ನಿವೇನಾದರೂ ಮುಖ್ಯಮಂತ್ರಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಿರಾ ತಪ್ಪದೇ ಈ ನಿಮಯಗಳನ್ನು ಪಾಲಿಸಿ – ನಿಮಯಗಳನ್ನು ಪಾಲಿಸದಿದ್ದರೆ ನಿಮಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿಗೊದಿಲ್ಲ ಅವಕಾಶ ರಾಜ್ಯ ಸಂಘದಿಂದ ಸೂಚನೆಗಳ ಸಂದೇಶ

Suddi Sante Desk
ನಿವೇನಾದರೂ ಮುಖ್ಯಮಂತ್ರಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಿರಾ ತಪ್ಪದೇ ಈ ನಿಮಯಗಳನ್ನು ಪಾಲಿಸಿ –  ನಿಮಯಗಳನ್ನು ಪಾಲಿಸದಿದ್ದರೆ ನಿಮಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿಗೊದಿಲ್ಲ ಅವಕಾಶ  ರಾಜ್ಯ ಸಂಘದಿಂದ ಸೂಚನೆಗಳ ಸಂದೇಶ

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರಿಗಾಗಿ 7ನೇ ವೇತನ ಸಮಿತಿಗಾಗಿ ಅಧ್ಯಕ್ಷರ ನೇಮಕ ಹಿನ್ನಲೆಯಲ್ಲಿ ನಾಳೆ ಮುಖ್ಯಮಂತ್ರಿ ಬಸನರಾಜ ಬೊಮ್ಮಾಯಿ ಅವರಿಗೆ ರಾಜ್ಯ ಸರ್ಕಾರಿ ನೌಕರರ ರಾಜ್ಯ ಘಟಕ ದಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿ ಕೊಳ್ಳಲಾಗಿದ್ದು ಇನ್ನೂ ಈ ಒಂದು ಕಾರ್ಯಕ್ರಮ ದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸರ್ಕಾರಿ ನೌಕರರು ಪಾಲ್ಕೊಳ್ಳಲಿದ್ದು ಹೀಗಾಗಿ ಆಗಮಿಸುವ ನೌಕರರಿಗೆ ಮುಖ್ಯಮಂತ್ರಿ ಕಚೇರಿಯ ಸೂಚ ನೆಯ ಹಿನ್ನಲೆಯಲ್ಲಿ ಕೆಲವೊಂದಿಷ್ಟು ಭದ್ರತೆ ಮತ್ತು ಇಥರೆ ಕಾರಣಗಳಿಂದಾಗಿ ಮಾರ್ಗ ಸೂಚಿಗಳನ್ನು ನೀಡಲಾಗಿದೆ.

ಮುಖ್ಯಮಂತ್ರಿಗಳ ಅಭಿನಂದನಾ ಕಾರ್ಯ ಕ್ರಮದಲ್ಲಿ ಭಾಗವಹಿಸುವ ನೌಕರರು ಭದ್ರತಾ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಕ್ರಮವ ಹಿಸಲು ಕೋರಿದೆ

ಇಲಾಖೆಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ನೌಕರರು ಧರಿಸಿಕೊಂಡು ಬರಬೇಕು

ಕಪ್ಪು ಬಟ್ಟೆ ಧರಿಸಿದವರಿಗೆ ಕಾರ್ಯಕ್ರಮದ ವೇದಿಕಯಲ್ಲಿ ಅವಕಾಶ ಇರುವುದಿಲ್ಲ

ಬೆಂಕಿ ಪೆಟ್ಟಿಗೆ ಹಾಗೂ ಮಾದಕ ವಸ್ತುಗಳನ್ನು ಕಾರ್ಯಕ್ರಮದ ವೇದಿಕೆಯಲ್ಲಿ ನಿಷೇಧಿಸಿದೆ

ಹರಿತ ಆಯುಧಗಳನ್ನು ನಿಷೇಧಿಸಿದೆ          ಲಗೇಜ್ ಬ್ಯಾಗ್ ಗಳನ್ನು ಕೇಂದ್ರ ಸಂಘದಲ್ಲಿ ಅಥವಾ ಉಳಿದುಕೊಂಡ ವಸತಿ ಸ್ಥಳಗಳಲ್ಲಿ ಬಿಟ್ಟು ಬರಬೇಕು

ಶಿಸ್ತು, ಸೌಜನ್ಯ ಮತ್ತು ಶಾಂತಿ ಕಾಪಡುವ ಕಡೆ ಹೆಚ್ಚಿನ ಆದ್ಯತೆ ನೀಡಬೇಕು,ಬೆಲೆಬಾಳುವ ಆಭರಣಗಳು ಮತ್ತು ವಸ್ತುಗಳ ಬಗ್ಗೆ ವೈಯಕ್ತಿಕ ಎಚ್ಚರಿಕೆ ವಹಿಸಬೇಕು.

ಈ ಮೇಲಿನ ಅಂಶಗಳೊಂದಿಗೆ ಪರಸ್ಪರ ಸಹಕಾರದೊಂದಿಗೆ ಸಮಾರಂಭದಲ್ಲಿ ಗೌರವಾನ್ವಿತ ಆಮಂತ್ರಿತ ರಾಜ್ಯದ ಸರ್ಕಾರಿ ನೌಕರರು ಪಾಲ್ಗೊಂಡು ಯಶಸ್ವಿಗೊಳಿಸಲು ಈ ಮೂಲಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಘಟಕದ ಸರ್ವ ಸದಸ್ಯರು ಕೋರಿದ್ದಾರೆ.

ರಕ್ಷಿತ್ ಜೊತೆ ಗೌತಮ್ ಸುದ್ದಿ ಸಂತೆ ನ್ಯೂಸ್ ಬೆಂಗಳೂರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.