ಶೆ%25 ಮಿತಿ ತೆಗೆದರೆ ಶಾಲೆಗೆ ಕೀಲಿ ಬೀಳುವುದಿಲ್ಲ …ಶಿಕ್ಷಣ ಸಚಿವರೇ ವಸ್ತು ಸ್ಥಿತಿ ಶಿಕ್ಷಕರ ಪರಿಸ್ಥಿತಿ ಅರ್ಥ ಮಾಡ್ಕೊಳಿ…..

Suddi Sante Desk

ಬೆಂಗಳೂರು –

ಶೇಕಡಾ ಇಪ್ಪತ್ತೈದು ಮಿತಿ ತೆಗೆಯಬೇಕು ಅಂತ ವಿನಂತಿ ಮಾಡಿದಾಗ ಶಿಕ್ಷಣ ಸಚಿವರರ ಬಂದಿರತಕ್ಕಂತ ಉತ್ತರ ವಿದು.ಶೇಕಡಾ ಇಪ್ಪತ್ತೈದು ತಗೆದರೆ ಶಾಲೆಗೆ ಬೀಗ ಹಾಕ್ಬೇಕಾ ಗತ್ತೆ ಅಂತಾ ಶಿಕ್ಷಣ ಸಚಿವರು MLCಗಳ ಮುಂದೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಸಚಿವರೇ ಶೆ%25.ಇದರ ಬಗ್ಗೆ ಕೆಲವೊಂದು ಅಭಿಪ್ರಾಯಗಳು 1)ತಾಲ್ಲೂಕಿನ ಹೊರಗಡೆ ಹೋಗಲಿಕ್ಕೆ ಸಾಮಾನ್ಯ ಕೋರಿಕೆ ವರ್ಗಾವಣೆಗೆ ಶೇಕಡಾ 2% ಮಿತಿ ಇರುತ್ತದೆ.ಹಾಗಾದ್ರೆ ತಾಲ್ಲೂಕಿನಿಂದ ಶಿಕ್ಷಕರ ಸಂಖ್ಯೆ ಬೆರಳೆಣಿಕೆಯಷ್ಟು ಇರುತ್ತದೆ ಎಲ್ಲರೂ ತಾಲ್ಲೂಕಿನಿಂದ ಹೊರ್ಗಡೆ ಹೋಗಲಿಕ್ಕೆ ಸಾಧ್ಯವಿಲ್ಲ ಶೇಕಡಾ ರ ಮಿತಿ 2 ಮುಗಿದ ಮೇಲೆ ತಾಲ್ಲೂಕು ಬ್ಲಾಕ್ ಆಗತ್ತೆ.ತಾವು ಈ ವಸ್ತುಸ್ಥಿತಿ ಬಗ್ಗೆ ಗಂಭೀರವಾಗಿ ಚಿಂತನ ಮಂಥನ ಮಾಡ್ಬೇಕೆಂದು ನೋಂದ ಶಿಕ್ಷಕರ ಅಭಿಪ್ರಾಯ

2)ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿರುವ ಅತಿಥಿ ಶಿಕ್ಷಕರ ಗಳ ಸಂಖ್ಯೆ ಲಭ್ಯವಿವೆ.ಅವರನ್ನು ಶೇಕಡಾ ಇಪ್ಪತ್ತೈದರ ಮಿತಿ ಇರುವ ತಾಲ್ಲೂಕಿಗಳಿಗೆ Contact base ಅಡಿಯಲ್ಲಿ ನೇಮಕ ಮಾಡಿ ಖಾಲಿ ಇರುವ ತಾಲ್ಲೂಕಿಗಳ ನೀವು ಭರ್ತಿ ಮಾಡಬಹುದು ಅಲ್ಲವೇ ಶಿಕ್ಷಣ ಸಚಿವರೇ ….

3)ಕಲ್ಯಾಣ ಕರ್ನಾಟಕದಲ್ಲಿ ಬಹುಶಃ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು 5 ನೂರು 6 ನೂರು 7 ನೂರು ಕಿಲೋ ಮೀಟರ್ ದೂರದಿಂದ ಬಂದವರು ಅಂಥವರೂ ಇದ್ದಾರೆ.ಸುಮಾರು ಹತ್ತು ಹದಿನೈದು ಇಪ್ಪತ್ತು ವರ್ಷ ಸೇವೆ ಸಲ್ಲಿಸುತ್ತಿದ್ದಾರೆ ಇವರು ಎಲ್ಲರೂ ಶೇಕಡಾ ಇಪ್ಪತ್ತೈದು ಮಿತಿ ತಾಲ್ಲೂಕು ಗಳಲ್ಲಿ ಸೇವೆ ಸಲ್ಲಿಸುವವರೂ ಇದ್ದಾರೆ.ಇಂತಹ ದೂರದ ಜಿಲ್ಲೆಯಿಂದ ಬಂದು ಇಷ್ಟೊಂದು ವರ್ಷ ಸೇವೆ ಸಲ್ಲಿಸಿದ ಕಾರಣಕ್ಕಾಗಿ ಅವರು ಜಾಗಕ್ಕೆ ಸಮೀಪ ಇರುವ ಶಾಲೆಯ ಶಿಕ್ಷಕರಿಗೆ ನಿಯೋಜನೆ ಮಾಡುವ ಮೂಲಕ ಅಂಥವರಿಗೆ ವರ್ಗಾವಣೆಗೆ ಅನುವುಮಾಡಿ ಕೊಡಬಹುದಲ್ಲವೇ ಶಿಕ್ಷಣ ಸಚಿವರೇ ಅವರಿಗೂ ಕೂಡ ತಮ್ಮ ಊರು ಮನೆ ಮಠ ಕುಟಂಬ ಸಂಸಾರ.ಇದೆಯಲ್ವೆ ಶಿಕ್ಷಣ ಸಚಿವರೇ ತಾವು ಇದು ಗಂಭೀರ ಅರ್ಥ ಮಾಡ್ಕೋಬೇಕು

ಕಲ್ಯಾಣ ಕರ್ನಾಟಕದಲ್ಲಿ ಹತ್ತು ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ 1 ಬಾರಿಗೆ ಮುಕ್ತವಾಗಿ ಅವರು ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡಿ ಅವರಿಗೆ ಅನುಕುಲ ಮಾಡಿ ಕೊಡಬೇಕು.ಶಿಕ್ಷಣ ಸಚಿವರೇ ಮೊನ್ನೆ ಪ್ರೆಸ್‌ ಮೀಟ್ ಸಂದರ್ಭದಲ್ಲಿ ವರ್ಗಾವಣೆ ಬಗ್ಗೆ ಮಾತಾಡುವಾಗ ತಾವು ಆಡಿದ ಮಾತುಗಳು ನಿಮಗೆ ನೆನಪಿ ಮಾಡಿಕೊಳ್ಳುತ್ತೇನೆ ಕೇಳಿರಿ

ನೀವು ಆಡಿದ ಮಾತುಗಳು ಏನಂದ್ರೆ ಪಾಪ ಕಡ್ಡಾಯ ವರ್ಗಾವಣೆ ಅಡಿಯಲ್ಲಿ ಉಡುಪಿ ಮೈಸೂರು ಮಂಗಳೂ ರು ಜಿಲ್ಲೆಯಲ್ಲಿ ಮಹಿಳಾ ಶಿಕ್ಷಕರು ಬೆಂಗಳೂರು ನಿಂದ ಅಂತಹ ಜಿಲ್ಲೆಗೆ ದೂರದ ಜಿಲ್ಲೆಗೆ ಮುನ್ನೂರು ನಾನೂರು ಕಿಲೋಮೀಟರ್ ನಿಯೋಜನೆ ಮಾಡಿದ್ದಾರೆ ವರ್ಗಾವಣೆ ಮಾಡಿದ್ದರೆ ಅಂಥವರಿಗೆ ಪಾಪ ಭಾಳಾ ಕಷ್ಟ ವಾಯಿತು ನನಗೆ ಬಹಳ ಬೇಜಾರಾಯಿತು.ಅವರು ಬಂದು ನನ್ನ ಮುಂದೆ ತನ್ನ ಅಳಲು ಹೇಳಿದಾಗ ನಾನು ಅವರಿಗೆ ಭರವಸೆ ಕೊಟ್ಟೆ ನಿಮಗೆ ಮುಂದಿನ ದಿನದಲ್ಲಿ ನಾನು ಖಂಡಿತಾ ಈ ಪಾಪದ ಪಿಂಡದಿಂದ ಪಾರುಮಾಡುತ್ತನೆ.ಅಂತ ಈ ಮಾತು ಆಡಿದ್ರಿ ಅದಕ್ಕೆ ಸಂಬಂಧಪಟ್ಟ ನನ್ನ ಕೆಲವೊಂದು ಪ್ರಶ್ನೆಗಳು 6 ತಿಂಗಳ ಸೇವೆ ಪೂರ್ಣ ಆಗದಿದ್ದರೂ ಮತ್ತೆ ಅನುವು ಮಾಡ್ಲಿಕ್ಕೆ ನೀವು ಸಜ್ಜಾಗಿದಿರಲ್ಲ ಶಿಕ್ಷಣ ಸಚಿವರೇ ಕಡ್ಡಾಯ ವರ್ಗಾವಣೆ ದವರಿಗೆ ಕಲ್ಯಾಣ ಕರ್ನಾಟಕದಲ್ಲಿ 5ನೂರು 6ನೂರು ಕಿಲೋ ಮೀಟರ್ ದಿಂದ ಬಂದು ಹತ್ತು ಹದಿನೈದು ವರ್ಷ ಸೇವೆ ಸಲ್ಲಿಸಿದವರು ನಿಮ್ಮ ಕಣ್ಣಿಗೆ ಕಾಣುತ್ತಲ್ವಾ ಶಿಕ್ಷಣ ಸಚಿವರೇ

ಜನರು ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತಾರೆ ಡಿ ಮಾಡಿ ಶಿಕ್ಷಣ ಸಚಿವರೇ ಅರ್ಥ ಮಾಡ್ಕೊಳಿ ಶೇಕಡಾ ಎಪ್ಪತ್ತೈದು ತೆಗೆಯೋದ್ರಿಂದ ಎಲ್ಲರೂ ಶಿಕ್ಷಕರ ವರ್ಗಾವಣೆ ಆಗುವು ದಿಲ್ಲ ಅರ್ಥ ಮಾಡ್ಕೊಳಿ ಶೇಕಡಾ ಮಿತಿ ಇದ್ದೇ ಇರುತ್ತದೆ ತಾಲ್ಲೂಕಿನಿಂದ ಅಬ್ಬಬ್ಬಾ ಅಂದ್ರೆ ಹತ್ತರಿಂದ ಹನ್ನೆರಡು ಶಿಕ್ಷಕರು ಮಾತ್ರ ವರ್ಗಾವಣೆ ಹಾಕ್ತಾರೆ ಇದು ಕಟ್ಟಿಟ್ಟಬುತ್ತಿ ನೆನಪು ಮಾಡ್ಕೊಳ್ಳಿ ಶಿಕ್ಷಕರಿಗೆ ವರ್ಗಾವಣೆಗೆ ಅನುವು ಮಾಡಿಕೊಡಬೇಕೆಂದು ಈ ಮೂಲಕ ನೊಂದ ಶಿಕ್ಷಕ ಮಾಡುವ ಕಳಕಳಿಯ ವಿನಂತಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.