This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ವಯಸ್ಸು ಮೂರು – ಕೇಳಿದ್ರೆ ಹೇಳೊದು ನೂರು ಮಕ್ಕಳ ದಿನಾಚರಣೆ ವಿಶೇಷ

WhatsApp Group Join Now
Telegram Group Join Now

ತುಮಕೂರು –

ಆ ಪೋರನಿಗಿನ್ನೂ ಕೇವಲ ಮೂರು ವರ್ಷ ಕೇಳಿದ್ರೆ ನೂರು ವರುಷದ ಇತಿಹಾಸವನ್ನು ಪಟ ಪಟನೇ ಹೇಳ್ತಾನೆ. ಸಾಮಾನ್ಯವಾಗಿ ಈ ವಯವಸ್ಸಿನ ಮಕ್ಕಳು ಅಬ್ಬಬ್ಬಾ ಅಂದ್ರೆ ಅಪ್ಪ,ಅಮ್ಮ,ಇನ್ನೂ ಸ್ವಲ್ಪ ಟ್ರೈ ಮಾಡಿದ್ರೆ ತಾತ ಅಜ್ಜಿಯನ್ನ ಗುರುತಿಸಬಹುದು..ಆದ್ರೆ ಇಲ್ಲೊಬ್ಬ ಪುಟಾಣಿ ಕಂದ ಇಡೀ ಭಾರತದ ಗಮನ ಸೆಳೆದಿದ್ದಾನೆ..ಸೌರಮಂಡಲ, ಭೂ ಮಂಡಲ, ಗಣ್ಯರು, ವಸ್ತುಗಳು ಹೀಗೆ ಏನೇ ಕೇಳಿದ್ರೂ ಪಟಾ ಪಟಾ ಅಂತ ಹೇಳುವ ಮಗುವಿನ ಕುರಿತಾಗಿ ಮಕ್ಕಳ ದಿನಾಚರಣೆಗೆ ಒಂದು ವಿಶೇಷ ಸ್ಟೋರಿ .

ಹೆಸರು,ಅನ್ವಿಕ್ ದೇವ್ ಮೆಕ್ಲಾರನ್ ಅಂತಾ,,ಕಲ್ಪತರು ನಾಡು ತುಮಕೂರಿನವ್ರು.ವಯಸ್ಸು 3 ಇನ್ನು ಬಾಯಲಿ ಬರೋ ತೊದಲು ನುಡಿ, ಅದೇ ತೊದಲು ನುಡಿಯಲ್ಲೇ ರಾಜ್ಯಗಳ ರಾಜಧಾನಿ, ಸೌರ ಮಂಡಲ, ದೇಶದ ಗಣ್ಯರು, ಪ್ರಮುಖ ವಿಚಾರಗಳನ್ನು ಹೇಳೋ ಮುಗ್ದ ಮಗು,,ಈ ಪುಟ್ಟ ಪ್ರತಿಭೆ ತನ್ನ 3ನೇ ವರ್ಷದಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದಾನೆ. ತುಮಕೂರು ನಗರದ ವಿಜಯಕುಮಾರ್ ಹಾಗೂ ಅನುಷಾ ದಂಪತಿಯ ಮಗನಾದ ಅನ್ವಿಕ್ ದೇವ್ ಮೆಕ್ಲಾರನ್ ಅನ್ನೋ 3 ವರ್ಷದ ಪುಟ್ಟ ಬಾಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೊಸದಾಗಿ ಸೇರ್ಪಡೆಯಾಗಿದ್ದಾನೆ.

ಅಲ್ಲದೇ ಕೆಲವೇ ಕೆಲವು ಮಕ್ಕಳು ಮಾಡುವಂತಾ ಸಾಧನೆಯನ್ನ ಮಾಡಿ ತುಮಕೂರಿಗೊಂದು ಹಿರಿಮೆಯ ಗರಿ ತಂದಿದ್ದಾನೆ.ಅಪ್ರತಿಮ ನೆನಪಿನ ಶಕ್ತಿಯನ್ನು ಹೊಂದಿರುವ ಬಾಲಕನಿಗೆ ಅಗಾಧವಾದ ನೆನಪಿನ ಶಕ್ತಿ ಈತನಿಗೆ ವರವಾಗಿ ಬಂದಿದೆ..
ಕೊರೋನಾ ಲಾಕ್ ಡೌನ್ ನಿಂದ ಈವರೆಗೆ ಶಾಲೆಗಳು ಇನ್ನೂ ಆರಂಭವಾಗಿಲ್ಲ ಈಗಷ್ಟೇ ಆನ್ ಲೈನ್ ಕ್ಲಾಸ್ ಗಳು ಆರಂಭವಾಗಿದ್ದು ಇದರಿಂದ ಬಹುತೇಕ ಮಕ್ಕಳಿಗೆ ವಿದ್ಯಾಭ್ಯಾಸದ ಲಿಂಕ್ ತಪ್ಪಿದ್ದು ಮನೆಯಲ್ಲಿದ್ದುಕೊಂಡು ಟಿವಿ ನೋಡೊದು ಇಲ್ಲವೇ ತಿನ್ನೊದು ಅಬ್ಬಾಬ್ಬ ಅಂದರೆ ಮನೆಯ ಹೊರಗಡೆ ಅಲ್ಲೇ ಇಲ್ಲೇ ಆಟವಾಡೊದು ಇದನ್ನು ಬಿಟ್ಟರೇ ಮಕ್ಕಳಿಗೆ ಯಾವುದೇ ಚಟುವಟಿಕೆಗಳಿಲ್ಲ.ಇವಲ್ಲದರ ನಡುವೆ ಈಗಷ್ಟೇ ಆನ್ ಲೈನ್ ಕ್ಲಾಸ್ ಗಳು ಆರಂಭವಾಗಿದ್ದು ಸಂತಸದ ವಿಷಯವಾಗಿದ್ದು .

ಇನ್ನೂ ಶಾಲಾ ಮಕ್ಕಳು ಹೊಸದಾಗಿ ಏನು ಕಲಿತಿದ್ದಾರೋ ಗೊತ್ತಿಲ್ಲಾ,,ಆದ್ರೇ ಕಲಿತಿರೋದನ್ನ ಮರೆತಿರೋದಂತು ಸತ್ಯ.ಇದೇ ಲಾಕ್ ಡೌನ್ ಅನ್ನ ಸದ್ಭಳಕೆ ಮಾಡಿಕೊಂಡ ಈ ಪೋಷಕರು, ಅನ್ವಿಕ್ ಗೆ ಸಾಕಷ್ಟು ತಯಾರಿ ಮಾಡಿದ್ದಾರೆ.ಈ ಪುಟ್ಟ ಬಾಲಕ ತನ್ನ ಅಪ್ರತಿಮ ನೆನಪಿನ ಶಕ್ತಿ ಹಾಗೂ ಬುದ್ಧಿಶಕ್ತಿಯಿಂದ ಹೇಳಿರುವ ವಿಷಯಗಳು ಭಾರತ ರಾಷ್ಟಗೀತೆ, 3 ಭಾರತೀಯ ರಾಷ್ಟ್ರೀಯ ನಾಯಕರುಗಳು ಹಾಗೂ ಅವರ ಹೇಳಿಕೆಗಳು, ಸೌರವ್ಯೂಹ ಅದರ ಗ್ರಹಗಳು, ಪಂಚೇಂದ್ರಿಯಗಳು ಹಾಗೂ ಅದರ ಕಾರ್ಯಗಳು, ಪ್ರಪಂಚದ ನೂತನ 7 ಅದ್ಭುತಗಳು, 14 ರಾಷ್ಟ್ರೀಯ ಚಿಹ್ನೆಗಳು, ಕನ್ನಡ ಹಿಂದಿ, ಇಂಗ್ಲಿಷ್ ಅಕ್ಷರಮಾಲೆಗಳು. 17 ವಿರುದ್ಧ ಪದಗಳು 15 ರಾಜ್ಯದ ರಾಜಧಾನಿಗಳು, ಟ್ರಾಫಿಕ್ ಚಿಹ್ನೆಗಳು, 40 ಪ್ರಾಣಿಗಳ ಹೆಸರುಗಳು, 15 ಬಣ್ಣಗಳು, 16 ವಿವಿಧ ವೃತ್ತಿಗಳು, 12ಕಂಪ್ಯೂಟರ್ ಬಿಡಿ ಭಾಗಗಳು, 9 ವ್ಯಾಕರಣ ಚಿಹ್ನೆಗಳು ಹೀಗೆ ಎಲ್ಲವನ್ನೂ ಬಾಯಲ್ಲಿ ಅರಳು ಹುರಿದಂತೆ ಪಟ ಪಟನೆ ಹೇಳುತ್ತಾನೆ.


ಬಾಲಕನ ತಂದೆ ತಾಯಿ ಮೂಲತಃ ಉಪನ್ಯಾಸಕರುಗಳು ಆಗಿರುವ ದಂಪತಿಗಳು ಮಗನ ಆಪ್ರತಿಮ ಸಾಧನೆಗೆ ಹಾಗೂ ತುಮಕೂರು ನಗರಕ್ಕೆ ತಂದ ಕೀರ್ತಿಗೆ ಹರ್ಷ ವ್ಯಕ್ತ ಪಡಿಸಿದ್ದಾರೆ..ಅಲ್ಲದೇ ನಮ್ಮ ಮಗನನ್ನ ಒಳ್ಳೆಯ ವಿದ್ಯಾವಂತ ಬುದ್ದಿವಂತನನ್ನಾಗಿ ಮಾಡ್ಬೇಕು ಎಂಬುದು ಇವರ ಆಶಯ ಕೂಡ..ಲಾಕ್ ಡೌನ್ ಒಳ್ಳೆಯ ರೀತಿಯಲ್ಲಿ ಸದ್ಭಳಕೆಯಾದ್ರೇ ಏನೆಲ್ಲಾ ಫಲಿತಾಂಶ ಸಿಗುತ್ತೆ ಅನ್ನೋದಕ್ಕೆ ಅನ್ವಿಕ್ ನಿಜವಾದ ಉದಾಹರಣೆಯಾಗಿದ್ದು ಮಕ್ಕಳ ದಿನಾಚರಣೆಯ ದಿನದಂದು ಈ ಬಾಲಕನ ಸಾಧನೆ ಇನ್ನೀತರ ಮಕ್ಕಳಿಗೆ ಪ್ರೇರಣೆಯಾಗಿ ಒಳ್ಳೇಯದಾಗಲಿ ಟಿವಿ ಮೊಬೈಲ್ ಟೈಮ್ ಪಾಸ್ ಎಂದುಕೊಂಡು ಸಮಯವನ್ನು ಹಾಳು ಮಾಡದೇ ಇವನ ಹಾಗೇ ವಿದ್ಯಾವಂತರಾಗಲಿ ಎಂಬುದೇ ನಮ್ಮ ಸುದ್ದಿ ಸಂತೆ ವೇಬ್ ನ್ಯೂಸ್ ಆಶಯವಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk