ಬೆಂಗಳೂರು –
ಪ್ರತಿದಿನ ಒಂದು ಗಂಟೆ ಹೆಚ್ಚು ಕೆಲಸವನ್ನು ಮಾಡಿ ಎಂದು ರಾಜ್ಯದ ಸರ್ಕಾರಿ ನೌಕರರಿಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ ಬೆನ್ನಲ್ಲೇ ಈ ಒಂದು ಸೂಚನೆಯನ್ನು ರಾಜ್ಯದ ಸರ್ಕಾರಿ ನೌಕರರು ಒಪ್ಪಿಕೊಂಡಿದ್ದಾರೆ. ಖಂಡಿತ ವಾಗಿಯೂ ನಾವು ಪ್ರತಿದಿನ ಇನ್ನೂ ಒಂದು ಗಂಟೆಗಳ ಕಾಲ ಹೆಚ್ಚು ಕೆಲಸವನ್ನು ಮಾಡಲು ಸಿದ್ದರಿದೇವೆ ಸರ್ ಆದರೆ ನಮಗೆ NPS ರದ್ದು ಮಾಡಿ OPS ಜಾರಿ ಮಾಡಿ ಎಂದು ರಾಜ್ಯದ NPS ನೌಕರರು ಮುಖ್ಯಮಂತ್ರಿ ಅವರ ಬಳಿ ಬೇಡಿಕೆ ಇಟ್ಟಿದ್ದಾರೆ.
ಖಂಡಿತವಾಗಿಯೂ ನಮಗೆ ನೀವು 7ನೇ ವೇತನ ಆಯೋಗ ನೀಡುವ ವಿಚಾರದಲ್ಲಿ ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದು ಸಂತೋಷವಾ ಗಿದ್ದು ಇದರ ಬೆನ್ನಲ್ಲೇ ನೀವು ಕೂಡಾ ನಮಗೆ ಪ್ರತಿ ದಿನ ಒಂದು ಗಂಟೆ ಕೆಲಸ ಮಾಡಲು ಹೇಳಿದ್ದು ಅದನ್ನು ಒಪ್ಪಿಕೊಳ್ಳುತ್ತೇವೆ ಆದರೆ ಈ ಒಂದು ಬೇಡಿಕೆಯನ್ನು ಈಡೇರಿಸಿ ಎಂಬ ಒತ್ತಾಯವನ್ನು ಮಾಡಿದ್ದಾರೆ.ಪ್ರತಿದಿನ ನಿಗದಿಪಡಿಸಿರುವ ವೇಳೆ ಗಿಂತ ಒಂದು ತಾಸು ಹೆಚ್ಚು ಕೆಲಸ ಮಾಡಿ ಕೆಲಸದ ವೇಳೆ ಕಚೇರಿ ಬಿಟ್ಟು ಎಲ್ಲಿಗೂ ಹೋಗಬೇಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಸರಕಾರಿ ನೌಕರರಿಗೆ ಸೂಚಿಸಿದ್ದಾರೆ.
ನೌಕರರ ವೇತನ, ಭತ್ಯೆಗಳ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚನೆ ಮಾಡಿರುವ ಹಿನ್ನೆಲೆ ಯಲ್ಲಿ ರಾಜ್ಯ ಸರಕಾರ ನೌಕರರ ಸಂಘದ ಪದಾಧಿಕಾರಿಗಳ ನಿಯೋಗ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದಲ್ಲಿ ಗುರುವಾರ ಸಿಎಂ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕನಸಿಗೆ ಕರ್ನಾಟಕದಿಂದ ಒಂದು ಟ್ರಿಲಿಯನ್ ಡಾಲರ್ ಕೊಡುಗೆ ನೀಡ ಬೇಕು.
ಈ ಗುರಿ ಸಾಧನೆಗೆ ಸರಕಾರಕ್ಕೆ ಅಗತ್ಯ ಸಹಕಾರದ ಜೊತೆಗೆ, ಪ್ರಾಮಾಣಿಕ, ನಿಷ್ಠೆ ಮತ್ತು ಕರ್ತವ್ಯ ಪ್ರಜ್ಞೆ ಯಿಂದ ಜನಪರ ಕೆಲಸ ಮಾಡಿ ಎಂದು ಸೂಚಿಸಿ ದರು ಇದರ ಬೆನ್ನಲ್ಲೇ ಈಗ ರಾಜ್ಯದ ಎನ್ ಪಿಎಸ್ ಸರ್ಕಾರಿ ನೌಕರರು ಹೊಸದೊಂದು ಬೇಡಿಕೆ ಯನ್ನು ಇಟ್ಟಿದ್ದಾರೆ.ಇದನ್ನು ಮುಖ್ಮಮಂತ್ರಿ ಅವರು ಗಂಭೀರವಾಗಿ ಪರಿಗಣಿಸಿ ಈ ಒಂದು ಬೇಡಿಕೆಯನ್ನು ಈಡೇರಿಸಿದರೆ ರಾಜ್ಯದ ಸರ್ಕಾರಿ ನೌಕರರು ಮುಖ್ಯಮಂತ್ರಿ ಸೂಚನೆಯಂತೆ ಪ್ರತಿ ದಿನ ಒಂದು ಗಂಟೆ ಹೆಚ್ಚು ಕೆಲಸವನ್ನು ಮಾಡಲಿ ದ್ದಾರೆ.
ವರದಿ – ಚಕ್ರವರ್ತಿ ಜೊತೆ ಸಂತೋಷ ಸುದ್ದಿ ಸಂತೆ ನ್ಯೂಸ್ ಬೆಂಗಳೂರು