ಬೆಂಗಳೂರು –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ ಕುರಿತಂತೆ ವಾರ್ಡ್ ವಾರು ಮತದಾರ ಪಟ್ಟಿಯನ್ನು ತಯಾರಿಸುವ ಕುರಿತಂತೆ ರಾಜ್ಯ ಚುನಾವಣೆ ಆಯೋಗದ ಮುಖ್ಯ ಕಾರ್ಯ ದರ್ಶಿ ಅವರು ಧಾರವಾಡ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ.
ವೇಳಾಪಟ್ಟಿಯನ್ನು ನಿಗದಿಪಡಿಸಿ ಸೂಚನೆಗಳನ್ನು ನೀಡಲಾಗಿದೆ. ಈ ಹಿಂದೆ ಕೋವಿಡ್ ಹಿನ್ನಲೆಯಲ್ಲಿ ಸರ್ಕಾರವು ರಾಜ್ಯದಲ್ಲಿ ಯಾವುದೇ ಚುನಾವಣೆ ಯನ್ನು ಆರು ತಿಂಗಳ ಕಾಲು ಮಾಡುವಂತಿಲ್ಲ ಎಂದಿದೆ.ಆದರೆ ಆಯೋಗವು ನಿಗದಿಪಡಿಸುವ ಕಾರ್ಯಕ್ರಮ ವೇಳಾಪಟ್ಟಿಯಂತೆ ಮತದಾರರ ಪಟ್ಟಿಯ ತಯಾರಿಕೆಯ ಕಾರ್ಯವನ್ನು ಕೈಗೊಳ್ಳ ಬೇಕೋ ಅಥವಾ ಸಧ್ಯಕ್ಕೆ ಸ್ಥಗಿತಗೊಳಿಸಬೇಕೆ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕೋರಿರುತ್ತೀರಿ
ಹೀಗಾಗಿ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ ಸಂಭಂಧ ಮಾನ್ಯ ಉಚ್ಚ ನ್ಯಾಯಾಲ ಯ ಬೆಂಗಳೂರು ಇಲ್ಲಿ ದಾಖಲಾಗಿದ್ದ ಪ್ರಕರಣ ಕುರಿತಂತೆ ಸೂಚಿಸುವ ಕಾಲ ಮಿತಯೋಳಗಾಗಿ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾ ಗಿರುವುದರಿಂದ ಆಯೋಗವು ನೀಡಿರುವ ಕಾರ್ಯ ಕ್ರಮ ಪಟ್ಟಿಯಂತೆ ಮತದಾರರ ಪಟ್ಟಿಯನ್ನು ತಯಾರಿಸಲು ಕ್ರಮ ವಹಿಸತಕ್ಕದೆಂದು
ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಅವರು ಧಾರವಾಡ ಜಿಲ್ಲಾಧಿಕಾರಿ ಗಳಿಗೆ ಪತ್ರವನ್ನು ಬರೆದಿದ್ದಾರೆ. ಇನ್ನೂ ಇತ್ತ ಈಗಾಗ ಲೇ ಹುಬ್ಬಳ್ಳಿ ಧಾರವಾಡದಲ್ಲಿ ಮಹಾನಗರ ಪಾಲಿಕೆ ಯ ವಾರ್ಡ್ ವಾರು ಮತದಾರರ ಪಟ್ಟಿ ತಯಾರಿಕೆ ಕಾರ್ಯ ಜೋರಾಗಿದ್ದು ಇನ್ನೇನು ಚುನಾವಣೆಯ ಮಹೂರ್ತ ಷೋಷಣೆ ಅಷ್ಟೇ ಬಾಕಿ ಇದೆ.