ಹುಬ್ಬಳ್ಳಿ –
ಚಿಗರಿಯಲ್ಲಿ ಮಿತಿ ಮೀರಿ ಪ್ರಯಾಣಿಕರ ಸಂಚಾರ – ಬಸ್ ನಲ್ಲಿ ಡ್ರೈವರ್ ಕಾರ್ಯವೈಖರಿ ಪರೀಕ್ಷೆ ಮಾಡುವ ನಿಮಗೆ ಇದ್ಯಾವುದು ನಿಮ್ಮ ಗಮನಕ್ಕೆ ಬಂದಿಲ್ವಾ ಡಿಸಿ ಸಾಹೇಬ್ರೆ…..ನಿವೇ ಕೊಟ್ಟಿರುವ ದಾಖಲೆ ಇದೆ ಒಮ್ಮೆ ನೋಡಿ
ರಸ್ತೆ ಮೇಲೆ ಸಂಚಾರ ಮಾಡುವ ಪ್ರತಿಯೊಂದು ವಾಹನಗಳು ಕೂಡಾ ಎಷ್ಟು ಜನ ಪ್ರಯಾಣಿಸಬ ಹುದು ಎಂಬ ಸಾಮರ್ಥ್ಯವನ್ನು ಹೊಂದಿರುತ್ತವೆ ಇದಕ್ಕೆ ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಗಳು ಕೂಡಾ ಹೊರತಾಗಿಲ್ಲ.ಅವಳಿ ನಗರದ ಮಧ್ಯೆ ತಿರುಗಾ ಡುತ್ತಿರುವ ಈ ಒಂದು ಬಸ್ ಗಳಲ್ಲಿ 38 ಆಸನ ಗಳಿಗೆ ಮಾತ್ರ ಅವಕಾಶವನ್ನು ಸಾರಿಗೆ ಅಧಿಕಾರಿ ಗಳು ಅನುಮತಿಯನ್ನು ನೀಡಿದ್ದಾರೆ.
ಆಸನಗಳ ಅನುಗುಣವಾಗಿ ಅಷ್ಟೇ ಜನರು ಪ್ರಯಾಣಿಸಬೇಕು ಎಂಬೊದು ನಿಜ. ಹೀಗಿರು ವಾಗ ಸಧ್ಯ ಈ ಒಂದು ಚಿಗರಿ ಬಸ್ ನ್ನು ನೋಡಿದರೆ ಪ್ರತಿಯೊಂದು ಬಸ್ ನಲ್ಲೂ ಪ್ರಯಾಣಿಕರು ನಿಂತುಕೊಂಡು ಪ್ರಯಾಣ ಮಾಡುತ್ತಿರುವುದು ಕಂಡು ಬರುತ್ತಿದೆ.38 ಆಸನಗಳು ಭರ್ತಿಯಾಗಿ ಬಸ್ ನಲ್ಲಿ ಹೆಚ್ಚಿನ ಜನರು ನಿಂತುಕೊಂಡು ಬರೊಬ್ಬರಿ 75 ರಿಂದ 100 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿರು ವುದು ಕಂಡು ಬರುತ್ತಿದೆ.
ಚಿಗರಿ ಬಸ್ ಗಳು ಆರಂಭಗೊಂಡು ಐದಾರು ವರ್ಷಗಳು ಕಳೆದಿವೆ ಸರಿಯಾದ ನಿರ್ವಹಣೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣಕ್ಕಾಗಿ ಸಧ್ಯ ಬಸ್ ಗಳ ಪರಸ್ಥಿತಿ ಸರಿಯಾಗಿಲ್ಲ ನುರಿತ ಹಿರಿಯ ಚಾಲಕರು ಇದ್ದಾರೆ ಎಂಬ ಒಂದೇ ಒಂದು ಕಾರಣಕ್ಕಾಗಿಯೇ ಬಸ್ ಗಳಲ್ಲಿ ದೈರ್ಯದಿಂದ ಪ್ರಯಾಣಿಸಬಹುದು ಆದರೆ ನಿಗದಿತ ಸಂಖ್ಯೆ ಗಿಂದ ಅಧಿಕ ಪ್ರಮಾಣದಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿರುವ ಆಘಾತಕಾರಿ ವಿಚಾರವನ್ನು ಇಲಾಖೆಯ ಅಧಿಕಾರಿಗಳು ಯಾಕೆ ಗಂಭಿರವಾಗಿ ತಗೆದುಕೊಂಡಿಲ್ಲ
ಹುಬ್ಬಳ್ಳಿ ಮತ್ತು ಧಾರವಾಡ ಡಿಪೋ ಗಳಲ್ಲಿ 15 ಕ್ಕೂ ಹೆಚ್ಚು ಬಸ್ ಗಳು ದುರಸ್ತಿಗಾಗಿ ನಿಂತುಕೊಂ ಡಿದ್ದು ಸಾಮಾನುಗಳು ಇಲ್ಲದ ಕಾರಣಕ್ಕಾಗಿ ನಿಂತಲ್ಲೇ ನಿಂತುಕೊಂಡಿದ್ದು ಇನ್ನೂ ಇತ್ತ ಪ್ರತಿದಿನ ರಸ್ತೆ ಮೇಲೆ ಐದಾರು ಬಸ್ ಗಳು ಬಿಡಿಯಾಗು ತ್ತಿದ್ದು ಇದರಿಂದಾಗಿ ಬಸ್ ಗಳ ಕೊರತೆಯಿಂದಾಗಿ ಸಧ್ಯ ಸಾರ್ವಜನಿಕರು ಒಂದೊಂದು ಬಸ್ ನಲ್ಲೂ ಕಿಕ್ಕಿರಿದು ಪ್ರಯಾಣ ಮಾಡುತ್ತಿದ್ದು ಈಗಷ್ಟೇ ಡಿಸಿಯಾಗಿ ಇಲಾಖೆಗೆ ಬಂದಿರುವ ಸಿದ್ದಲಿಂಗಯ್ಯ ಸಾಹೇಬ್ರೆ ಡ್ರೈವರ್ ಗಳ ಕಾರ್ಯವೈಖರಿಯನ್ನು ಕದ್ದು ಮುಚ್ಚಿ ಬಸ್ ನಲ್ಲಿ ಪ್ರಯಾಣಿಸಿ ನೋಡುವ ನಿಮಗೆ ಕಿಕ್ಕಿರಿದು ಪ್ರಯಾಣ ಮಾಡುತ್ತಿರುವ ಈ ಒಂದು ಸಮಸ್ಯೆ ಕಂಡಿಲ್ವೆ ಗಮನಕ್ಕೆ ಬಂದಿಲ್ವಾ
ನೀವೆ ನೀಡಿರುವ ದಾಖಲೆಯಲ್ಲಿ ಮಾಹಿತಿ ಇದೆ ಒಮ್ಮೆ ನೋಡಿ.ಏನೋ ಸಣ್ಣ ಪುಟ್ಟ ತಪ್ಪು ಮಾಡಿ ದರೆ ಡ್ರೈವರ್ ಮೇಲೆ ಕ್ರಮವನ್ನು ಕೈಗೊಳ್ಳುವ ಅಧಿಕಾರಿಗಳ ಮೇಲೆ ಸಾರಿಗೆ ಇಲಾಖೆಯ ಅಧಿ ಕಾರಿಗಳು ಈ ಕೂಡಲೇ ಕ್ರಮವನ್ನು ಕೈಗೊಳ್ಳೊ ವುದು ಅವಶ್ಯಕವಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..