ಚಿಕ್ಕಮಗಳೂರು – ರಾಜ್ಯದಲ್ಲಿ ಪಿಎಫ್‌ಐ ಸಂಘಟನೆ ಬಾಲಬಿಚ್ಚಿದ್ರೆ ಬಾಲ ಅಷ್ಟೇ ಅಲ್ಲ, ತಲೆನೂ ಕಟ್ ಮಾಡಬೇಕಾಗುತ್ತೆ ಅಂತಾ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ.
ಚಿಕ್ಕಮಗಳೂರಿಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ ಟಿ ರವಿ, ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ ಕಟೀಲ್ ಕಚೇರಿಗೆ ಪಿಎಫ್‌ಐ ಕಾರ್ಯಕರ್ತರು ಮುತ್ತಿಗೆ ಹಾಕಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ED ತನಿಖೆ ಮಾಡಬೇಡಿ ಎನ್ನುವುದಕ್ಕೆ ಇವರ‌್ಯಾರು ಅಂತಾ ಪ್ರಶ್ನಿಸಿದ ಸಿ ಟಿ ರವಿ, ಕುಂಬಳಕಾಯಿ ಕಳ್ಳ ಎಂದ್ರೆ ಇವರು ಯಾಕೆ ಹೆಗಲು ಮುಟ್ಟಿಕೊಂಡು ನೋಡ್ತಾರೆ ಅಂತಾ ಪಿಎಫ್‌ಐ ವಿರುದ್ಧ ಕಿಡಿಕಾರಿದರು.ಭಾರತ ಇರುವುದು ಭಯೋತ್ಪಾದನೆ ಮಾಡಲು ಅಲ್ಲ, ಭಯೋತ್ಪಾದನೆಗೆ ವಿದೇಶದಿಂದ ಹಣ ಬರುವುದನ್ನ ತಡೆಯಲು ತನಿಖೆ ನಡೆಯಬೇಕಿದೆ ಅಂತಾ ಸಿ ಟಿ ರವಿ ಹೇಳಿದರು.