ಕೊಪ್ಪಳ –
ಮೊಟ್ಟೆ ನೀಡುವದನ್ನು ವಿರೋದಿಸುತ್ತಿರುವ ಸ್ವಾಮಿಗಳ ವಿರುದ್ದ ವಿದ್ಯಾರ್ಥಿನಿಯೊಬ್ಬಳು ಹರಿಹಾಯ್ದ ಘಟನೆ ಕೊಪ್ಪಳ ದಲ್ಲಿ ನಡೆದಿದೆ.ಹೌದು ಎಸ್ ಎಫ್ ಐ ಪ್ರತಿಭಟನೆ ಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ ವಿದ್ಯಾರ್ಥಿನಿಯೊಬ್ಬಳು ಈ ಒಂದು ವಿಡಿಯೋ ವೈರಲ್ ಆಗಿದೆ.
ಹೀಗೆ ನೀವು ವಿರೋಧ ಮಾಡಿದರೆ ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ.ಮಕ್ಕಳು ದೇವರು ಅಂತೀರಿ ದೇವ್ರಾಸೆ ಯಾಕೆ ಈಡೇರಿಸೊಲ್ಲ ನೀವು ಎಂದು ವಿದ್ಯಾರ್ಥಿನಿಯ ಪ್ರಶ್ನೆಯನ್ನು ಕೇಳಿದರು.ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ದನ್ನು ವಿರೋಧಿಸಿದ ಸ್ವಾಮಿಗಳ ಧೋರಣೆ ವಿರುದ್ದ ಗಂಗಾವತಿಯಲ್ಲಿ ಪ್ರತಿಭಟನೆಯಲ್ಲಿ ಈ ಒಂದು ವಿದ್ಯಾರ್ಥಿ ನಿಯ ಆಕ್ರೋಶ ಕಂಡು ಬಂದಿತು.
ಮೊಟ್ಟೆ,ಹಣ್ಣು ನೀಡುವ ಸರಕಾರದ ಯೋಜನೆಗೆ ಸ್ವಾಗತ ಅಪೌಷ್ಟಿಕತೆಯಿಂದ ಬಳಲುತ್ತಿರುವ ಹಿನ್ನೆಲೆ ಮಕ್ಕಳಿಗೆ ನೀಡಲಾಗುತ್ತಿರುವ ಮೊಟ್ಟೆ,ಬಾಳೆಹಣ್ಣು ಕುರಿತು ವಿರೋಧ ದ ಹಿನ್ನೆಲೆಯಲ್ಲಿ ಈ ಒಂದು ಮಾತುಗಳು ವಿದ್ಯಾರ್ಥಿ ನಿಯಿಂದ ಕೇಳಿ ಬಂದವು.ಪ್ರತಿಭಟನೆಯಲ್ಲಿ ಮಾತನಾಡಿದ ಬಾಲಕಿಯ ವಿಡಿಯೋ ವೈರಲ್ ಆಗಿದೆ.