ಬೆಂಗಳೂರು –
ಕೋವಿಡ್ ಸೋಂಕು ಇಳಿಕೆಯಾದರೆ ಅಕ್ಟೋಬರ್ ಮೊದಲ ವಾರದಲ್ಲೇ ಪ್ರಾಥಮಿಕ ತರಗತಿ ಆರಂಭಿ ಸಲು ಚಿಂತಿಸಲಾಗಿತ್ತು.ಗಣೇಶ ಹಬ್ಬಕ್ಕೂ ಮುನ್ನ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡಿತ್ತು ಆದರೆ ಕಳೆದ ಎರಡು ಮೂರು ದಿನಗಳಿಂದ ಮತ್ತೆ ಏರಿಕೆ ಕಂಡಿದೆ.ಕೊರೋನ ಪಾಸಿಟಿವಿಟಿ ದರ ಹೀಗೆ ಏರಿಕೆ ಯಾದರೆ ತರಗತಿ ತೆರೆಯುವ ವಿಚಾರ ಮುಂದೂಡ ಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಈಗಾಗಲೇ ಹಂತ ಹಂತವಾಗಿ 6ನೇ ತರಗತಿಯಿಂದ ಕಾಲೇಜು ತರಗತಿಗಳು ಆರಂಭಗೊಂಡಿದ್ದು ಪಾಠ ಪ್ರವಚನ ನಡೆಯುತ್ತಿವೆ.ಪ್ರಾಥಮಿಕ ಹಂತದ ಒಂದ ರಿಂದ 5ನೇ ತರಗತಿಯನ್ನು ಆರಂಭಿಸಲಿಕ್ಕೂ ಖಾಸಗಿ ಶಾಲೆಗಳು ಒತ್ತಾಯಿಸುತ್ತಿವೆ.ಮೂರನೇ ಅಲೆಯ ಬಗ್ಗೆ ಸರಕಾರ ಗಮನ ಹರಿಸುತ್ತಿದೆ.ಮಕ್ಕಳ ಮೇಲೆ ಪರಿಣಾಮ ಬೀರಬಹುದಾದ ಬಗ್ಗೆ ಚರ್ಚೆ ನಡೆಯುತ್ತಿದೆ.ಇತ್ತ ಟಾಸ್ಕ್ ಫೋರ್ಸ್ ಕೂಡ ತುಂಬಾ ಗಂಭೀರವಾಗಿ ಅಧ್ಯಯನ ಮಾಡುತ್ತಿದೆ ಅಧಿವೇಶನ ಮುಗಿದ ನಂತರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಲಿದ್ದಾರೆ.ಸಮಿತಿ ನೀಡುವ ಸಲಹೆ ಸೂಚನೆ ಮೇರೆಗೆ ತರಗತಿ ಆರಂಭ ಮಾಡುವ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ.ಒಂದು ವೇಳೆ ಕೊರೋನ ಪಾಸಿಟಿವಿಟಿ ದರ ಏರಿಕೆಯಾದರೆ ಪ್ರಾಥಮಿಕ ತರಗತಿ ತೆರೆಯುವ ವಿಚಾರ ಮುಂದೂ ಡಲಾಗುತ್ತೆ ಎಂದು ಇಲಾಖೆಯ ಮೂಲಗಳು ಸ್ವಷ್ಟ ಪಡಿಸಿವೆ.