ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ತಾವು ಕೊಟ್ಟ ಭರವಸೆ ಯನ್ನು ಈಡೇರಿಸಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಹೇಳಿದ್ದಾರೆ ಬೆಂಗಳೂರಿನಲ್ಲಿ ಮಾತನಾಡಿದ ಅವರು CM ಗೆ ಆಗ್ರಹ ವನ್ನು ಮಾಡಿ ಗಡುವು ನೀಡಿದ್ದಾರೆ ಷಡಾಕ್ಷರಿ ಅವರು ಇನ್ನೂ ಸ್ಪಂದಿಸದಿದ್ದರೆ ಸಂಘವು ಮುಂದಿನ ತೀರ್ಮಾನ ವನ್ನು ಕೈಗೊಳ್ಳಲಿದೆ ಎಂಬ ಎಚ್ಚರಿಕೆಯ ಸಂದೇಶವೊಂ ದನ್ನು ನೀಡಿದ್ದಾರೆ.ರಾಜ್ಯದ 2022-23 ನೇ ಸಾಲಿನ ಬಜೆಟ್ ನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಮಾದರಿ ಯಲ್ಲಿ ವೇತನ ಮತ್ತು ಭತ್ಯೆಗ ಳನ್ನು ಪರಿಷ್ಕರಿ ಸಲು ಅಧಿಕಾರಿಗಳ ವೇತನ ಸಮಿತಿ ರಚಿಸುವ ರಚಿಸುವ ನಿರೀಕ್ಷೆ ಇತ್ತು.ಆದರೆ ಬಜೆಟ್ ನಲ್ಲಿ ಸಮಿತಿ ರಚಿಸುವ ಕುರಿತು ಪ್ರಸ್ತಾಪವಿಲ್ಲ.ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಧಿಕಾರಿ ಗಳ ವೇತನ ಸಮಿತಿ ರಚಿಸ ಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಗ್ರಹಿಸಿದೆ.
ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ರಾಜ್ಯ ನೌಕರರಿಗೆ ಈ ಕುರಿತು ಪತ್ರ ಬರೆದಿದ್ದು ಅದರಲ್ಲಿ ಫೆಬ್ರವರಿ 25 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನವನ್ನು ನೀಡುವ ಭರವಸೆ ನೀಡಿದ್ದರು.ಇದರ ಹೊರತಾಗಿಯೂ ಇಂದಿನ ಬಜೆಟ್ ನಲ್ಲಿ ಅಧಿಕಾರಿಗಳ ವೇತನ ಸಮಿತಿ ರಚನೆ ಕುರಿತು ಪ್ರಸ್ತಾಪಿಸಿಲ್ಲ ಇದು ರಾಜ್ಯದ 6 ಲಕ್ಷ ಸರ್ಕಾರಿ ನೌಕರರು ಮತ್ತು ಅವರನ್ನು ಅವಲಂಬಿಸಿರುವ 30 ಲಕ್ಷ ಕುಟುಂಬ ಸದಸ್ಯರಿಗೆ ನಿರಾಸೆ ತಂದಿದೆ.
ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಭತ್ಯೆ ನೀಡುವಂತೆ ಶಿಫಾರಸು ಮಾಡಿದ್ದಾರೆ.ಇದೇ ವೇಳೆ ರಾಜ್ಯದ ಸಚಿವರು, ಸಂಸದರು ಹಾಗೂ ಶಾಸಕರೂ ಸಹ ಕೇಂದ್ರ ಮಾದರಿ ವೇತನಕ್ಕೆ ಶಿಫಾರಸು ಮಾಡಿದ್ದಾರೆ.
1-7-2022 ರಿಂದ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಭತ್ಯೆ ಪರಿಷ್ಕ ರಣೆ ಆಗಬೇಕಾಗಿದ್ದು ಈ ಹಿನ್ನೆಲೆಯಲ್ಲಿ ಈ ಆರ್ಥಿಕ ವರ್ಷದಲ್ಲೇ ರಾಜ್ಯ ಸರ್ಕಾರ ಅಧಿಕಾರಿಗಳ ವೇತನ ಸಮಿತಿ ರಚಿಸುವ ವಿಶ್ವಾಸವಿದೆ ಎಂದು ತಿಳಿಸಿದ್ಧಾರೆ.ಇನ್ನೂ ಇದೇ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ ಆಗೇ ಆಗುತ್ತದೆ ನಾವು ಬಿಡೊದಿಲ್ಲ ಎಂದರು
ಒಟ್ಟಾರೆ ಎಲ್ಲಾ ವಲಯಗಳಿಗೆ ಏನೇಲ್ಲಾ ಪ್ಯಾಕೇಜ್ ನೀಡಿದ ಮುಖ್ಯಮಂತ್ರಿ ಅವರಿಗೆ ರಾಜ್ಯದ ಸರ್ಕಾರಿ ನೌಕರರು ನೆನಪು ಆಗಲೇ ಇಲ್ಲ