತೀರ್ಮಾನ ಕೈಗೊಂಡಿದ್ದಾರೆ.
ವರ್ಗಾವಣೆ ವಿನಾಕಾರಣ ವಿಳಂಬ ಆಗುತ್ತಿರುವ ಕುರಿತು ಸಿಡಿದೆದ್ದ ನಮ್ಮ ಸರ್ಕಾರಿ ಶಿಕ್ಷಕರು ಈಗ ಮತ್ತೊಂದು ಅಸ್ತ್ರವನ್ನು ಬಳಸಲು ಮುಂದಾಗಿದ್ದಾರೆ
ಹೌದು ವರ್ಗಾವಣೆಗೆ ಯಾರು ಸ್ಪಂದಿಸದ ಹಿನ್ನೆಲೆ ಯಲ್ಲಿ ಈಗ ಬರುವ ಏಪ್ರಿಲ್ 21 ಕರಾಳ ದಿನ ಎಂದು ಘೋಷಣೆ ಮಾಡಿ ಅಂದು ಇರುವ ಸರ್ಕರಿ ನೌಕರರ ದಿನಾಚರಣೆಯನ್ನು ಕರಾಳ ದಿನವನ್ನು ಆಚರಿಸಲು ನಿರ್ಧಾರವನ್ನು ತಗೆದುಕೊಂಡಿದ್ದಾರೆ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ವರ್ಗಾವಣೆಗೆ ಸ್ಪಂದಿಸೊದು ಅವಶ್ಯಕತೆ ಇದೆ ಇಲ್ಲವಾದರೆ ಅವರದೇ ದಿನವನ್ನು ಕರಾಳ ದಿನವನ್ನು ಆಚರಿಸಲು ಎಲ್ಲಾ ನೌಕರರು ಪ್ಲಾನ್ ಮಾಡಿಕೊಂಡಿ ದ್ದು ಸರ್ಕಾರ ಶಿಕ್ಷಣ ಸಚಿವರು ಈಗಲಾದರೂ ಎಚ್ಚೆತ್ತುಕೊಳ್ಳುತ್ತಾರೆನಾ ಕಾದು ನೋಡಬೇಕು