ಕೊಪ್ಪಳ –
ಕಳೆದ ಮೂವತ್ತು ವರ್ಷಗಳಿಂದ ಸಾವಿರಾರು ಮಕ್ಕಳಿಗೆ ಪಾಠ ಹೇಳುವ ಮೂಲಕ ಅವರ ಬದುಕು ರೂಪಿಸಿದ ನಿವೃತ್ತ ಶಿಕ್ಷಕಿಯೊಬ್ಬರು ಈಗ ಬದುಕಿಗಾಗಿ ನರೇಗಾ ದಲ್ಲಿ ಕೆಲಸ ಮಾಡತಾ ಇದ್ದಾರೆ.ಹೌದು ನಿವೃತ್ತಿ ಬಳಿಕ ಆ ಶಿಕ್ಷಕಿಗೆ ಹೆತ್ತ ಮಕ್ಕಳು ಸಹಾಯಕ್ಕೆ ಬರಲಿಲ್ಲ.ಆಗ ಆ ಶಿಕ್ಷಕಿಗೆ ದಾರಿದೀಪವಾಗಿದ್ದು ನರೇಗಾ ಯೋಜನೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದ ನಿವಾಸಿ ಯಾಗಿರುವ ಎಂ.ವೀರಮ್ಮ ಎಂಬುವವರೇ ನರೇಗಾದಡಿ ಕೆಲಸ ಮಾಡುತ್ತಿರುವ ನಿವೃತ್ತ ಶಿಕ್ಷಕಿ.ಮೊದಲಿಗೆ ಅದೇ ಗ್ರಾಮದಲ್ಲಿನ ಖಾಸಗಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ವೀರಮ್ಮ ಅವರು 2020 ರಲ್ಲಿ ನಿವೃತ್ತಿ ಹೊಂದಿದ್ದರು. ನಿವೃತ್ತಿ ಹೊಂದಿದ ಮೇಲೆ ಕುಟುಂಬ ನಿರ್ವಹಣೆ ಕಷ್ಟಕರ ವಾದ ಹಿನ್ನೆಲೆ ಅವರಿಗೆ ಆಸರೆಯಾಗಿದ್ದೇ ನರೇಗಾ ಯೋಜನೆ.
ವೀರಮ್ಮ ಹಾಗೂ ಅವರ ಪತಿಗೆ ಆಸರೆಯಾಗಬೇಕಿದ್ದ ಏಕೈಕ ಪುತ್ರ ಇಳಿ ವಯಸ್ಸಿನಲ್ಲಿ ಹೆತ್ತವರಿಂದ ಅಂತರ ಕಾಯ್ದುಕೊಂಡ.ಮಗನ ನೆರಳಿಲ್ಲದೇ ಕುಟುಂಬ ನಿರ್ವಹಣೆ ವೃದ್ಧ ದಂಪತಿಗೆ ಕಷ್ಟಕರವಾಯಿತು.ಇಂತಹ ಸಂದರ್ಭದಲ್ಲಿ ಅವರಿಗೆ ಏನು ಮಾಡಬೇಕು ಎಂಬುದು ತೋಚದೇ ಇದ್ದಾಗ ಹೊಳೆದಿದ್ದೆ ನರೇಗಾ ಯೋಜನೆ.ತಮ್ಮ ಗ್ರಾಮದಲ್ಲಿ ಕೂಲಿಕಾರರು ನರೇಗಾದಡಿ ಕೆಲಸಕ್ಕೆ ಹೋಗುತ್ತಿರುವುದನ್ನು ಕಂಡು ವೀರಮ್ಮ ಮುನಿರಾಬಾದ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಉದ್ಯೋಗ ಚೀಟಿಯನ್ನು ಮಾಡಿಸಿಕೊಂಡು ಕಳೆದ ಎರಡು ವರ್ಷಗಳಿಂದ ಹೋಗುತ್ತಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಕೈಯಲ್ಲಿ ಚಾಕ್ ಪೀಸ್ ಪುಸ್ತಕ ಹಿಡಿದು ಪಾಠ ಮಾಡಿದ್ದ ನಿವೃತ್ತಿ ಶಿಕ್ಷಕಿ ವೀರಮ್ಮ ಕೈಯಲ್ಲಿ ಸಲಿಕೆ, ಪುಟ್ಟಿ ಬಂತು. ಇದು ಅವರ ಬದುಕಿಗೆ ಅನಿವಾರ್ಯವೂ ಕೂಡ ಇತ್ತು ಆದರೂ ಬದುಕಿನ ಅನಿವಾರ್ಯತೆಗಾಗಿ ನಿವೃತ್ತ ಶಿಕ್ಷಕಿ ವೀರಮ್ಮ ನರೇಗಾ ಯೋಜನೆಯಡಿ ಕೆಲಸ ಮಾಡುವ ಮೂಲಕ ತನ್ನ ಬದುಕಿನ ಸಂಕಷ್ಟವನ್ನು ದೂರ ಮಾಡಿಕೊಂಡಿದ್ದಾಳೆ.ನರೇಗಾ ಯೋಜನೆಯಡಿ ಪ್ರತಿದಿನ 309 ರೂಪಾಯಿಗಳ ಕೂಲಿ ಸಿಗುತ್ತದೆ. ಇದರಿಂದ ಕಳೆದ ವರ್ಷ ನೂರು ದಿನಗಳನ್ನು ಪೂರೈಸಿರುವ ವೀರಮ್ಮಅವರು ನರೇಗಾ ಯೋಜನೆಯಿಂ ದ ಬಹಳ ಅನುಕೂಲ ಆಯಿತು.ಮಕ್ಕಳು ನೋಡದೇ ಇದ್ರು ನರೇಗಾ ಯೋಜನೆಯು ನಮ್ಮಂತಹವರ ಪಾಲಿಗೆ ಆಸರೇಯಾಗಿರುವುದಂತೂ ಸುಳ್ಳಲ್ಲ ಇದೀಗ ಮತ್ತೆ ದುಡಿಯೋಣಾ ಬಾ ಅಭಿಯಾನದಡಿ ಕೆಲಸ ನೀಡಿರುವುದ ರಿಂದ ಬಹಳ ಅನುಕೂಲವಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.ಒಟ್ಟಿನಲ್ಲಿ ಸಂಕಷ್ಟದಲ್ಲಿ ಸಮಯದಲ್ಲಿ ಏನು ಮಾಡಬೇಕು ಎಂದು ವೀರಮ್ಮ ಯೋಚಿಸುತ್ತಾ ಕುಳಿತಿ ದ್ದಾಗ ಉದ್ಯೋಗ ಖಾತ್ರಿ ಯೋಜನೆ ದಾರಿ ದೀಪವಾಗಿದ್ದು ನಿಜಕ್ಕೂ ವರದಾನವೇ ಸರಿ.ಹೀಗಾಗಿ ಗ್ರಾಮೀಣ ಭಾಗ ದಲ್ಲಿ ಪ್ರತಿಯೊಬ್ಬರೂ ನರೇಗಾ ಯೋಜನೆಯ ಅನುಕೂಲ ಪಡೆಯುವ ಮೂಲಕ ಆರ್ಥಿಕ ಸಂಕಷ್ಟದಿಂದ ಪಾರಾಗಬೇ ಕಿದೆ.