ಧಾರವಾಡ –
ಧಾರವಾಡ ನಗರದ ಎತ್ತಿನಗುಡ್ಡ ದ 26 ವರ್ಷದ ಲಕ್ಷ್ಮೀ ಕೋಂ ದುರ್ಗಪ್ಪ ಜಮನಾಳ ಎಂಬ ಮಹಿಳೆ ಜುಲೈ 21, 2023 ರಂದು ಬೆಳಿಗ್ಗೆ 9-15 ಗಂಟೆ ಸುಮಾರಿಗೆ ಮನೆಯಿಂದ ಹೇಳದೆ ಕೆಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ ಎಂದು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಮಹಿಳೆಯ ಎತ್ತರ 5 ಫೂಟ್, ಸಧೃಡ ಮೈಕಟ್ಟು, ಗೋಧಿಗೆಂಪು ಮೈ ಬಣ್ಣ, ದುಂಡು ಮುಖ, ಅಗಲವಾದ ಮೂಗು, ತಲೆ ಯಲ್ಲಿ 1.5 ಫೂಟ ತೆಳ್ಳಗಿನ ಮೈಕಟ್ಟು, ದುಂಡು ಮುಖ, ದಪ್ಪ ಮೂಗು, ತಲೆಯಲ್ಲಿ ಉದ್ದನೆಯ ಕಪ್ಪು ಕೂದಲು, ಹಣೆಯ ಮೇಲೆ ಕಪ್ಪು ಹಚ್ಚೆಯ ಕಲೆ ಇದೆ.
ಎರಡು ಕೈಗಳ ಮೇಲೆ ಗಂಡ ಹಾಗೂ ತನ್ನ ಮಕ್ಕಳ ಹೆಸರನ್ನು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಅಚ್ಚೆ ಹಾಕಿಸಿರುತ್ತಾಳೆ. ಕರಿ ಹಾಗೂ ಬಿಳಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಕನ್ನಡ, ಭಾಷೆಯನ್ನು ಮಾತನಾಡುತ್ತಾಳೆ.
ಇವರ ಸುಳಿವು ಸಿಕ್ಕವರು ತಮ್ಮ ಠಾಣಾ ವ್ಯಾಪ್ತಿ ಯಲ್ಲಿ ಕಂಡು ಬಂದಲ್ಲಿ ಅಥವಾ ಏನಾದರು ಮಾಹಿತಿ ಲಭ್ಯವಾದಲ್ಲಿ ತಕ್ಷಣ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಂಟ್ರೋಲ್ ರೂಮ್-
0836-2233555/100 ಅಥವಾ ಧಾರವಾಡ ಉಪನಗರ ಪೊಲೀಸ್ ಠಾಣೆ-0836-2233511/9480802033 ಗೆ, ಪಾಲಕರು-9945595276 ಸಂಪರ್ಕಿಸಬ ಹುದೆಂದು ಉಪನಗರ ಪೊಲೀಸ್ ಠಾಣಾಧಿಕಾ ರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..