ಬೆಂಗಳೂರು –
ಸ್ವಾಭಿಮಾನವಿದ್ದರೆ ಶಿಕ್ಷಕರ ಗಂಭೀರ ಸಮಸ್ಯೆ ಗಳನ್ನು ಪರಿಹರಿಸಿ – ರಾಜ್ಯಾಧ್ಯಂತ ಜೋರಾ ಗುತ್ತಿದೆ ನೊಂದುಕೊಂಡಿರುವ ಶಿಕ್ಷಕರ ಕೂಗು
ಹೌದು ಶಿಕ್ಷಕರ ಕೆಲವೊಂದಿಷ್ಟು ಸಮಸ್ಯೆಗಳ ಕುರಿತಂತೆ ರಾಜ್ಯದ ಅದೇಷ್ಟೋ ಶಿಕ್ಷಕರು ಬೇಸತ್ತಿದ್ದಾರೆ.ಯಾರಿಗೂ ಯಾವ ಇಲಾಖೆಗೂ ಇಲ್ಲದ ಕೆಲ ನಿಮಯಗಳಿಂದ ಶಿಕ್ಷಕರು ಬೇಸತ್ತಿದ್ದು ಇನ್ನೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂಬ ಮಾತುಗ ಳನ್ನು ರಾಜ್ಯದ ಶಿಕ್ಷಕರು ಹೇಳುತ್ತಿದ್ದಾರೆ.
ಸಾಮಾಜಿಕ ಜಲ ತಾಣಗಳಲ್ಲಿ ಈ ಕುರಿತಂತೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ನಮ್ಮ ಪಿ ಎಸ್ ಟಿ ಶಿಕ್ಷಕರ ಬಳಗಕ್ಕೆ ಸಿಗಬೇಕಾದ ಬಡ್ತಿ ಮತ್ತು ಆರರಿಂದ ಎಂಟನೇ ತರಗತಿಗೆ ಬಡ್ತಿ ಮತ್ತು ಪ್ರೌಢಶಾಲೆಗೆ ಬಡ್ತಿ A.m.to H.M. H M.to S.H.M. ಬಡ್ತಿ ಇವುಗಳ ಬಗ್ಗೆ ಹೋರಾಟ ಸಂಘ ಟನೆ ಮಾಡೋದು ಬಿಟ್ಟು ವೇತನ ಮಾಡಿಸಿದೆವು.
ಎಸ್ ಆರ್ ಎಲ್ ಪಿ ಸಿ ಕಳಿಸಿದೆವು ಎಫ್ ಎ ಮಾಡಿಸಿದೆವು ಇಂಥವುಗಳು ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಯಾಲಯದ ಸಿಬ್ಬಂದಿ ಇದ್ದಾರೆ ನೀವು ಮಾಡಬೇಕಾದುದ್ದನ್ನು ಬಿಟ್ಟು ಮಾಡಲಾರದನ್ನು ಮಾಡಿದ್ದೇವೆ ಎಂದು ಹೇಳುತ್ತೀರಿ ನಿಮಗೆ ಸ್ವಾಭಿಮಾನ ವಿದ್ದರೆ PST ಶಿಕ್ಷಕರ ಗಂಭೀರವಾದ ಸಮಸ್ಯೆಗಳನ್ನು ಬಗೆಹರಿ ಸಲು ಪ್ರಮಾಣಿಕ ಪ್ರಯತ್ನವನ್ನು ಮಾಡಿ
ಆ ಪ್ರಯತ್ನಕ್ಕೆ ಫಲ ಸಿಗದಿದ್ದಲ್ಲಿ ತರಗತಿ ಬಹಿಷ್ಕಾ ರಕ್ಕೆ ಕರೆ ಕೊಡಿ ಅದನ್ನು ಬಿಟ್ಟು ಕೇವಲ ಕಛೇರಿ ಸಿಬ್ಬಂದಿಯವರು ಮಾಡುವ ಕೆಲಸವನ್ನು ನಾವು ಮಾಡಿಸಿದ್ದೇವೆ ಎಂದು ಹೇಳುವುದನ್ನು ಬಿಟ್ಟು ಶಿಕ್ಷಕರಿಗೆ ನ್ಯಾಯಯುತವಾದಂತ ಬೇಡಿಕೆಗಳನ್ನು ಈಡೇರಿಸಿರಿ ಜಿಪಿಟಿ ಶಿಕ್ಷಕರ ಸಂಘದ ನೋಡಿ ಕಲಿಯಿರಿ ಅದು ಆಗದಿದ್ದರ ಶಿಕ್ಷಕರೊಂದಿಗೆ ವಿಲೀನವನ್ನು ಮಾಡಿ ಬಿಡಿ
ಆ ಸಂಘದವರ ಸಂಖ್ಯೆ ಕಮ್ಮಿ ಇದೆ ಆದರೆ ಅವರ ಹೋರಾಟ ಅವರ ಕಾನೂನಾತ್ಮಕ ಹೋರಾಟ ಅದು ಶ್ಲಾಘನೀಯ 1,30000 ಶಿಕ್ಷಕರ ಪ್ರತಿನಿಧಿ ಗಳು ನೀವು ಯಾವ ಕಾನೂನು ಹೋರಾಟ ಮಾಡಿದ್ದೀರಿ ಅದನ್ನು ಫಾಲೋ ಮಾಡಿದ ಬಗ್ಗೆ ವಿವರ ಕೊಡಿರಿ ದೊಡ್ಡದು ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘ ಎಂದು ರಾಜ್ಯದ ಮೂಲೆ ಮೂಲೆ ಗಳಿಂದ ಶಿಕ್ಷಕರು ನೊಂದುಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಹೊರಹಾಕುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..