ಬೆಂಗಳೂರು –
ಶಿಕ್ಷಕರ ಅಕ್ರಮದ ನೇಮಕಾತಿಯ ತನಿಖೆ ಮುಂದುವರೆದಿದ್ದು 2014-15 ರ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಐವರನ್ನು ಬಂಧಿಸಿದ್ದಾರೆ ಹೌದು ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಗೀತಾ ಪಠ್ಯ ಪುಸ್ತಕ ಸಮಿತಿ ನಿರ್ದೇಶಕ ಮಾದೇಗೌಡ,ನಿವೃತ್ತ ಜಂಟಿ ನಿರ್ದೇಶಕ ಜಿ.ಆರ್ ಬಸವರಾಜು,ನಿವೃತ್ತ ಜಂಟಿ ನಿರ್ದೇಶಕಿ ಕೆ.ರತ್ನಯ್ಯ ಅವರನ್ನು ಬಂಧನ ಮಾಡಲಾಗಿದೆ.
ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ತನಿಖೆ ಚುರುಕಾಗಿದ್ದು ಸಿಒಡಿ ಪೊಲೀಸರು ಅಕ್ರಮ ನೇಮಕಾತಿಯಲ್ಲಿ ಭಾಗಿಯಾದ ಒಬ್ಬೊಬ್ಬರನ್ನು ಬಲೆಗೆ ಬೀಳಿಸುತ್ತಿದ್ದಾರೆ ಬಂಧಿತ ಐವರು ಆರೋಪಿಗಳನ್ನು ಸಿಐಡಿ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಹಿನ್ನಲೆಯಲ್ಲಿ ನೀಡುವಂತೆ ಕೇಳಿಕೊಂಡ ಹಿನ್ನಲೆಯಲ್ಲಿ ನ್ಯಾಯಾಲಯ ಆರೋಪಿಗಳನ್ನು ಸಿಐಡಿ ಪೊಲೀಸರಿಗೆ ನೀಡಿದೆ.
ಈ ಸಂಬಂಧ ಬಂಧಿತ ಐವರು ಆರೋಪಿಗಳು ಅಕ್ಟೋಬರ್ 1 ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದ್ದು ಹಣ ನೀಡಿ ಶಿಕ್ಷಕರ ಹುದ್ದೆ ಗಿಟ್ಟಿಸಿದ್ದ ಆರೋಪಿಗಳಿಗೆ ಮತ್ತೊಂದು ಕಾನೂನಿನ ಉರುಳು ಸುತ್ತಿಕೊಂಡಿದೆ.ಆರೋಪಿತ ಶಿಕ್ಷಕರು ಹಾಗೂ ಕಿಂಗ್ ಪಿನ್ ಕೆ ಎನ್ ಪ್ರಸಾದ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಸ್ತ್ರವನ್ನು ಸಿಐಡಿ ಪ್ರಯೋಗಿಸಿದೆ.
ಪ್ರಕರಣದ ತನಿಖೆ ಎದುರಿಸುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಎಫ್ ಡಿ ಸಿ ಕೆ ಸಿ ಪ್ರಸಾದ್ ಸರ್ಕಾರಿ ನೌಕರನಾಗಿದ್ದಾನೆ.ಹಾಗೂ ಬಂಧಿತ 13 ಮಂದಿ ಆರೋಪಿಗಳು ಸರ್ಕಾರಿ ನೌಕರನಾಗಿದ್ದಾನೆ.ಬಂಧಿತ ಆರೋಪಿಗಳು ಎಫ್ ಡಿ ಸಿ ಪ್ರಸಾದ್ ಗೆ ಹಣ ನೀಡಿ ಹುದ್ದೆ ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ ಆದ್ದರಿಂದ ಭ್ರಷ್ಟಾಚಾರ ತಡೆ ಕಾಯಿದೆ ಅನ್ವಯವೂ ತನಿಖೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದ್ದು ಶಿಕ್ಷಕರ ಅಕ್ರಮ ನೇಮಕ ಪ್ರಕರಣದಲ್ಲಿ ತನಿಖೆ ಚುರುಕಾಗಿದ್ದು ಸಿಒಡಿ ಪೊಲೀಸರು ಅಕ್ರಮ ನೇಮಕಾತಿಯಲ್ಲಿ ಭಾಗಿಯಾದ ಒಬ್ಬೊಬ್ಬರನ್ನೇ ಬಲೆಗೆ ಬೀಳಿಸು ತ್ತಿದ್ದು ಇದರೊಂದಿಗೆ ತನಿಖೆ ಚುರುಕುಗೊಂಡಿದೆ.