ತುಮಕೂರು – ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಏನೆಲ್ಲಾ ಕಸರತ್ತು ಮಾಡ್ತಾರೆ ಏನೇನು ಹರಸಾಹಸ ಮಾಡ್ತಾರೆ ಎನ್ನೊದಕ್ಕೆ ತುಮಕೂರಿನ ಗಂಗಮ್ಮ ಸಾಕ್ಷಿ. ಹೌದು ತಾನು ಸೋತರೆ, ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರದ್ದು ಮಾಡಿಸುತ್ತೇನೆ. ಸರಕಾರಕ್ಕೆ ಸುಳ್ಳು ಮಾಹಿತಿಕೊಟ್ಟು ಹಣ ಪಡೆಯುತ್ತಿರುವ 40 ಕುಟುಂಬಗಳ ಮೈತ್ರಿ, ಮನಸ್ವಿನಿ, ವಿಧವಾ ವೇತನ ಯೋಜನೆಯ ಹಣವನ್ನು ನಿಲ್ಲಿಸುತ್ತೇನೆ ಎಂದು ಹೇಳುತ್ತಿದ್ದಾರೆ.
ತನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ಯಾವೆಲ್ಲಾ ಕೆಲಸಗಳನ್ನು ಮಾಡಿಸುತ್ತೇನೆ ಎಂದು ಅಭ್ಯರ್ಥಿಗಳು ಕರಪತ್ರದಲ್ಲಿ ಒಂದಿಷ್ಟು ಆಶ್ವಾಸನೆಗಳನ್ನು ಕೊಡುವುದು ಸರ್ವೇ ಸಾಮಾನ್ಯ.
ಆದರೆ, ಇಲ್ಲೊಬ್ಬ ಮಹಿಳಾ ಅಭ್ಯರ್ಥಿ ವಿಭಿನ್ನವಾಗಿ ಕರಪತ್ರ ಮಾಡಿಸಿ ಗಮನ ಸೆಳೆದಿದ್ದಾರೆ. ತಾನು ಗೆದ್ದರೆ ಮಾಡುವ ಪ್ರಮುಖ ಕೆಲಸಗಳ ಪಟ್ಟಿಯ ಜತೆಗೆ ತಾನು ಸೋತರೆ ಬಯಲು ಮಾಡುವ ಅಕ್ರಮಗಳ ಪಟ್ಟಿಯನ್ನು ಒಂದೇ ಕರಪತ್ರದಲ್ಲಿ ನಮೂದಿಸಿದ್ದಾರೆ.
ಅಚ್ಚರಿ ಎನಿಸಿದರೂ ನಂಬಲೇಬೇಕು. ತುಮಕೂರು ತಾಲೂಕಿನ ಹೆಬ್ಬೂರು ಗ್ರಾಪಂ ವ್ಯಾಪ್ತಿಯ ಕಲ್ಕೆರೆಯ ಅಭ್ಯರ್ಥಿ ಗಂಗಮ್ಮ ಎಚ್. ವಿಭಿನ್ನ ಭರವಸೆ ಮೂಲಕ ಕೇವಲ ತಮ್ಮ ಕ್ಷೇತ್ರವಲ್ಲದೆ ಜಿಲ್ಲೆಯ ಜನ ಕೂಡ ತನ್ನತ್ತ ತಿರುಗಿ ನೋಡುವಂತೆ ದೊಡ್ಡ ಪ್ರಮಾಣದಲ್ಲಿ ಮಾಡಿರುವವರು.
ಗೆದ್ದರೆ, ಕರೆತಿಮ್ಮ ಸ್ವಾಮಿ ದೇವಸ್ಥಾನದ ದೇವದಾಯ ಇನಾಂ ಜಮೀನನ್ನು ಮೂಲ ಖಾತೆಯಂತೆ ದೇವರ ಹೆಸರಿಗೆ ಖಾತೆ ಮಾಡಿಸುತ್ತೇನೆ. ಅರಳಿ ಕಟ್ಟೆ ಕಟ್ಟಿಸುತ್ತೇನೆ. ಊರಾಚೆಯ ಚಿಕ್ಕ ಸಾಸಲಯ್ಯನ ಮನೆ ಹತ್ತಿರದಿಂದ ದೊಡ್ಡಕರೆ ಕಲ್ ವರೆಗೆ ನಕಾಶೆಯಂತೆ ರಸ್ತೆ ಮಾಡಿಸುತ್ತೇನೆ. ಊರ ಮುಂದೆ ಮಳೆಯ ನೀರು ರಸ್ತೆಗೆ ತೊಂದರೆ ಆಗದಂತೆ ಸರಾಗವಾಗಿ ಹರಿಯಲು ಸಗ್ಗಯ್ಯನ ತಿಪ್ಪಾಳದಿಂದ ಹೊಂಭಯ್ಯನ ಗದ್ದೆವರೆಗೆ ಸಿಸಿ ಚರಂಡಿ ಮಾಡಿಸುತ್ತೇನೆ ಹೀಗೆ ಎಂದು ಭರವಸೆ ನೀಡಿದ್ದಾರೆ ಗಂಗಮ್ಮ.
ತಾನು ಸೋತರೆ, ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರದ್ದು ಮಾಡಿಸುತ್ತೇನೆ. ಸರಕಾರಕ್ಕೆ ಸುಳ್ಳು ಮಾಹಿತಿಕೊಟ್ಟು ಹಣ ಪಡೆಯುತ್ತಿರುವ 40 ಕುಟುಂಬಗಳ ಮೈತ್ರಿ, ಮನಸ್ವಿನಿ, ವಿಧವಾ ವೇತನ ಯೋಜನೆಯ ಹಣವನ್ನು ನಿಲ್ಲಿಸುತ್ತೇನೆ ಎಂದು ಭಿತ್ತಿ ಪತ್ರದಲ್ಲಿ ಹಾಕಿದ್ದಾರೆ.
ಸರ್ವೆ ನಂಬರ್ 86 ರಲ್ಲಿ ಹಳೆ ದಾಖಲೆಯಂತೆ ಸ್ಮಶಾನ ಮಾಡಿಸುತ್ತೇನೆ. ಕಲ್ಕೆರೆ ಗ್ರಾಮ ಠಾಣಾವನ್ನು ಯಾವುದೇ ಮೂಲ ದಾಖಲಾತಿ ಇಲ್ಲದೆ 11 ಕುಟುಂಬಗಳು ಒತ್ತುವರಿ ಮಾಡಿರು ಜಾಗವನ್ನು 1948 ಗ್ರಾಮದ ಹೌಸ್ ಲೀಸ್ಟ್ ನಂತೆ ತೆರವುಗೊಳಿಸಲು ಹೋರಾಟ ಮಾಡುತ್ತೇನೆ ಎಂದು ಕರಪತ್ರದಲ್ಲಿ ಮುದ್ರಿಸಿದ್ದಾರೆ.