ಹುಬ್ಬಳ್ಳಿ –
ಅಕ್ರಮ ಪಡಿತರ ಅಕ್ಕಿ ದಂಧೆ ಎಲ್ಲವೂ ಗೊತ್ತಿ ದ್ದರೂ ಮೌನ ಯಾಕೆ ಉತ್ತರಿಸಿ – ದೊಡ್ಡ ದೊಡ್ಡ ತಿಮಿಂಗಲುಗಳ ಮಾಹಿತಿ ಗೊತ್ತಿದ್ದರೂ ಸಣ್ಣ ಸಣ್ಣ ಮೀನುಗಳಿಗೆ ಬಲೆ…..ಮುಂದುವರಿಯಲಿದೆ ಅಕ್ರಮದ ವಿರುದ್ದ ಧ್ವನಿ ಹೌದು ರಾಜ್ಯದಲ್ಲಿ ಹೊಸದಾಗಿ ಸರ್ಕಾರ ರಚನೆಗೊಂಡ ನಂತರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯನ್ನು ಜನತೆಗೆ ತಲುಪಿಸಲು ರಾಜ್ಯ ಸರ್ಕಾರ ಏನೇಲ್ಲಾ ಹರಸಾಹಸವನ್ನು ಪಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದಲ್ಲಿನ ರಾಜ್ಯ ಸರ್ಕಾರ ಘೋಷಣೆಯಂತೆ ಗ್ಯಾರಂಟಿ ಯೋಜನೆಗಳನ್ನು ಜನತೆಗೆ ತಲುಪಿಸಲು ಏನೇಲ್ಲಾ ಕಸರತ್ತು ಮಾಡುತ್ತಿದೆ.ಇನ್ನೂ ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಕ್ರಮ ಪಡಿತರ ಅಕ್ಕಿಯ ದಂಧೆ ಜೋರಾಗಿದೆ.ನಗರದಲ್ಲಿ ಅಕ್ರಮ ಪಡಿತರ ಅಕ್ಕಿ ದಂಧೆ ಎಲ್ಲೇಲ್ಲಿ ಹೇಗೆಲ್ಲಾ ನಡೆಯುತ್ತಿದೆ ಯಾರು
ಯಾರು ಮಾಡ್ತಾ ಇದ್ದಾರೆ ಅದರ ಕಿಂಗ್ ಪಿನ್ ಗಳು ಯಾರು ಡಾನ್ ಗಳು ಯಾರು ಹೇಗೆ ಕಲೆಕ್ಟ್ ಮಾಡಿ ಹೇಗೆ ನಗರದಲ್ಲಿ ಕಳಿಸುತ್ತಾರೆ ಹೀಗೆ ಇಂಚಿಂಚೂ ಮಾಹಿತಿ ಪೊಲೀಸರಿಗೆ ಆಹಾರ ಇಲಾಖೆಗೆ ಸೇರಿದಂತೆ ಸಂಬಂಧಿಸಿದ ಇಲಾಖೆ ಗಳಿಗೆ ಅಧಿಕಾರಿಗಳಿಗೆ ಪಕ್ಕಾ ಮಾಹಿತಿ ಇದೆ.
ಆದರೆ ಇದೇಲ್ಲವೂ ಗೊತ್ತಿದ್ದರೂ ರಾಜಾ ರೋಷವಾಗಿ ನಡೆಯುತ್ತಿದ್ದರೂ ಕೂಡಾ ಇದ್ಯಾವುದು ನಮಗೆ ಗೊತ್ತಿಲ್ಲದಂತೆ ನಡೆ ಯುತ್ತಿಲ್ಲವಂತೆ ಸಂಭಂಧಿಸಿದವರು ಮೌನವಾ ಗಿದ್ದಾರೆ.ದೊಡ್ಡ ತಿಮಿಂಗಲುಗಳ ಬಗ್ಗೆ ಬಲೆಯನ್ನು ಹಾಕದೇ ಸಣ್ಣ ಪುಟ್ಟ ಮೀನುಗಳನ್ನು ಬಲೆ ಹಾಕು ತ್ತಿರುವುದು ಕಳೆದೊಂದು ವಾರದಿಂದ ಆಗಾಗ್ಗೆ ಮೇಲಿಂದ ಮೇಲೆ ಕಂಡು ಬರುತ್ತಿದೆ.
ದೊಡ್ಡ ದೊಡ್ಡ ತಿಮಿಂಗಲುಗಳಿಗೆ ಬಲೆ ಹಾಕುವ ಸಾಹಸಕ್ಕೆ ಕೆಲ ಸಿಬ್ಬಂದಿಗಳು ಮುಂದಾದ್ರು ಅವರಿಗೆ ಹಿಂದೆ ನಿಂತುಕೊಳ್ಳುವ ಅಧಿಕಾರಿಗಳು ಯಾರು ಇಲ್ಲ ಹೀಗಾಗಿ ದೊಡ್ಡ ಕಿಂಗ್ ಪಿನ್ ಗಳ ತಿಮಿಂಗಲುಗಳನ್ನು ನೋಡಿ ನೋಡಲಾರದಂತೆ ಮಾಹಿತಿ ಗೊತ್ತಿದ್ದವರು ಮೌನವಾಗಿದ್ದಾರೆ.
ಏನೇ ಮಾಡಿದರು ನಮ್ಮ ಹಿಂದೆ ನಮಗೆ ಯಾರು ಸರ್ಪೋರ್ಟ್ ಮಾಡೊದಿಲ್ಲ ಎಂಬ ಮಾತುಗ ಳನ್ನು ನೊಂದುಕೊಂಡಿರುವ ಪೊಲೀಸ್ ಮತ್ತು ಆಹಾರ ಇಲಾಖೆಯ ಸಿಬ್ಬಂದಿಗಳು ನೋವಿನ ಮಾತುಗಳನ್ನ ಹೇಳುತ್ತಿದ್ದಾರೆ.ಸಾಮಾನ್ಯವಾಗಿ ನಗರದಲ್ಲಿ ಎಲ್ಲೇಲ್ಲಿ ಹೇಗೆ ನಡೆಯುತ್ತಿದೆ ಯಾರು ಯಾರು ಇದರ ಡಾನ್ ಗಳು ಏನೇಲ್ಲಾ ನಡೆಯು ತ್ತಿದ ಹೀಗೆ ಎಲ್ಲವೂ ರಾಜಾ ರೋಷವಾಗಿದೆ
ಆದರ ಅದ್ಯಾಕೋ ಎನೋ ಗೊತ್ತಿಲ್ಲ ಆ ಡಾನ್ ನಿಂದಾಗಿ ಎಲ್ಲವೂ ಮೌನ ಮೌನ.ಜಿಲ್ಲೆಯಲ್ಲಿ ಕೆಲ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿರುವ ಹಾಕುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರೇ ದಯಮಾಡಿ ಇನ್ನಾದರೂ ಜಿಲ್ಲೆಯಲ್ಲಿ ಅದರಲ್ಲೂ ವಾಣಿಜ್ಯ ನಗರದಲ್ಲಿ ಜೋರಾಗಿರುವ ಅಕ್ರಮ ಪಡಿತರ ದಂಧೆಗೆ ಕಡಿವಾಣ ಹಾಕಿ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..