ಬೆಂಗಳೂರು –
ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ ಕುರಿತು ಸಿಐಡಿ ಪ್ರಕರಣ ತನಿಖೆ ಚುರುಕುಗೊಂಡಿದ್ದು ಈವರೆಗೆ ಪ್ರಕರಣದಲ್ಲಿ 22 ಕ್ಕೂ ಹೆಚ್ಚು ಶಿಕ್ಷಕರ ಮತ್ತು 20 ಕ್ಕೂ ಹೆಚ್ಚು ಅಧಿಕಾರಿ ಗಳನ್ನು ಬಂಧನ ಮಾಡಲಾಗಿದೆ
ಹೌದು 2012-13 ಮತ್ತು 2014 15ನೇ ಸಾಲಿನ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ (ಗ್ರೇಡ್-2) ಹಾಗೂ ದೈಹಿಕ ಶಿಕ್ಷಕರ (ಗ್ರೇಡ್-1) ನೇಮಕದಲ್ಲಿ ಅಕ್ರಮ ನಡೆದಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಮಹೇಶ ಶ್ರೀಮಂತ ಸೂಸಲಾಡಿ ಎಂಬವರು 2012-13ನೇ ಸಾಲಿನಲ್ಲಿ ಅಕ್ರಮ ವಾಗಿ ನೇಮಕ ವಾಗಿದ್ದ ಸಂಬಂಧ ತನಿಖೆ ನಡೆಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಆ.12ರಂದು ದೂರು ದಾಖಲಿಸಿದ್ದರು.
2014-15ನೇ ಸಾಲಿನಲ್ಲಿ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಹಾಗೂ ದೈಹಿಕ ಶಿಕ್ಷಕರ ನೇಮಕಾತಿ ಯಲ್ಲಿನ ಅಕ್ರಮದ ಸಂಬಂಧ ಪ್ರತ್ಯೇಕ ಪ್ರಕರಣ ಗಳು ದಾಖಲಾಗಿದ್ದವು.
ಪ್ರಕರಣದ ಗಂಭೀರತೆ ಅರಿತ ಸರಕಾರವು ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ತುಮಕೂರಿನ 10 ಹಾಗೂ ವಿಜಯಪುರದ 1 ಸೇರಿ 11 ಮಂದಿಯನ್ನು ಬಂಧಿಸಲಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿರುವ ಸಿಐಡಿ ಪೊಲೀಸರು ಈವರೆಗೆ ದೊಡ್ಡ ಪ್ರಮಾಣ ದಲ್ಲಿ ಭ್ರಷ್ಟಾಚಾರ ಮಾಡಿದ ಕುಳಗಳನ್ನು ಬಂಧನ ಮಾಡಿದ್ದಾರೆ.