ಶಹಾಪುರ –
ಸರ್ಕಾರಕ್ಕೆ ಮುಜುಗರ ತರದೆ ಹೋರಾಟದ ಹಾದಿ ತುಳಿ ಯದೇ ಶೇ 90ರಷ್ಟು ಬೇಡಿಕೆಗಳನ್ನು ಈಡೇರಿಸಿಕೊಂಡ ತೃಪ್ತಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಇದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.ಶಹಾಪುರ ನಗರದಲ್ಲಿ ಗುರುವಾರ ಶಹಾಪುರ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಬೆಳ್ಳಿ ಮಹೋತ್ಸವ ಅಂಗವಾಗಿ ನಡೆದ ಎನ್‌ಜಿಒ ಕಾಲೊನಿಗೆ ಭೀಮರೆಡ್ಡಿ ಬೈರೆಡ್ಡಿ ಕಾಲೊನಿ ಎಂಬ ನಾಮಕ ರಣ ಮತ್ತು ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಪದಾಧಿ ಕಾರಿಗಳಿಗೆ ಅಭಿನಂದನೆ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿವಿಧ ಇಲಾಖೆಯ ಹುದ್ದೆಗಳು ಭರ್ತಿಯಾಗಿಲ್ಲ. ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಬಡ್ತಿ ನನೆಗುದಿಗೆ ಬಿದ್ದಿದೆ.ಹಳೆಯ ಪಿಂಚಣಿ ಸಮಗ್ರವಾಗಿ ಜಾರಿಗೆ ಬರಬೇಕು ಎಂಬ ಬೇಡಿಕೆ ಇದೆ ಇವೆಲ್ಲವುಗಳ ಬಗ್ಗೆ ಪ್ರಾಮಾಣಿಕವಾಗಿ ಸ್ಪಂದಿಸುವೆ ಎಂದು ಭರವಸೆ ನೀಡಿದರು
ಇನ್ನೂ ತಾಲ್ಲೂಕಿನ ನೌಕರರ ಸಂಘದ ಸಂಘಟಿತ ಶಕ್ತಿ ಮಾದರಿಯಾಗಿದೆ ಬರುವ ತಿಂಗಳಲ್ಲಿ 6 ಲಕ್ಷ ನೌಕರರು ಮತ್ತು ಅವರ ಕುಟುಂಬ ವರ್ಗಕ್ಕೆ ಉತ್ತಮ ಚಿಕಿತ್ಸೆಗೆ ಅವಕಾಶ ದೊರಕಲಿದೆ.ಕೇಂದ್ರದ ಮಾದರಿಯಲ್ಲಿ ವೇತನ ಜಾರಿಗಾಗಿ ಹೆಚ್ಚು ಪ್ರಯತ್ನ ಮಾಡಲಾಗುತ್ತಿದೆ. 2022ರ ಜುಲೈ ವೇಳೆಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಹೋರಾಟಕ್ಕೆ ಸರ್ವರೂ ಸಜ್ಜಾಗಬೇಕೆಂದರು
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಯಪ್ಪಗೌಡ ಹುಡೇದ,ಸಾಹಿತಿ ಸಿದ್ದರಾಮ ಹೊನಕಲ,ಜಿಲ್ಲಾ ಘಟಕದ ಅಧ್ಯಕ್ಷ ಮಹಿಪಾಲ ರೆಡ್ಡಿ, ಮಲ್ಲಿಕಾರ್ಜುನ ಬಳ್ಳಾರಿ, ಭೀಮ ರೆಡ್ಡಿ ಬೈರೆಡ್ಡಿ,ನಗರಸಭೆ ಅಧ್ಯಕ್ಷೆ ಕಮಲಾಬಾಯಿ ಚಂದ್ರಶೇ ಖರ್,ರಾಜು ಟೆಂಗಳಿ,ರಾಜೇಂದ್ರಕುಮಾರ,ಭೀಮಣ್ಣ ನಾಯಕ,ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ, ಬಿ.ಎಚ್.ಸೂರ್ಯವಂಶಿ,ಮೋಹನಕುಮಾರ ಶ್ರೀನಿವಾಸ, ಹೇಮರೆಡ್ಡಿ ಪಾಟೀಲ,ಎಂ.ನಾರಾಯಣ,ಗೌಡಪ್ಪ ತೊನಸಳ್ಳಿ,ಎನ್.ಸಿ.ಪಾಟೀಲ,ಪ್ರಶಾಂತ,ರಾಮಕೃಷ್ಣ ಕಟ್ಟಾವಳಿ,ಲಕ್ಷ್ಮಣ ಲಾಳಸೇರಿ ಇದ್ದರು.