ಧಾರವಾಡ –
ಧಾರವಾಡ ತಾಲೂಕಿನ ಯಾದವಾಡ ಗ್ರಾಮದ 35 ವರ್ಷದ ಮಾದೇವಿ ಕೋಂ ಬಸಪ್ಪ ಕುಂಬಾರ ಎಂಬ ಮಹಿಳೆ ನವೆಂಬರ್ 7, 2022 ರಂದು ಮುಂಜಾನೆ 10 ಗಂಟೆಗೆ ಯಾದವಾಡ ಗ್ರಾಮದ ತನ್ನ ಮನೆಯಿಂದ ಹೋದವಳು ಮನೆಗೆ ಮರಳಿ ಬಂದಿರುವುದಿಲ್ಲಾ ಎಂದು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಮಹಿಳೆಯ ಎತ್ತರ 4 ಫೂಟ್ 8 ಇಂಚು ಎತ್ತರ, ಗೋದಿಗೆಂಪು ಮೈ ಬಣ್ಣ. ಮೈ ಯಿಂದ ದಪ್ಪ, ದುಂಡು ಮುಖ, ನೆಟ್ಟನೆ ಮೂಗು, ತಲೆಯಲ್ಲಿ ಕಪ್ಪು ಕೂದಲು ಇವೆ. ಗುಲಾಬಿ ಬಣ್ಣದ ಸೀರೆ, ಕೆಂಪು, ನೀಲಿ, ಮತ್ತು ಕಪ್ಪು ಬಣ್ಣ ಮಿಶ್ರಿತ ಚಿಕ್ಕಿ ಇರುವ ಜಂಪರ ಉಡುಪು ಧರಿಸಿದ್ದಾರೆ. ಮತ್ತು ಕನ್ನಡ ಹಾಗೂ ಹಿಂದಿ ಮಾತನಾಡುತ್ತಾರೆ. ಇವರ ಸುಳಿವು ಸಿಕ್ಕವರು ಗರಗ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ನೀಡಬಹುದು ಎಂದು ಗರಗ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಗರಗ…..