ಬೆಂಗಳೂರು –

ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ವರ್ಗಾವಣೆಯ ನಿರೀಕ್ಷೆಯಲ್ಲಿರುವ ನಾಡಿನ ಶಿಕ್ಷಕರು ಈಗ ಸಿಡಿದೆದ್ದಿ ದ್ದಾರೆ.ಈವರೆಗೆ ವರ್ಗಾವಣೆ ಪ್ರಕ್ರಿಯೆ ಆರಂಭವಾಗು ತ್ತದೆ ಮಾಡ್ತಾರೆ ಎಂದುಕೊಂಡಿದ್ದ ಶಿಕ್ಷಕರು ಕಾದು ಕಾದು ಬೇಸತ್ತಿದ್ದಾರೆ. ಈಗಾಗಲೇ ಸಚಿವ ಸಂಪುಟ ದಲ್ಲಿ ಒಪ್ಪಿಗೆಯನ್ನು ಪಡೆದು ರಾಜ್ಯಪಾಲರಿಂದಲೂ ಕಡತಕ್ಕೂ ಕೂಡಾ ಹಸಿರು ನಿಶಾನೆ ಸಿಕ್ಕಿದ್ದು ಇದರ ನಡುವೆ ನಾಡಿನ ಶಿಕ್ಷಕರಿಗೆ ವರ್ಗಾವಣೆ ಆರಂಭವಾ ಗುತ್ತದೆ ಈ ಕುರಿತಂತೆ ಅವರಿಗೆ ಇವರಿಗೆ ಭೇಟಿ ಯಾಗಿ ಮನವಿ ನೀಡಲಾಗಿದೆ ಎಂದು ಹೇಳಿ ಅವರ ಮಾತುಗಳನ್ನು ಕೇಳಿ ಕೇಳಿ ಈವರೆಗೆ ತಾಳ್ಮೆಯಿಂದ ಕಾಯುತ್ತಿದ್ದ ಶಿಕ್ಷಕರು ಈಗ ಆಕ್ರೋಶಗೊಂಡಿದ್ದಾರೆ.

ಈ ಕುರಿತಂತೆ ಯಾವಾಗ ವರ್ಗಾವಣೆ ಪ್ರಕ್ರಿಯೆ ಆರಂಭವಾಗುತ್ತದೆ ಆರಂಭವಾಗುತ್ತದೆನಾ ಇಲ್ಲ ಎಂಬ ಕುರಿತಂತೆ ಕೇಳಿ ಕೇಳಿ ಕಾದು ಕಾದು ಬೇಸತ್ತ ಶಿಕ್ಷಕರು ಈಗ ವರ್ಗಾವಣೆ ಮಾಡಿಸಿ ಇಲ್ಲವೆ ರಾಜೀ ನಾಮೆ ನೀಡಿ ಎಂದು ಕೇಳುತ್ತಿದ್ದಾರೆ. ಹೌದು ನಿಮ್ಮ ಕೈಯಲ್ಲಿ ವರ್ಗಾವಣೆ ಮಾಡಿಸಲಾಗಿದ್ದರೆ ದಯ ಮಾಡಿ ನಿಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ ಎಂದು ಶಿಕ್ಷಕರ ಸಂಘಟನೆಯ ನಾಯಕರನ್ನು ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರು ಪ್ರಶ್ನೆ ಮಾಡ್ತಾ ಇದ್ದಾರೆ. ಸಂಘಟನೆಯ ನಾಯಕರು ಮತ್ತು ಶಿಕ್ಷಣ ಸಚಿವರಿಗೆ ಕಡ್ಡಿ ತುಂಡಾದಂತೆ ಕೇಳುತ್ತಿದ್ದಾರೆ.

ಅದರಲ್ಲೂ ಕಳೆದ ಒಂದು ವಾರದಿಂದ ಈ ಒಂದು ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರು ಸಿಡಿದ್ದೆ ದ್ದಾರೆ ಅಂದುಕೊಂಡಂತೆ ಆಗಿದ್ದರೆ ಸಧ್ಯ ವರ್ಗಾವಣೆ ಮುಗಿಯಬೇಕಿತ್ತು ಆದರೆ ಈವರೆಗೆ ಮಾತ್ರ ಆ ಒಂದು ಕೆಲಸ ಆಗುತ್ತಿಲ್ಲ ಹೀಗಾಗಿ ಈವರೆಗೆ ಕಾದು ಕಾದು ಬೇಸತ್ತ ನಾಡಿನ ಶಿಕ್ಷಕರು ಈಗ ಅಂತಿಮವಾಗಿ ಬೇಸತ್ತು ವರ್ಗಾವಣೆ ಮಾಡಿಸಿ ಇಲ್ಲವಾದರೆ ನಿಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ನೀಡಿ ಹೋಗಿ ಎಂಬ ಬೇಡಿಯನ್ನು ಇಟ್ಟಿದ್ದು ಇದರಿಂದ ಸಂಘಟನೆ ಯ ನಾಯಕರು ಮುಂದೇನು ಮಾಡ್ತಾರೆ ಎಂಬುದ ನ್ನು ಕಾದು ನೋಡಬೇಕು.