This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

State News

ರಾಜ್ಯದ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ…..

ರಾಜ್ಯದ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ…..
WhatsApp Group Join Now
Telegram Group Join Now

ಬೆಂಗಳೂರು

ಸರಕಾರಿ ನೌಕರರಿಗೆ 2018 ರ ಕೆ.ಜಿ.ಐ.ಡಿ ಬೋನಸ್  ನ್ನು  ಸರ್ಕಾರ ಘೋಷಿಸಿದ್ದು ಬೋನಸ್ ರೇಟ್ ವಿಮಾ ಮೊತ್ತದ ಪ್ರತಿ ಸಾವಿರ ರೂ ಗೆ 85/- ರೂ ಬೋನಸ್ ಮೊತ್ತ ಡಿಕ್ಲೇರ್ ಮಾಡಿದೆ.ಈ ಬೋನಸ್ ಮೊತ್ತ ಅವಧಿ ಪೂರೈಕೆ ಆದ ವಿಮಾದಾರರಿಗೆ ಮಾತ್ರ ಪೇ ಮಾಡಲಾಗು ತ್ತದೆ.

 

ಉಳಿದ ಸರಕಾರಿ ನೌಕರರಿಗೆ ಜಮೆ ಎಂದು ಮಾತ್ರ ತೋರಿಸಲಾಗುತ್ತದೆ.ಯಾರು ಬೋನಸ್ ಗೆ ಅರ್ಹರು ಎಂದರೆ ಡೇಟ್ ಆಫ್ ಬರ್ತ್ 01-04-1963 ಹೊಂದಿದವರಿಂದ ಆರಂಭವಾಗು ತ್ತದೆ ಇದಕ್ಕಿಂತ ಹಿಂದೆ ಹುಟ್ಟಿದ ದಿನಾಂಕ ಹೊಂದಿ ದವರು ಬೋನಸ್ ಗೆ ಅರ್ಹರಲ್ಲ.

 

2018 ರ ಬೋನಸ್ ಎಂದರೆ 04-2016 ರಿಂದ 3- 2018 ರ ಅವಧಿ ಎಂದು ಪರಿಗಣಿಸಲಾಗು ತ್ತದೆ ಮುಂದುವರಿದು 04-2018 ರಿಂದ 3-2020 ರ ಅವಧಿಯಲ್ಲಿ ಮೆಚೂರಿಟಿ ಹೊಂದಿದವರಿಗೆ ಮಧ್ಯಂತರ ಬೋನಸ್ ಕೂಡ ಲಭಿಸುತ್ತದೆ.

 

ಉದಾಹರಣೆಗೆ ಏಪ್ರಿಲ್ 2020 ಕ್ಕೆ ಮೆಚುರಿಟಿ ಆದ ವಿಮಾದಾರರಿಗೆ 04-2016 ರಿಂದ 03-2018 ರ ಅವಧಿಯ ಬೋನಸ್ ಮಾತ್ರ ಲಭಿ ಸುತ್ತದೆ. ಅದೇ ಮಾರ್ಚ್ 2020 ಅವಧಿಯ ವರೆಗೆ  ಮೆಚುರಿಟಿ ಆದ ವಿಮಾದಾರರಿಗೆ 04-2016 ರಿಂದ 03-2018 ರ ಅವಧಿಯ ಬೋನಸ್ ಹಾಗೂ 04-2018 ರಿಂದ 03-2020 ರ ಅವಧಿಯ ಮಧ್ಯಂತರ ಬೋನಸ್ ಎರಡು ಸೇರಿ ಲಭಿಸುತ್ತದೆ.

 

2018 ರ ಬೋನಸ್ ಅಲ್ಲಿ ಮಾರ್ಚ್ 2020 ರ ತನ ಮೆಚುರಿಟಿ ಆದ ವಿಮಾದಾದರ ಬೋನಸ್ ಮೊತ್ತ ಪೂರ್ತಿಯಾಗಿ ಪೇಡ್ ಆಗುತ್ತದೆ ನಂತರ ಅವರಿಗೆ ಪಾವತಿಯಾಗುವ ಬೋನಸ್ ಇರು ವುದಿಲ್ಲ. ಏಪ್ರಿಲ್ 2020 ರ ಮೆಚುರಿಟಿ ಹೊಂದಿ ರುವ ವಿಮಾದಾರರು ಮಾತ್ರ ಮುಂದಿನ ಬೋನಸ್ ಗೆ ಎಲಿಜಿಬಲ್ ಆಗಿರುತ್ತಾರೆ. ಇದಿಷ್ಟು ಬೋನಸ್ ಕುರಿತಾದ ಮಾಹಿತಿ

 


Google News

 

 

WhatsApp Group Join Now
Telegram Group Join Now
Suddi Sante Desk