ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹಳೆ ಪಿಂಚಣಿ ಜಾರಿ-ಎಂ ಬಿ ಪಾಟೀಲ್ ಭರವಸೆ ವಿಜಯಪುರ ದಲ್ಲಿ NPS ನೌಕರರಿಂದ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ……

Suddi Sante Desk
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹಳೆ ಪಿಂಚಣಿ ಜಾರಿ-ಎಂ ಬಿ ಪಾಟೀಲ್ ಭರವಸೆ ವಿಜಯಪುರ ದಲ್ಲಿ  NPS ನೌಕರರಿಂದ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ……

ವಿಜಯಪುರ

ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘ ಜಿಲ್ಲಾ ಘಟಕದ ವತಿಯಿಂದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಎಮ್ ಬಿ ಪಾಟೀಲ್ ರನ್ನು ಅವರ ಸ್ವಗೃಹದಲ್ಲಿ ಭೇಟಿಯಾಗಿ ಮುಂಬ ರುವ ಚಳಿಗಾಲದ ಅಧಿವೇಶನದಲ್ಲಿ ಎನ್‌ಪಿಎಸ್ ರದ್ದುಪಡಿಸಿ ಓಪಿಸ್ ಜಾರಿಗೊಳಿಸುವ ವಿಷಯ ಮಂಡಿಸಿ ಮತಕ್ಕೆ ಹಾಕುವಂತೆ ನಿರ್ಣಯ ಕೈ ಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು. ಪ್ರಸ್ತುತ ನೂತನ  ಪಿಂಚಣಿ ವ್ಯವಸ್ಥೆಯಿಂದ ನೌಕರರು ಅನುಭವಿಸುವ  ಸಂಕಷ್ಟವನ್ನು ಸುದೀರ್ಘವಾಗಿ ಚರ್ಚಿಸಲಾಯಿತು.

ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಶಾಸಕರು ತಕ್ಷಣವೇ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿ ಕೊಳ್ಳುವಂತೆ ಕರೆ ಮಾಡಿ ರಾಜ್ಯ ಘಟಕದವರಿಗೆ ನಿರ್ದೇಶನ ನೀಡಿದರು. ಇದಲ್ಲದೆ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಇದರ ಕುರಿತು ಪ್ರಶ್ನಾವಳಿ ಹಾಗೂ ತಮ್ಮ ಪರವಾಗಿ ವಾದಮಂ ಡಿಸಿ ತಮ್ಮ ಪಕ್ಷದ ವತಿಯಿಂದ ಹಳೆ ಪಿಂಚಣಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಮಲ್ಲನಗೌಡ ಹಡಲಗೇರಿ,ಪ್ರಧಾನ ಕಾರ್ಯ ದರ್ಶಿಗಳಾದ ಶಂಕರ ಖಂಡೇಕರ, ಮಾಧ್ಯಮ ಸಲಹೆಗಾರರಾದ  ಎಚ್,ಕೆ,ಬೂದಿಹಾಳ,ಗೌರವ ಸಲಹೆಗಾರರಾದ ಜಗದೀಶ ಬೊಳಸೂರ, ಸಂಘಟಕರಾದ ಮಲ್ಲಿಕಾರ್ಜುನ ಭೂಸಗೊಂಡ, ರಾಜು ಬಿಸನಾಳ,ಸಂತೋಷ ಕುಲಕರ್ಣಿ, ಚನ್ನಯ್ಯ ಮಠಪತಿ,ಸಂತೋಷ ಜಾಗಿರ್ ದಾರ್ ನಿಜು ಮೇಲಿನಕೇರಿ,ಆರ್,ಎಮ್ ಪಾಟೀಲ, ಆನಂದ ಕೆಂಭಾವಿ, ಸಂತೋಷ ಕಳ್ಳಿಗುಡ್ಡ, ಸಂತೋಷ ಯರಗಲ,ಪ್ರಭು ಬಿರಾದಾರ, ಸಂತೋಷ ತಳವಾರ,ಪ್ರಭು ಬಿರಾದಾರ, ಸಂತೋಷ ಬೂದಿಹಾಳ, ಸಂಗಮೇಶ ಬಂಡೆ, ಶ್ರೀಕಾಂತ ಮೈತ್ರಿ, ಸಿದ್ದರಾಮ ಕೋಳಿ, ಡಿ ಕೆ ತಾವಸೆ, ಶ್ರೀಶೈಲ ದೊಡಮನಿ, ಅರವಿಂದ ತಾವರಖೇಡ,ಅಶೋಕ ರಜಪೂತ, ಅಕ್ಕುಬಾಯಿ ನಾಯಕ, ಕವಿತಾ ಕಲ್ಯಾಣಪ್ಪಗೊಳ, ಲಕ್ಷ್ಮಿ ತೊರವಿ, ಎಸ್, ಎನ್, ಕನ್ನೂರ, ಅನೀಲ, ಕೋಟ್ಯಾಳ, ಜ್ಯೋತಿ ಹಿಪ್ಪರಗಿ,ಹಣಮಂತ ಇಂಡಿ, ಸುದರ್ಶನ ಜೇವೂರ, ಮಂಜುನಾಥ ಆರೇಶಂ ಕರ,ಕರ್ಜಗಿ, ಎಮ್, ಎನ್, ಪಾಟೀಲ, ಮುನ್ನಾ ಮೂಜಾವರ ಪ್ರಕಾಶ ಗಬ್ಬೂರು ಇದಲ್ಲದೆ

ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರ ಸಂಘದ ಜಿಲ್ಲಾ ಹಾಗೂ ವಿವಿಧ ತಾಲೂಕಾ ಘಟಕದ ಪದಾ ಧಿಕಾರಿಗಳು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ,ಶಿಕ್ಷಣ ಇಲಾಖೆ,ಲಿಪಿಕ ನೌಕರರು, ಸಾವಿತ್ರಿಬಾಯಿ ಫುಲೆ ಸಂಘದವರು,ಇದಲ್ಲದೆ ವಿವಿಧ ಇಲಾಖೆಯ ನೌಕರರು ಭಾಗವಹಿಸಿದ್ದರು.

ಸುದ್ದಿ ಸಂತೆ ನ್ಯೂಸ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.