SSK ಸಮಾಜದ ಬಗ್ಗೆ ಕಾಳಜಿ ಇದ್ದರೆ ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ನೀಡಿ ಬೆಂಬಲಿಸಿ ರಾಜು ಅನಂತಸಾ ನಾಯಕವಾಡಿ ಒತ್ತಾಯ – ರಾಜಕೀಯಗೊಸ್ಕರ ಸಮಾಜವನ್ನು ಉಪಯೋಗ ಮಾಡಿಕೊಳ್ಳದೆ ಸಮಾಜವನ್ನು ಬೆಂಬಲಿಸಿ ಬೆಳಿಸಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ರಾಜು ನಾಯಕವಾಡಿ ಆಗ್ರಹ…..

Suddi Sante Desk
SSK ಸಮಾಜದ ಬಗ್ಗೆ ಕಾಳಜಿ ಇದ್ದರೆ ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ನೀಡಿ ಬೆಂಬಲಿಸಿ ರಾಜು ಅನಂತಸಾ ನಾಯಕವಾಡಿ ಒತ್ತಾಯ – ರಾಜಕೀಯಗೊಸ್ಕರ ಸಮಾಜವನ್ನು ಉಪಯೋಗ ಮಾಡಿಕೊಳ್ಳದೆ ಸಮಾಜವನ್ನು ಬೆಂಬಲಿಸಿ ಬೆಳಿಸಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ರಾಜು ನಾಯಕವಾಡಿ ಆಗ್ರಹ…..

ಹುಬ್ಬಳ್ಳಿ

SSK ಸಮಾಜದ ಬಗ್ಗೆ ಕಾಳಜಿ ಇದ್ದರೆ ಲೋಕ ಸಭಾ ಚುನಾವಣೆಯಲ್ಲಿ ಟಿಕೇಟ್ ನೀಡಿ ಬೆಂಬಲಿಸಿ ರಾಜು ಅನಂತಸಾ ನಾಯಕವಾಡಿ ಒತ್ತಾಯ – ರಾಜಕೀಯಗೊಸ್ಕರ ಸಮಾಜವನ್ನು ಉಪಯೋಗ ಮಾಡಿಕೊಳ್ಳದೆ ಸಮಾಜವನ್ನು ಬೆಂಬಲಿಸಿ ಬೆಳಿಸಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ರಾಜು ನಾಯಕವಾಡಿ ಆಗ್ರಹವನ್ನು ಮಾಡಿದ್ದಾರೆ

ದಿನದಿಂದ ದಿನಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು ನಗರ ಸೇರಿದಂತೆ ಜಿಲ್ಲೆ ಯಲ್ಲಿ ಒಟ್ಟು ಜನಸಂಖ್ಯೆಯ ಪ್ರಮಾಣದಲ್ಲಿ ಎಸ್ ಎಸ್ ಕೆ ಸಮಾಜವು ಕೂಡಾ ಒಂದಾಗಿದೆ. ಆರ್ಥಿಕವಾಗಿ ಶೈಕ್ಷಣಿಕವಾಗಿ ಈ ಒಂದು ಸಮಾ  ಜವು ತುಂಬಾ ಹಿಂದೂಳಿದಿದ್ದು ಕಾಂಗ್ರೇಸ್ ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷದವರು ಈ ಒಂದು ಸಮಾಜವನ್ನು ರಾಜಕೀಯಗೊಸ್ಕರ ಬಳಸಿಕೊಳ್ಳುತ್ತಿದ್ದಾರೆ

ಸಮಾಜಕ್ಕೆ ಏನು ಕೊಡುಗೆ ನೀಡಿಲ್ಲ ಎಂದು ಸಮಾಜದ ಯುವ ಮುಖಂಡ ಎನ್ ಸಿಪಿ ಜಿಲ್ಲಾಧ್ಯಕ್ಷ ರಾಜು ಅನಂತಸಾ ನಾಯಕವಾಡಿ ಹೇಳಿದ್ದಾರೆ.ನಮ್ಮದೇಯಾದ ಸಮಾಜದರಾದ ಶ್ರೀಕಾಂತ್ ಪೂಜಾರ ಅವರ ಬಂಧನವನ್ನು ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷದವರು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ

ಸಮಾಜದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಬರುವ ಲೋಕಸಭಾ ಚುನಾವಣೆಯಲ್ಲಿ ಸಮಾಜವನ್ನು ಬೆಂಬಲಿಸಿ ಸಮಾಜಕ್ಕೆ ಟಿಕೇಟ್ ನೀಡಿ ಎಂದು ಹೇಳಿದ್ದಾರೆ.ಪತ್ರಿಕಾ ಪ್ರಕಟಣೆಯ ಮೂಲಕ ಈ ಒಂದು ಹೇಳಿಕೆಯನ್ನು ನೀಡಿರುವ ಅವರು ರಾಜಕೀಯ ನಾಯಕರಿಗೆ ಪಕ್ಷದವರಿಗೆ ಎಸ್ ಎಸ್ ಕೆ ಸಮಾಜದ ಬಗ್ಗೆ ಕಾಳಜಿ ಇದ್ದರೆ ಬರುವ ಲೋಕಸಭಾ ಚುನಾವಣೆಯಲ್ಲಿ ಸಮಾಜ ದವರಿಗೆ ಟಿಕೇಟ್ ನೀಡಿ ಬೆಂಬಲಿಸಿ ಎಂದು ಒತ್ತಾ ಯವನ್ನು ಮಾಡಿದ್ರು.

ಎಸ್ ಎಸ್ ಕೆ ಅಂದರೆ ಸೋಮವಂಶ ಸಹಸ್ರಾ ರ್ಜುನ ಕ್ಷತ್ರಿಯ ಸಮಾಜವು ಅವಳಿ ನಗರದ ಸೇರಿದಂತೆ ಜಿಲ್ಲೆಯಲ್ಲಿ ಒಂದೂವರೆ ಲಕ್ಷದಷ್ಟು ಮತದಾರರಿದ್ದು ಹೀಗಾಗಿ ಈವರೆಗೆ ಸಮಾಜ ವನ್ನು ಕೇವಲ ಲಾಭಗೋಸ್ಕರ ಬಳಕೆ ಮಾಡಿ ಕೊಂಡು ಬರುತ್ತಿರುವುದು ಕಂಡು ಬರುತ್ತಿದೆ ಎಂದಿದ್ದಾರೆ.

ಹೀಗಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ನೀಡಿ ಬೆಂಬಲ ನೀಡಿ ಕಾಟಾಚಾರಕ್ಕೆ ಮತಗೋಸ್ಕರ ಸಮಾಜವನ್ನು ಬಲಿ ಪಶು ಮಾಡಬೇಡಿ.ಅಶೋಕ ಕಾಟವೆ ನಂತರ ಸಮಾ ಜದಲ್ಲಿ ಈವರೆಗೆ ಯಾರು ಕೂಡಾ ಜನಪ್ರತಿ ನಿಧಿಗಳಾಗಿಲ್ಲ

ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಮತದಾರರಿದ್ದಾರೆ ಹೀಗಾಗಿ ಈ ಬಾರಿ ಸಮಾಜಕ್ಕೆ ಇದೊಂದು ಅವ ಕಾಶವನ್ನು ನೀಡುವಂತೆ ಆಗ್ರಹಿಸಿದರು.ಇನ್ನೂ ರಾಜಕೀಯ ನಾಯಕರಿಗೆ ಪಕ್ಷದವರಿಗೆ ಸಮಾ ಜಕ್ಕೆ ನಿಮ್ಮ ಕೊಡುಗೆ ಏನು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಸಮಾಜಕ್ಕೆ ನಿಗಮ ಮಂಡಳಿ ಇಲ್ಲ ಸಮಾಜ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದೂಳಿದಿದೆ ರಾಜಕೀಯವಾಗಿ ಬೆಳೆಯಲು ಪಕ್ಷಗಳು ಮತಗಳಿಗೊಸ್ಕರ ಉಪಯೋಗವಾಗುತ್ತಿದೆ ಹಲವಾರು ದಶಕಗಳಿಂದ ಬಿಜೆಪಿಗೆ ಬೆನ್ನೇಲು ಬಾಗಿ ನಿಂತುಕೊಂಡಿದ್ದರೂ

ಕೂಡಾ ಸ್ಬಂದಿಸುತ್ತಿಲ್ಲ ನೋಡುತ್ತಿಲ್ಲ ಸಮಾಜದ ಪರಸ್ಥಿತಿ ಗಂಭೀರವಾಗಿದ್ದು ಚುನಾವಣೆ ಇದ್ದಾಗ ಮಾತ್ರ ಭೇಟಿ ಕೊಟ್ಟು ಮತ ಪಡೆಯುತ್ತಾರೆ ಆ ಮೇಲೆ ಸಮಾಜಕ್ಕೆ ಏನು ಮಾಡೊದಿಲ್ಲ ಎಸ್ ಎಸ್ ಕೆ ಸಮಾಜದ ಕೆಲ ಮುಖಂಡರನ್ನು ತಮ್ಮ ಕಂಟ್ರೋಲ್ ಗೆ ಇಟ್ಟುಕೊಂಡಿದ್ದಾರೆಂದಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.