ತುಮಕೂರು –
ಇತ್ತೀಚೆಗೆ ನಡೆದ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ಅಕ್ರಮವಾಗಿ ಮತ ಹಾಕಿ ನನ್ನನ್ನು ಉಪಾಧ್ಯಕ್ಷ ಸ್ಥಾನಕ್ಕೆ ತಳ್ಳಲ್ಪಟ್ಟರು.ನಾನು ಅಧ್ಯಕ್ಷ ಆಗೋನು ಉಪಾಧ್ಯಕ್ಷ ಸ್ಥಾನಕ್ಕೆ ತಳ್ಳಲ್ಪಟ್ಟೆ ಎಂದು ಯೂತ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್. ರಾಜೇಂದ್ರ ಸ್ಪೋಟಕ ಹೇಳಿಕೆ ನೀಡಿದರು.

ತುಮಕೂರಿನ ಕಾಂಗ್ರೆಸ್ ಕಚೇರಿಯಲ್ಲಿ ಆರ್.ರಾಜೇಂದ್ರ ಮಾತನಾಡಿ ಇತ್ತೀಚಿನ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಓಟ್ ವ್ಯತ್ಯಾಸವಾಗಿದೆ ಜಿಲ್ಲೆಯಲ್ಲಿ 6000 ಓಟ್ ಲೆಕ್ಕ ಕೊಟ್ಟವರು,ರಾಜ್ಯ ಮಟ್ಟದಲ್ಲಿ 7300 ಓಟ್ ಲೆಕ್ಕ ಕೊಟ್ಟಿದ್ದಾರೆ ಎಂದರು. ರಾಜ್ಯದಲ್ಲಿ 25 ಸಾವಿರ ಓಟ್ ರಿಜೆಕ್ಟ್ ಎಂದವರು ಬಳಿಕ 50 ಸಾವಿರ ಓಟ್ ರಿಜೆಕ್ಟ್ ಅಂದ್ರು ಎಂದರು

ಹಾಗಾದ್ರೆ ಆ 25 ಸಾವಿರ ಓಟ್ ಯಾರದ್ದು ಅಂತಾ ಇವತ್ತಿನವರೆಗೂ ಗೊತ್ತಾಗ್ತಾ ಇಲ್ಲ.ಅದು ನಲಪಾಡದ, ರಕ್ಷಾರಾಮಯ್ಯದ ಗೊತ್ತಾಗ್ತಾ ಇಲ್ಲ. ನಮ್ಮಲ್ಲಿ ಫೇಮ್ ಎನ್ ಜಿಓ ಕಮಿಟಿ ಇದೆ,ಅವರು ನಲಪಾಡ್ ಚುನಾವಣೆಗೆ ನಿಲ್ಲೋಕೆ ಬಿಟ್ರು ಎಂದರು.
ಇನ್ನೂ ನಂತರ ಡಿಸ್ ಕ್ವಾಲಿಫೈ ಮಾಡೋ ವಿಚಾರಕ್ಕೆ ನಮ್ಮ ವಿರೋಧ ಇದೆ.ನಲಪಾಡ್ ನ ಅಧ್ಯಕ್ಷ ಅಥವಾ ಕಾರ್ಯಾಧ್ಯಕ್ಷ ಮಾಡಿ ಈ ಗೊಂದಲ ನಿವಾರಿಸಿ ಎಂದು ಒತ್ತಾಯವನ್ನು ಮಾಡಿದರು. ಯಾಕಂದ್ರೆ 2017 ರಲ್ಲಿ ನನಗೂ ಈ ಗೊಂದಲ ಆಗಿತ್ತು.ನನ್ನ ಜೊತೆಗಿರೋರು ಹೇಳೋದು ಕೇಳಿದ್ರೆ ಬ್ಯಾಲೆಟ್ ಪೇಪರ್ ಚೇಂಜ್ ಆಗಿತ್ತು.ಬ್ಯಾಲೆಟ್ ಬಾಕ್ಸ್ ಗಳನ್ನೇ ಚೇಂಜ್ ಮಾಡಿದ್ರು.

ಇನ್ನೂ ಕೌಂಟಿಂಗ್ ನ ಎರಡು ದಿನದ ಮುಂಚೆ ಲಾಡ್ಜ್ ನಲ್ಲಿ ಓಟ್ ಹಾಕೋವಾಗ ನನಗೆ ಸಿಕ್ಕಿ ಬಿದ್ದಿದ್ರು.ಹೆಚ್ಚು ಮತಗಳನ್ನ ಪಡೆದಿರೋರನ್ನ ಡಿಸ್ ಕ್ವಾಲಿಫೈ ಮಾಡ್ತಾರೆ.ಈ ಪ್ರಕ್ರಿಯೆಯಿಂದ ಬೇರೆ ಪಕ್ಷಕ್ಕೆ ಯುವಕರು ಹೋದ್ರು ಅಶ್ಚರ್ಯ ಪಡಬೇಕಾಗಿಲ್ಲ ಎನ್ನುತ್ತಾ ತುಮಕೂರು ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಅಸಮಾಧಾನನ್ನು ಆರ್.ರಾಜೇಂದ್ರ ಹೊರಹಾಕಿದರು.