ಮೈಸೂರು –
ಸಧ್ಯ ರಾಜ್ಯದ ಹನ್ನೊಂದು ಜಿಲ್ಲೆಗಳನ್ನು ಹೊರತು ಪಡಿಸಿ ಇನ್ನೂಳಿದ 19 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆಯನ್ನು ಮಾಡಲಾಗಿದೆ.ಇನ್ನೂ ಮೈಸೂರಿ ನಲ್ಲೂ ಕೂಡಾ ಪಾಸಿಟಿವಿಟಿ ಕಡಿಮೆಯಾಗದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಲಾಕ್ ಡೌನ್ ನ್ನು ಒಂದು ವಾರಗಳ ಕಾಲ ಅಂದರೆ ಜೂನ್ 21 ರವರೆಗೆ ಮುಂದುವರೆಸಲಾಗಿದೆ.ಹೀಗಿರುವಾಗ ಸಧ್ಯ ಜಿಲ್ಲೆ ಯಲ್ಲಿ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡ ಲಾಗಿದ್ದು ಇಂಥಹ ಪರಸ್ಥಿತಿಯ ನಡುವೆ ಮೈಸೂರಿ ನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಸರ್ಕಾರ ಜಿಲ್ಲಾ ಡಳಿತದ ನಿಯಮಗಳನ್ನು ಗಾಳಿಗೆ ತೂರಿ ಶಿಕ್ಷಕರೊಂ ದಿಗೆ ಸಭೆಯನ್ನು ಮಾಡಿದ್ದಾರೆ.
ಹೌದು ಸಭೆ ಮಾಡಿ ಈಗ ಶಿಕ್ಷಕರ ಕೆಂಗಣ್ಣಿಗೆ ಗುರಿ ಯಾಗಿದ್ದಾರೆ.ಮೈಸೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಾನ್ಯ ಮರಿಸ್ವಾಮಿಯವರು ಇಂದು ಲಾಕ್ ಡೌನ್ ನಡುವೆ ಮುಖ್ಯ ಶಿಕ್ಷಕರ ಸಭೆಯನ್ನು ಮಾಡಿದರು.
ಒಂದು ಕಡೆ ಮೈಸೂರಿನಲ್ಲಿ ಸಧ್ಯ ಒಂದು ಕಡೆ ಲಾಕ್ ಡೌನ್ ಮತ್ತೊಂದು ಕಡೆಗೆ ಬಸ್ ಸಂಚಾರವಿಲ್ಲ ಹೀಗಿ ರುವಾಗ ಬಿಇಒ ಸಾಹೇಬರು ಸಭೆ ಮಾಡಿದ್ದಾರೆ. ಬಸ್ ಇಲ್ಲದಿದ್ದರೂ ಕೂಡಾ ಏನೇಲ್ಲಾ ಕಷ್ಟಪಟ್ಟು ನೂರಾರು ಕಿಲೋ ಮೀಟರ ಕಾಲ ಶಿಕ್ಷಕರ ಬಂದು ಸಭೆಯಲ್ಲಿ ಪಾಲ್ಗೊಂಡು ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕಿದರು.ಸಧ್ಯ ಇಂತಹ ಪರಸ್ಥಿತಿಯಲ್ಲಿ ಯಾರು ಕೂಡಾ ಸಭೆಯನ್ನು ಮಾಡುವಂತಿಲ್ಲ ಹೀಗಿರುವಾಗ ಬಿಇಒ ಅವರು ಹೀಗೆ ಮಾಡಿದ್ದು ಸರಿನಾ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು.
ಪಾಪಾ ಶಿಕ್ಷಕ ಶಿಕ್ಷಕಿಯರು ದೂರದ ಊರುಗಳಿಂದ ಏನೇಲ್ಲಾ ಕಷ್ಟಪಟ್ಟು ಸಭೆಗೆ ಬಂದು ಪಾಲ್ಗೊಂಡು ಮರಳಿ ಕಷ್ಟ ಪಟ್ಟು ಹೋಗಿದ್ದು ಕಂಡು ಬಂದಿತು. ಇನ್ನೂ ಪ್ರಮುಖವಾಗಿ ಇದನ್ನೇಲ್ಲವನ್ನು ಪ್ರಶ್ನೆ ಮಾಡ ಬೇಕಾದ ಶಿಕ್ಷಕರ ಸಂಘಟನೆಯ ನಾಯಕರು ಎಲ್ಲಿ ದ್ದಾರೆ ಏನು ಮಾಡತಾ ಇದ್ದಾರೆ ಎಂಬ ಅನುಮಾನ ಕಾಡುತ್ತಿದೆ ದಯಮಾಡಿ ನೋಡಿ ಈಗ ಯಾರು ಕೂಡಾ ಸಭೆಯನ್ನು ಮಾಡುವಂತಿಲ್ಲ ಹೀಗಿರುವಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಗೆ ನಿಯಮಗಳನ್ನು ಗಾಳಿಗೆ ತೂರಿ ಸಮಸ್ಯೆಯ ನಡುವೆ ಸಭೆ ಮಾಡಿದ್ದು ಸರಿನಾ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು ಇನ್ನೂ ಪ್ರಮುಖವಾಗಿ ಯಾವುದೇ ರೀತಿಯ ಸಂಚಾ ರ ಸೌಲಭ್ಯಗಳಿಲ್ಲದಿದ್ದರೂ ಕೂಡಾ ಏನೇಲ್ಲಾ ಕಷ್ಟ ಪಟ್ಟು ಸಭೆಯಲ್ಲಿ ಪಾಲ್ಗೊಂಡ ಶಿಕ್ಷಕರ ಅದರಲ್ಲೂ ಶಿಕ್ಷಕಿಯರ ಪಾಡು ಹೇಳತಿರದು.ಸಧ್ಯ ಸಭೆ ಮಾಡಿ ರುವ ಪೊಟೊ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ಅಧಿಕಾರಿಯ ವಿರುದ್ದ ಹಿಡಿಶಾಪ ಹಾಕತಾ ಇದ್ದಾರೆ.